ಕುಂದಾಪುರ: ನವ ವಿವಾಹಿತ, ಖಾಸಗಿ ಕಾಲೇಜಿನ ಉಪನ್ಯಾಸಕ ಆತ್ಮಹತ್ಯೆ
ಕುಂದಾಪುರ: ಖಾಸಗಿ ಕಾಲೇಜೊಂದರ ಉಪನ್ಯಾಸಕ, ನವ ವಿವಾಹಿತ ಇಂದು ಬೆಳಿಗ್ಗೆ ಅಡುಗೆ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ.
ಆನಂದ ಗೌಡ(29) ಆತ್ಮಹತ್ಯೆ ಮಾಡಿಕೊಂಡವರು.
ಕಳೆದ ಎರಡು ತಿಂಗಳ ಹಿಂದೆಯಷ್ಟೇ ಕುಂದಾಪುರದ ಎಕ್ಸಾಲೆಂಟ್ ಖಾಸಗಿ ಕಾಲೇಜಿನ ನಿಶ್ವಿತಾ ಎಂಬವರೊಂದಿಗೆ ಪ್ರೀತಿಸಿ ವಿವಾಹವಾಗಿದ್ದರು. ಇಂದು ಬೆಳಿಗ್ಗೆ ತಾವು ವಾಸವಿದ್ದ ಮನೆಯ ಅಡುಗೆ ಕೋಣೆಯಲ್ಲಿ ನೇಣುಬೀಗಿದ ಸ್ಥಿತಿಯಲ್ಲಿ ಆನಂದ ಗೌಡ ಪತ್ತೆಯಾಗಿದ್ದಾರೆ. ಆತ್ಮಹತ್ಯೆಗೆ ಕಾರಣ ಇನ್ನಷ್ಟೇ ತಿಳಿದು ಬರಬೇಕಾಗಿದ್ದು, ಕುಂದಾಪುರ ಪೊಲೀಸರು ಸ್ಥಳಕ್ಕೆ ಆಗಮಿಸಿ ಮುಂದಿನ ತನಿಖೆ ನಡೆಸುತ್ತಿದ್ದಾರೆ.
ಯಾವುದೇ ಸಮಸ್ಯೆಗೆ ಆತ್ಮಹತ್ಯೆಯೊಂದೇ ಪರಿಹಾರವಲ್ಲ. ಆತ್ಮಹತ್ಯೆ ಮಾಡಿಕೊಳ್ಳುವ ಸಂಭವನೀಯ ವ್ಯಕ್ತಿಗಳ ಗಮನಕ್ಕೆ ಸಹಾಯವಾಣಿ ನಂಬರ್- 0802572 2573, ಸಮರ್ಥನಂ ಆವರಣ,15ನೇ ಕ್ರಾಸ್, ಹೆಚ್‍ಎಸ್‍ಆರ್ ಸೆಕ್ಟರ್-4,ಬೆಂಗಳೂರು.