ಮಲ್ಪೆ: ಸೆಂಟ್ರಿಂಗ್ ಶೀಟ್ ಕಳ್ಳತನ ಪ್ರಕರಣ: ನಾಲ್ವರ ಬಂಧನ

ಮಲ್ಪೆ: ತೆಂಕನಿಡಿಯೂರಿನಲ್ಲಿ ನಡೆದ 1.80 ಲಕ್ಷ ರೂ. ಮೌಲ್ಯದ 80 ಸೆಂಟ್ರಿಂಗ್ ಶೀಟ್ ಮತ್ತು 4 ಪಿಲ್ಲರ್ ಬಾಕ್ಸ್ ಸೆಟ್ ಗಳ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಮಲ್ಪೆ ಪೊಲೀಸರು ಇಂದು ಬಂಧಿಸಿದ್ದಾರೆ.
ಬಂಧಿತರನ್ನು ಪುತ್ತೂರು ಸುಬ್ರಹ್ಮಣ್ಯ ನಗರ ನಿವಾಸಿಗಳಾದ ದೀಪಕ್ (19), ಕಲ್ಯಾಣಪುರ ಮೂಡು ತೋನ್ಸೆ ನಿವಾಸಿ ಸಾಗರ್ (36), ಬಂಟ್ವಾಳ ಫರಂಗೀಪೇಟೆ ನಿವಾಸಿ ಇಮ್ತಿಯಾಜ್ ಎ (39) ಮತ್ತು ಬಜಾಲ್ ನಿವಾಸಿ ಮೊಹಮ್ಮದ್ ಇಕ್ಬಾಲ್ (35) ಎಂದು ಗುರುತಿಸಲಾಗಿದೆ. ಬಂಧಿತರಿಂದ ಕಳ್ಳತನ ಮಾಡಿದ್ದ ಕಟ್ಟಡ ನಿರ್ಮಾಣಕ್ಕೆ ಬಳಸುವ ಕಬ್ಬಿಣದ ಸೆಂಟ್ರಿಂಗ್ ಸಾಮಾಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದೇ ವೇಳೆ ಆರೋಪಿಗಳು ಕೃತ್ಯಕ್ಕೆ ಒಳಸಿದ ಗೂಡ್ಸ್ ವಾಹನ ಹಾಗೂ ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದು ಅವುಗಳ ಅಂದಾಜು ಮೌಲ್ಯ ರೂಪಾಯಿ 1,80,000 ಆಗಿರುತ್ತದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯವು ಆರೋಪಿತರಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

Leave a Reply

Your email address will not be published. Required fields are marked *

error: Content is protected !!