ಅಂಬೇಡ್ಕರ್ ಯುವ ಸೇನೆ: ಮಾನವಹಕ್ಕುಗಳ ಹೋರಾಟಗಾರ ಜಿ. ರಾಜಶೇಖರ್’ರಿಗೆ ನುಡಿ ನಮನ

ಮಲ್ಪೆ ಜು.24(ಉಡುಪಿ ಟೈಮ್ಸ್ ವರದಿ):ಅಂಬೇಡ್ಕರ್ ಯುವ ಸೇನೆ ಜಿಲ್ಲಾ ಘಟಕ ಇದರ ವತಿಯಿಂದ ಇತ್ತೀಚೆಗೆ ನಿಧನರಾದ ಮಾನವ ಹಕ್ಕುಗಳ ಹೋರಾಟಗಾರ, ಚಿಂತಕ ಜಿ.ರಾಜಶೇಖರ್‌ ಅವರಿಗೆ  ಇಂದು ಮಲ್ಪೆಯ ಸರಸ್ವತಿ ಬಯಲು ರಂಗಮಂದಿರದಲ್ಲಿ ನುಡಿ ನಮನ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ದಲಿತ ಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್ ಮಲ್ಪೆ ಅವರು ಮಾತನಾಡಿ ಕಳೆದ ಮೂರು ದಶಕಗಳ ಹಿಂದೆ ದಲಿತ ಚಳುವಳಿಗೆ ರಾಜಶೇಖರ್‌ರವರನ್ನು ಪರಿಚಯಿಸಿದ್ದೆ. ಅವರು ನಮ್ಮನ್ನು ಸಾಕಷ್ಟು ವೈಚಾರಿ ಚಿಂತನೆ ಮತ್ತು ಸೌರ್ಹಾದ ಬದುಕಿನ ಬಗ್ಗೆ ಪಾಠಮಾಡಿ ಬೆಳೆಸಿದ್ದಾರೆ. ಜೊತೆಗೆ ಹಲವಾರು ಧರಣಿ, ಪ್ರತಿಭಟನೆ, ಮೆರವಣಿಗೆ ವಿವಿಧ ವಿಚಾರ ಸಂರ್ಕಿಣದಲ್ಲಿ ನಮ್ಮೊಂದಿಗೆ ಭಾಗಿಯಾಗುವ ಮೂಲಕ ದಲಿತ ಚಳವಳಿ ಕರಾವಳಿಯಲ್ಲಿ ಜೀವಂತವಾಗಿರಲು ಶ್ರಮಿಸಿದ್ದಾರೆ ಎಂದರು.

ಈ ವೇಳೆ ಹಿರಿಯ ದಲಿತ ಮುಖಂಡ ಗಣೇಶ್ ನೆರ್ಗಿ ಅವರು ಮಾತನಾಡಿ, ಕರ್ನಾಟಕದ ಕೋಮು ಸೌಹಾರ್ದತೆಗೆ ಸದಾ ಮಿಡಿಯುತ್ತಿದ್ದ ಜಿ.ರಾಜಶೇಖರ್ ಶ್ರಮಜೀವಿಗಳ ಹೋರಾಟದ ಮಾರ್ಗವನ್ನು ಕಟ್ಟವಲ್ಲಿ ಸಾಕಷ್ಟು ದುಡಿದಿದ್ದಾರೆ ಎಂದರು. 

ಈ ಸಂದರ್ಭದಲ್ಲಿ ಯುವಸೇನೆಯ ಜಿಲ್ಲಾಧ್ಯಕ್ಷ ಹರೀಶ್ ಸಾಲ್ಯಾನ್, ಸಂತೋಷ ಕಪ್ಪೆಟ್ಟು, ಗುಣವಂತ ತೊಟ್ಟಂ, ಕೃಷ್ಣ ಶ್ರೀಯಾನ್ ನೆರ್ಗಿ, ಪ್ರಸಾದ್ ಮಲ್ಪೆ, ರಾಮೋಜಿ ತಿಂಗಳಾಯ, ದಯಾನಂದ ಕಪ್ಪೆಟ್ಟು,  ಸತೀಶ್ ಕಪ್ಪೆಟ್ಟು, ದಿನೇಶ್ ಜವನೆರಕಟ್ಟೆ, ಅನಿಲ್ ಕದಿಕೆ, ಸುರೇಶ್ ಚಿಟ್ಪಾಡಿ, ರಾಜೇಶ್ ಕೆಮ್ಮಣ್ಣು, ಪುನೀತ್ ಕದ್ಕೆ, ಭಗವಾನ್ ಮಲ್ಪೆ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!