ಕುಂದಾಪುರ: ಅಂದರ್ ಬಾಹರ್ ಅಡ್ಡೆಗೆ ದಾಳಿ- ನಾಲ್ವರು ವಶಕ್ಕೆ, ಓರ್ವ ಪರಾರಿ

ಕುಂದಾಪುರ: ಇಸ್ಪೀಟು ಅಂದರ್ ಬಾಹರ್ ಜುಗಾರಿ ಅಡ್ಡೆಯ ಮೇಲೆ ದಾಳಿ ನಡೆಸಿದ ಪೊಲೀಸರು, ನಾಲ್ವರನ್ನು ವಶಕ್ಕೆ ಪಡೆದು 2100 ರೂ.‌ ಹಣ ಸ್ವಾಧೀನಪಡಿಸಿಕೊಂಡ ಘಟನೆ ಕುಂದಾಪುರ ತಾಲೂಕಿನ ಕರ್ಕುಂಜೆ ಗ್ರಾಮದ ಜಾಡ್‌ಕಟ್ಟು ಎಂಬಲ್ಲಿ ಜುಲೈ 21ರಂದು ನಡೆದಿದೆ.
ಆರೋಪಿಗಳನ್ನು‌ ಸ್ಥಳೀಯ ನಿವಾಸಿಗಳಾದ ರಾಮ, ಶಂಕರ ಮೊಗವೀರ, ಭಾಸ್ಕರ ಪೂಜಾರಿ ಹಾಗೂ ಶಿವರಾಮ ಎಂದು ಗುರುತಿಸಲಾಗಿದೆ. ಇವರು ಜಾಡ್‌ಕಟ್ಟು ಎಂಬಲ್ಲಿ ಅಂದರ್ ಬಾಹರ್ ಜುಗಾರಿ ಆಟದಲ್ಲಿ ತೊಡಗಿದ್ದರು‌. ಈ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಕುಂದಾಪುರ ಪೊಲೀಸರು ದಾಳಿ ನಡೆಸಿ, ನಾಲ್ವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಓರ್ವ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ‌‌ ಎನ್ನಲಾಗಿದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   

Leave a Reply

Your email address will not be published. Required fields are marked *

error: Content is protected !!