ಉಡುಪಿ: ಮಾಂಡವಿ ರಾಯಲ್ ಪ್ರಿನ್ಸ್’ನಲ್ಲಿ ”ವಿ ಕೇರ್ ಮೆಡಿಕಲ್ಸ್ & ಸರ್ಜಿಕಲ್ಸ್” ಶುಭಾರಂಭ
ಉಡುಪಿ ಜು.22 (ಉಡುಪಿ ಟೈಮ್ಸ್ ವರದಿ): ಕಡಿಯಾಳಿಯ ಮಾಂಡವಿ ರಾಯಲ್ ಪ್ರಿನ್ಸ್ ಕಟ್ಟಡದ ನೆಲ ಮಹಡಿಯಲ್ಲಿ “ವಿ ಕೇರ್ ಮೆಡಿಕಲ್ಸ್ ಆಂಡ್ ಸರ್ಜಿಕಲ್ಸ್” ಶುಕ್ರವಾರ ಉದ್ಘಾಟನೆಗೊಂಡಿತು.
ಉಡುಪಿಯಲ್ಲಿ ನೂತನವಾಗಿ ಆರಂಭಗೊಂಡಿರುವ ವಿ-ಕೇರ್ ಮೆಡಿಕಲ್ಸ್ ಆಂಡ್ ಸರ್ಜಿಕಲ್ಸ್ ನ ಉದ್ಘಾಟನಾ ಕಾರ್ಯಕ್ರಮದಲ್ಲಿ ಆಶಿರ್ವಚನ ನೀಡಿ ಮಾತನಾಡಿದ ಉಡುಪಿಯ ಮದರ್ ಆಫ್ ಸಾರೋಸ್ ಚರ್ಚ್ ನ ಧರ್ಮಗುರು ವ.ರೆ.ಫಾ. ಚಾಲ್ರ್ಸ್ ಮೆನೇಜಸ್ ಅವರು ಶ್ರಮ ಜೀವನಕ್ಕೆ ತಕ್ಕುದಾದ ಫಲ ದೊರಕುವುದು ಖಚಿತ ನ್ಯಾಯ ನೀತಿ ಸತ್ಯದ ಮಾರ್ಗದಲ್ಲಿ ಮುನ್ನಡೆದರೆ ದೇವರ ಕೃಪಾಶೀರ್ವಾದ ನಮ್ಮ ಮೇಲೆ ಸದಾ ಇರಲಿದೆ ಎಂದು ಸಂಸ್ಥೆಗೆ ಶುಭ ಹಾರೈಸಿದರು.
ಸರ್ಜಿಕಲ್ ವಿಭಾಗವನ್ನು ಉದ್ಘಾಟಿಸಿದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಮಾತನಾಡಿ, ಆರೋಗ್ಯಕ್ಕೆ ಹೆಚ್ಚು ಒತ್ತು ಕೊಡುವಂತಹ ಕಾಲ ಘಟ್ಟದಲ್ಲಿ ನಾವಿದ್ದೇವೆ. ನಮಗೆ ಕಾಯಿಲೆ ಬಂದ ಸಂದರ್ಭದಲ್ಲಿ ಸಾವು ನೋವಿನ ಪ್ರಮಾಣವನ್ನು ಕಡಿಮೆ ಮಾಡಬೇಕಾದರೆ ಈ ರೀತಿಯ ಉತ್ತಮ ಗುಣಮಟ್ಟದ ಅರೋಗ್ಯ ಸೇವೆ ಮತ್ತು ಪರಿಕರಗಳನ್ನು ಪೂರೈಸುವ ಮಳಿಗೆಗಳು ಇರಬೇಕು. ಮನುಷ್ಯನ ಆರೋಗ್ಯ ವೃದ್ಧಿಸುವ ಹಾಗೂ ಅದಕ್ಕೆ ಸಂಬಂಧಪಟ್ಟ ವ್ಯವಹಾರ ವನ್ನು ಡಾಲ್ಫಿ ಲೂಯಿಸ್ ಅವರು ಆರಂಭಿಸಿದ್ದಾರೆ. ಅವರ ಸಂಸ್ಥೆಗೆ ಉತ್ತಮ ಯಶಸ್ಸು ಸಿಗಲಿ ಎಂದು ಶುಭ ಹಾರೈಸಿದರು.
ಈ ವೇಳೆ ಮಾಂಡವಿ ಬ್ಯುಲ್ಡರ್ಸ್ ಆಂಡ್ ಡೆವಲಪರ್ಸ್ ನ ಎಂ.ಡಿ ಡಾ. ಜೆರ್ರಿ ವಿನ್ಸೆಂಟ್ ಡಯಾಸ್ ಅವರು ಮಳಿಗೆಯನ್ನು ಹಾಗೂ ಮೆಡಿಕಲ್ ವಿಭಾಗವನ್ನು ಉದ್ಯಮಿ ಲ್ಯಾನ್ಸಿ ಡಿಸೋಜ ಕಿನ್ನಿಗೋಳಿ ಉದ್ಘಾಟಿಸಿದರು.ತಮ್ಮ ಸಂಸ್ಥೆಯ ಬಗ್ಗೆ ಮಾಹಿತಿ ನೀಡಿದ ಮಾಲಕರಾದ ಡಾಲ್ಫಿ ಲೂವಿಸ್ ಅವರು, ವಿಕೇರ್ ಮೆಡಿಕಲ್ ನಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲಾ ಬಗೆಯ ಸರ್ಜಿಕಲ್ ಸಲಕರಣೆಗಳು, ಅಲೋಪತಿ ಔಷಧಗಳು, ಸರ್ಜಿಕಲ್ ವೀಲ್ ಚೆಯರ್ ಗಳು, ವಾಕರ್ ಚೆಯರ್ ವಿದ್ ಪೋಟ್, ಬೆಡ್, ಆರ್ಥೋಪೆಡಿಕ್ ಗೆ ಸಂಬಂಧಿಸಿದ ಎಲ್ಲಾ ಸಪೋರ್ಟ್ ಗಳು ಸಿಗಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಾಯಿರಾಧ ಗ್ರೂಪ್ ಕನ್ಸನ್ರ್ಸ್ ನ ವ್ಯವಸ್ಥಾಪಕ ನಿರ್ದೇಶಕ ಮನೋಹರ ಎಸ್. ಶೆಟ್ಟಿ, ಜೋಯ್ ಸ್ಟನ್ ಲೂವಿಸ್, ಜೆಸ್ಸಿಕಾ ಲೂವಿಸ್, ಲಿಯಾನ್ ಲೂವಿಸ್ ಮೊದಲಾದವರು ಉಪಸ್ಥಿತರಿದ್ದರು. ಅನ್ಸಿಲ್ಲಾ ಲೂವಿಸ್ ಸ್ವಾಗತಿಸಿದರು, ಯೋಗೀಶ್ ಕೊಳಲಗಿರಿ ನಿರೂಪಿಸಿದರು.
Superb all’the best and congratulations
Best of luck for your new business venture dear Lewis’s !
Congratulations!!