ಉಡುಪಿ: ದೊಡ್ಡಣಗುಡ್ಡೆ ಕರಂಬಳ್ಳಿ ನಿವಾಸಿ ನಾಪತ್ತೆ
ಉಡುಪಿ ಜು.23(ಉಡುಪಿ ಟೈಮ್ಸ್ ವರದಿ): ದೊಡ್ಡಣಗುಡ್ಡೆಯ ಕರಂಬಳ್ಳಿ ಜನತಾ ಕಾಲೋನಿಯ ವೆಂಟೇಶ್ ನಾಗರಾಜ್ ಎಂಬವರು ಉಡುಪಿ ಸಿಟಿ ಬಸ್ ನಿಲ್ದಾಣದಿಂದ ನಾಪತ್ತೆಯಾಗಿದ್ದಾರೆ.
ವೆಂಟೇಶ್ ನಾಗರಾಜ್ (32) ಅವರು ಜು.19 ರಂದು ಉಡುಪಿ ಸಿಟಿ ಬಸ್ ನಿಲ್ದಾಣದಲ್ಲಿ ಭಾಸ್ಕರ ಎಂಬುವವರಿಗೆ ಅವರ ದ್ವಿಚಕ್ರ ವಾಹನವನ್ನು ನೀಡಿ ಹೋದವರು ವಾಪಾಸು ಮನೆಗೆ ಬಾರದೇ, ಸಂಬಂಧಿಕರ ಮನೆಗೂ ಹೋಗದೇ, ಮೊಬೈಲ್ ಸಂಪರ್ಕಕ್ಕೂ ಸಿಗದೇ ಕಾಣೆಯಾಗಿದ್ದಾರೆ.
ಈ ಬಗ್ಗೆ ವೆಂಟೇಶ್ ಅವರ ಪತ್ನಿ ರೇಖಾ ಎಂಬವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.