ಬೈಂದೂರು: 45ರ ಅನ್ಯಕೋಮಿನ ವ್ಯಕ್ತಿ ಜೊತೆ 28ರ ಯುವತಿ ಲಾಡ್ಜ್ ನಲ್ಲಿ ಪತ್ತೆ
ಬೈಂದೂರು: ಇಲ್ಲಿನ ಉಪ್ಪುಂದ ವಸತಿ ಗೃಹವೊಂದಕ್ಕೆ ಭಿನ್ನಮತೀಯ ಜೋಡಿಗಳು ಬಂದ ವಿಷಯ ತಿಳಿದ ಹಿಂದೂ ಸಂಘಟನೆಯ ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಬೈಂದೂರು ಪೊಲೀಸರು ಸ್ಥಳಕ್ಕೆ ಆಗಮಿಸಿ ಇಬ್ಬರನ್ನೂ ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಿದ್ದಾರೆ.
ಉಳ್ಳಾಲ ಬೈಲು ನಿವಾಸಿ ಅಮೀರ್ ಅಲಿ(45), ಉಳ್ಳಾಲದ 28 ವರ್ಷದ ಯುವತಿಯೊಂದಿಗೆ ಆಗಮಿಸಿದ್ದರು ಎಂದು ತಿಳಿದು ಬಂದಿದೆ.
ಅಮೀರ್ ಅಲಿ ಗುಜರಿ ವ್ಯಾಪಾರಿಯಾಗಿದ್ದು, ತೊಕ್ಕುಟ್ಟುವಿನಲ್ಲಿ ಗುಜರಿ ಅಂಗಡಿ ಇಟ್ಟುಕೊಂಡಿದ್ದಾನೆ. ಯುವತಿ ಆತನ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಆಕೆಯ ಒಪ್ಪಿಗೆಯಿಂದಲೇ ಲಾಡ್ಜ್ ಗೆ ಕರೆತಂದಿರುವುದಾಗಿ ತಿಳಿಸಲಾಗಿದೆ.