ಕುಂದಾಪುರ: ಜಾಗದ ತಕರಾರು- ಹಲ್ಲೆಗೈದು ಜೀವ ಬೆದರಿಕೆ ದೂರು ದಾಖಲು
ಕುಂದಾಪುರ ಜು.22(ಉಡುಪಿ ಟೈಮ್ಸ್ ವರದಿ): ಜಾಗದ ವಿಚಾರದ ತಕರಾರಿಗೆ ಸಂಬಂಧಿಸಿದಂತೆ ಗಲಾಟೆ ನಡೆಸಿ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿರುವುದಾಗಿ ಕುಂದಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ.
ಈ ಬಗ್ಗೆ ಕೋಟೇಶ್ವರದ ದಾಕ್ಷಾಯಿಣಿ ಎಂಬವರು ಪೊಲೀಸರಿಗೆ ದೂರು ನೀಡಿದ್ದು ಅದರಂತೆ ದಾಕ್ಷಾಯಿಣಿ ಅವರು ಕೋಟೆಶ್ವರ ಗ್ರಾಮದ ಸ.ನಂ 16/1 ರಲ್ಲಿ 0.09 ಎಕ್ರೆ, ಸ.ನಂ 16/7 ರಲ್ಲಿ 0.11 ಎಕ್ರೆ, ಮತ್ತು ಸ.ನಂ 15/9 ರಲ್ಲಿ 0.04 ಎಕ್ರೆ ಸ್ಥಿರಾಸ್ಥಿ ಹೊಂದಿದ್ದಾರೆ. ಈ ಸ್ಥಿರಾಸ್ಥಿಗೆ ಸಂಬಂದಿಸಿದಂತೆ ನೆರೆಮನೆಯ ನಿವಾಸಿಗಳಾದ ಸೀತಾರಾಮ ಐತಾಳ್, ನಾಗರತ್ನ ಐತಾಳ್, ಶ್ರುತಿ ಇವರೊಂದಿಗೆ ತಕರಾರು ಇದ್ದು, ಇದೇ ವಿಚಾರದಲ್ಲಿ ಮಾ.22ರಂದು ಶ್ರುತಿರವರು ತನ್ನ ಸ್ಕೂಟಿಯಲ್ಲಿ ದಾಕ್ಷಾಯಿಣಿ ಅವರ ಜಾಗದ ಮೂಲಕ ತನ್ನ ಮನೆಗೆ ಹೋಗಿದ್ದಾರೆ. ಈ ಬಗ್ಗೆ ವಿಚಾರಿಸಿದಾಗ ಸೀತಾರಾಮ ಐತಾಳ್ ಮತ್ತು ನಾಗರತ್ನ ಐತಾಳ್ ಅವರು ಜಾಗಕ್ಕೆ ಅಕ್ರಮವಾಗಿ ಪ್ರವೇಶಿಸಿ, ಅಡ್ಡಗಟ್ಟಿ ಅವಾಚ್ಯ ಶಬ್ದದಿಂದ ಬೈಯ್ದು, ಹಲ್ಲೆ ಮಾಡಿದ್ದಾರೆ. ಈ ವೇಳೆ ಗಲಾಟೆ ಬಿಡಿಸಲು ಬಂದ ದಾಕ್ಷಾಯಿನಿ ಅವರ ಗಂಡ ಹಾಗೂ ಮಕ್ಕಳ ಮೇಲೆ ಕೂಡಾ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.