ಪೆರ್ಡೂರು: 6 ಲಕ್ಷ ರೂ. ಮೌಲ್ಯದ 20 ಕಿಲೋ ಗಾಂಜಾ ಸಾಗಾಟ- ಮೂವರ ಬಂಧನ
ಉಡುಪಿ ಜು.23 (ಉಡುಪಿ ಟೈಮ್ಸ್ ವರದಿ): ಪೆರ್ಡೂರು ಗ್ರಾಮದ ಜೋಗಿಬೆಟ್ಟು ಎಂಬಲ್ಲಿ 6 ಲಕ್ಷ ರೂ. ಮೌಲ್ಯದ ಗಾಂಜಾ ಸಾಗಾಟ ಮಾಡುತ್ತಿದ್ದ ಮೂವರನ್ನು ಇಂದು ಸೆನ್ ಅಪಾರಧ ಪೊಲೀಸರು ಬಂಧಿಸಿದ್ದಾರೆ.
ಚಿಕ್ಕಮಗಳೂರು ಮೂಲದ ವಿಜಯ ಕುಮಾರ್ ಎಸ್.(23), ನಿಕ್ಷೇಪ್ ಎಸ್.ವಿ.(24), ನಿತೇಶ್ ಕುಮಾರ್, (22) ಬಂಧಿತ ಆರೋಪಿಗಳು. ಆರೋಪಿಗಳಿಂದ ಪೊಲೀಸರು 6,09,000 ರೂ. ಮೌಲ್ಯದ 20 ಕಿಲೋ 614 ಗ್ರಾಂ ತೂಕದ ಗಾಂಜಾ, 6,000 ರೂ ನಗದು, ಕಾರು ಹಾಗೂ 3 ಮೊಬೈಲ್ ಹ್ಯಾಂಡ್ ಸೆಟ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಬಗ್ಗೆ ಖಚಿತ ಮಾಹಿತಿ ಪಡೆದ ಉಡುಪಿ ಜಿಲ್ಲಾ ಸೆನ್ ಅಪರಾಧ ಪೊಲೀಸ್ ಠಾಣಾ ನಿರೀಕ್ಷಕರಾದ ಮಂಜುನಾಥ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಅವರ ನಿರ್ದೇಶನದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್.ಟಿ ಸಿದ್ದಲಿಂಗಪ್ಪ ಇವರ ಮಾರ್ಗದರ್ಶನದಲ್ಲಿ ಪೊಲೀಸ್ ಠಾಣಾ ಸಿಬ್ಬಂದಿಗಳಾದ ಎ.ಎಸ್.ಐ ಕೇಶವ ಗೌಡ, ನಾಗೇಶ, ರಾಘವೇಂದ್ರ ಬ್ರಹ್ಮಾವರ, ಕೃಷ್ಣ ಪ್ರಸಾದ್, ನಾಗೇಶ್, ಪ್ರವೀಣ್, ಜೀವನ್, ಪ್ರಶಾಂತ, ನಿಲೇಶ್, ದೀಕ್ಷಿತ್, ಮಾಯಪ್ಪ, ಜೀಪು ಚಾಲಕ ನವೀನ್ ಚಂದ್ರ ಮತ್ತು ತಾಂತ್ರಿಕ ವಿಭಾಗದ ದಿನೇಶ್ ರವರೊಂದಿಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.