ಪರ್ಕಳ ಹದಗೆಟ್ಟ ರಸ್ತೆ ವಿರುದ್ಧ ಜು.24 ರಂದು ಸಮಾನಮನಸ್ಕರ ಪ್ರತಿಭಟನೆ
ಪರ್ಕಳ ಜು.23: ಹದಗೆಟ್ಟ ರಸ್ತೆ ವಿರುದ್ಧ ಮನೋವೈದ್ಯ ಡಾ.ಪಿ.ವಿ.ಭಂಡಾರಿ ಅವರ ನೇತೃತ್ವದಲ್ಲಿ ಪರ್ಕಳದ ಗೋಪಾಲಕೃಷ್ಣ ದೇವಸ್ಥಾನದ ಎದುರು ಜು.24 ರಂದು ಧರಣಿ ನಡೆಯಲಿದೆ.
ಉಡುಪಿಯ ಹಲವೆಡೆ ರಸ್ತೆಗಳು ಹದಗೆಟ್ಟಿದೆ. ಅದರಲ್ಲೂ ಪರ್ಕಳ ರಾಷ್ಟ್ರೀಯ ಹೆದ್ದಾರಿ ಅವೈಜ್ಞಾನಿಕ ಕಾಮಗಾರಿಯಿಂದ ನಿತ್ಯ ಅಪಘಾತಗಳು ಸಂಭವಿಸುವುದಲ್ಲದೆ ,ಟ್ರಾಫಿಕ್ ಜಾಮ್ ಕೂಡಾ ಉಂಟಾಗಿದೆ. ಆದ್ದರಿಂದ ನಾಳೆ ಜು.24 ರಂದು ಧರಣಿ ಹಮ್ಮಿಕೊಳ್ಳಲಾಗಿದೆ. ಸಮಾನಮನಸ್ಕರು, ಸ್ಥಳೀಯರು ಮತ್ತು ವಾಹನ ಸವಾರರು ಧರಣಿಗೆ ಬೆಂಬಲ ಸೂಚಿಸಿದ್ದಾರೆ ಎಂದು ಮಾಧ್ಯಮ ಹೇಳಿಕೆಯಲ್ಲಿ ತಿಳಿಸಲಾಗಿದೆ.