ಇಂದ್ರಾಳಿ: ಹತ್ಯಾ ಆರೋಪಿಗಳಿಬ್ಬರಿಗೆ ನ್ಯಾಯಾಂಗ ಬಂಧನ
ಉಡುಪಿ: ಜು.21 ರಂದು ಸಂಜೆ ಮಣಿಪಾಲ ಠಾಣಾ ವ್ಯಾಪ್ತಿಯ ಇಂದ್ರಾಳಿ ರೈಲ್ವೇ ನಿಲ್ದಾಣದ ಸಮೀಪ ನಡೆದ ಕುಮಾರ್ ಕೊಲೆಯ ಪ್ರಕರಣದ ಆರೋಪಿಗಳಿಗೆ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಇಂದ್ರಾಳಿಯ ಬಾರ್ ನಲ್ಲಿ ಸ್ನೇಹಿತನಾದ ಕುಮಾರ್ ನನ್ನು ತಮಿಳುನಾಡು ಮೂಲದ ನವೀನ್ ಮತ್ತು ವಿಘ್ನೇಶ್ ಅಲಿಯಾಸ್ ಕುಟ್ಟಿ ಕ್ಷುಲಕ ಕಾರಣಕ್ಕೆ ಮರದ ಸೊಂಟೆಯಿಂದ ಹೊಡೆದು ಕೊಲೆಗೈದಿದ್ದರು.
ಆರೋಪಿಗಳನ್ನು ರೈಲ್ವೇ ಪೋಲಿಸರು ಮತ್ತು ಸಾರ್ವಜನಿಕರ ಹಿಡಿದು ಮಣಿಪಾಲ ಪೋಲಿಸರಿಗೆ ಒಪ್ಪಿಸಿದ್ದರು. ನಂತರ ಪ್ರಕರಣವನ್ನು ಹಿರಿಯ ಅಧಿಕಾರಿಗಳು ಉಡುಪಿ ನಗರ ಠಾಣೆಗೆ ವರ್ಗಾಯಿಸಿದ್ದರು.
ಆರೋಪಿ ವಿಘ್ನೇಶ್ ಅಲಿಯಾಸ್ ಕುಟ್ಟಿ ಮೇಲೆ ತಂಜಾವೂರಿನಲ್ಲಿ 5 ವರ್ಷದ ಹಿಂದೆ ಹಲ್ಲೆ ಪ್ರಕರಣವೊಂದ ದಾಖಲಾಗಿತ್ತು. ಆ ಪ್ರಕರಣದಲ್ಲಿ ಆತ ಜೈಲು ಶಿಕ್ಷೆ ಅನುಭವಿಸಿದ್ದನು.