ಕುಂದಾಪುರ: ಲಂಗರು ಹಾಕಿದ್ದ ಬೋಟ್’ಗಳ ಬ್ಯಾಟರಿ ಕಳವು
ಕುಂದಾಪುರ, ಜು.22(ಉಡುಪಿ ಟೈಮ್ಸ್ ವರದಿ): ಕುಂದಾಪುರ ಕಸಬ ಗ್ರಾಮದ ಕೋಡಿ ಸಿ ವಾಕ್ ಬಳಿ ಲಂಗರು ಹಾಕಿದ್ದ 2 ಬೋಟ್ ಗಳ 32 ಸಾವಿರ ರೂ. ಮೌಲ್ಯದ 4 ಬ್ಯಾಟರಿಗಳನ್ನು ಕಳವು ಮಾಡಿರುವ ಬಗ್ಗೆ ಕುಂದಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ.
ಈ ಬಗ್ಗೆ ಬ್ಯಾಟರಿ ಕಳ್ಳತನ ವಾಗಿರುವ ಬೋಟ್ ಗಳ ಮಾಲಕರಾದ ಅಶೋಕ ಪೂಜಾರಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಅದರಂತೆ ಅಶೋಕ ಪೂಜಾರಿ ಅವರು “ಅದಿತಿ” ಎಂಬ ಹೆಸರಿನ 370 ಮಾದರಿಯ ಮೀನುಗಾರಿಕಾ ಬೋಟಿನ ಮಾಲೀಕರಾಗಿದ್ದು, ಇವರೊಂದಿಗೆ “ಅಮ್ಮ ಚಕ್ರಮ್ಮ” ಎಂಬ ಹೆಸರಿನ ಬೋಟಿನ ಮಾಲೀಕರಾದ ಸುರೇಶ ಖಾರ್ವಿ ಎಂಬುವವರು ಮಳೆಗಾಲದ ಸಮಯವಾದ್ದರಿಂದ ತಮ್ಮ ಮೀನುಗಾರಿಕಾ ಬೋಟುಗಳನ್ನು ಕುಂದಾಪುರ ಕಸಬ ಗ್ರಾಮದ ಕೋಡಿ ಸಿ ವಾಕ್ ಬಳಿ ಲಂಗರು ಹಾಕಿದ್ದರು.
ಎಂದಿನಂತೆ ಜು.17 ರಂದು ಬೆಳಿಗ್ಗೆ ಅಶೋಕ ಪೂಜಾರಿ ಹಾಗೂ ನೆರೆ ಮನೆಯ ಸುರೇಶ ಖಾರ್ವಿರವರು ಬೋಟ್ ನ ಎಂಜಿನ್ ಸ್ಟಾರ್ಟ ಮಾಡುವ ಸಲುವಾಗಿ ಬೋಟ್ ನಿಲ್ಲಿಸಿದ ಸ್ಥಳಕ್ಕೆ ತೆರಳಿ ಇಂಜಿನ್ ಸ್ಟಾರ್ಟ್ ಮಾಡುವಾಗ ಎಂಜಿನ್ ಸ್ಟಾರ್ಟ್ ಆಗದೇ ಇದ್ದುದರಿಂದ ಬೋಟ್’ನ ಬ್ಯಾಟರಿ ಬಾಕ್ಸ್ ತೆಗೆದು ನೋಡಿದಾಗ 2ಬೋಟ್ ನ ತಲಾ 2ಬ್ಯಾಟರಿಗಳು ಕಳವಾಗಿರುವುದು ಗಮನಕ್ಕೆ ಬಂದಿದೆ. ಅದರಂತೆ ಜು.16 ರಂದು ರಾತ್ರಿ ಕೋಡಿ ಸಿ ವಾಕ್ ಬಳಿ ಬಂದ ಕಳ್ಳರು 8,000 ಮೌಲ್ಯದ 2 ಬೋಟ್ ನ ತಲಾ 2 ಬ್ಯಾಟರಿಯಂತೆ ಒಟ್ಟು 4 ಬ್ಯಾಟರಿಯನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ಕಳವಾದ ಬ್ಯಾಟರಿಗಳ ಒಟ್ಟು ಮೌಲ್ಯ 32,000 ರೂ. ಆಗಿರುತ್ತದೆ ಎಂಬುದಾಗಿ ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.