ಕಾರ್ಕಳ: ವರದಕ್ಷಿಣೆ ಕಿರುಕುಳ- ಪತಿ ವಿರುದ್ಧ ಪೊಲೀಸರಿಗೆ ದೂರು

ಕಾರ್ಕಳ ಜು.22(ಉಡುಪಿ ಟೈಮ್ಸ್ ವರದಿ): ವರದಕ್ಷಿಣೆ ಕಿರುಕುಳ ನೀಡಿರುವ ಕುರಿತು ಕಾರ್ಕಳದ ಕೌಡೂರು ಗ್ರಾಮದ ಸೌಮ್ಯ ಎಂಬವರು ತಮ್ಮ ಪತಿ ಸುನಿಲ್ ಎಂಬಾತನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.

ಸೌಮ್ಯ ಅವರು 2019 ರ ಮೇ.12 ರಂದು ಕಾರ್ಕಳ ಪೆರ್ವಾಜೆಯಲ್ಲಿ ಸುನಿಲ್ ಎಂಬಾತನನ್ನು ಮದುವೆಯಾಗಿದ್ದು, ವಿವಾಹದ1 ವರ್ಷದ ಬಳಿಕ ಹಣಕ್ಕಾಗಿ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡಿ 

5ಲಕ್ಷ ರೂ ವರದಕ್ಷಿಣೆ ನೀಡಬೇಕು ಎಂದು ಹಿಂಸಿಸಿದ್ದಾನೆ. ಈ ವೇಳೆ ಸೌಮ್ಯ ಅವರು 80,000 ರೂ. ಹಣವನ್ನು ನೀಡಿದ್ದಾರೆ.

ಮದುವೆಯಾದ ಬಳಿಕ ಸೌಮ್ಯ ಅವರು ತಮ್ಮ ತಾಯಿ ಮನೆಯಲ್ಲಿಯೇ ಇದ್ದ ವೇಳೆ ಸುನಿಲ್ ತನ್ನ ಮನೆಗೆ ಕರೆದುಕೊಂಡು ಹೋಗಿರುವುದಿಲ್ಲ.ಇದರಿಂದ ನೊಂದು ಸೌಮ್ಯ ಅವರು ಆತ್ಮಹತ್ಯೆಗೂ ಯತ್ನಿಸಿದ್ದರು. 

ಬಳಿಕ ಇತ್ತೀಚಿಗೆ ಜೂ.20 ರಂದು  ಕಾರ್ಕಳ ನಗರ ಠಾಣೆಗೆ ದೂರು ನೀಡಿದ ಮೇರೆಗೆ ಸುನೀಲ್ ಪತ್ನಿಯನ್ನು ಉತ್ತಮವಾಗಿ ನೋಡಿಕೊಳ್ಳುವುದಾಗಿ ತಿಳಿಸಿದ್ದ ಆದರೆ ಬಳಿಕ ಫೋನ್ ಮಾಡಿದಾಗ ಇನ್ನೂ 5 ಲಕ್ಷ ರೂ ವರದಕ್ಷಿಣೆ ಕೊಡುವಂತೆ ಜೀವ ಬೆದರಿಕೆ ಹಾಕಿ ಮಾನಸಿಕ ಹಿಂಸೆ ನೀಡಿರುವುದಾಗಿ ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!