ಎಲ್ಲಾ ಕಾಂಗ್ರೆಸ್ ನಾಯಕರನ್ನು ಇ.ಡಿ ತನಿಖೆಗೊಳಪಡಿಸಬೇಕು- ಸಚಿವ ಸುನಿಲ್ ಕುಮಾರ್

ಬೆಂಗಳೂರು ಜು.21: ಕಾಂಗ್ರೆಸ್ ನವರು ದೇಶದ ಆಡಳಿತದಿಂದ ಹಿಡಿದು ಸ್ಥಳೀಯ ಆಡಳಿತದವರೆಗೂ ಲೂಟಿ ಮಾಡಿದ್ದಾರೆ. ಹಾಗಾಗಿ ಎಲ್ಲಾ ಕಾಂಗ್ರೆಸ್ ನಾಯಕರನ್ನು ಇ.ಡಿ ತನಿಖೆಗೊಳಪಡಿಸಬೇಕು ಎಂದು ಸಚಿವ ಸುನಿಲ್ ಕುಮಾರ್ ಅವರು ಹೇಳಿದ್ದಾರೆ.

ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ದೇಶದ ಆಡಳಿತದಿಂದ ಹಿಡಿದು ಸ್ಥಳೀಯ ಆಡಳಿತದ ವರೆಗೂ ಲೂಟಿ ಮಾಡಿದ್ದಾರೆ. ಸೋನಿಯಾ, ರಾಹುಲ್ ಮಾತ್ರವಲ್ಲ, ಎಲ್ಲಾ ಕಾಂಗ್ರೆಸ್ ನಾಯಕರನ್ನು ಇಡಿ ತನಿಖೆಗೆ ಒಳಪಡಿಸಬೇಕು ಎಂದರು. ಈ ವೇಳೆ ನೆಹರು, ಇಂದಿರಾ ಗಾಂಧಿ, ಸೋನಿಯಾ ಗಾಂಧಿ ಅವರ ಹೆಸರು ಹೇಳಿಕೊಂಡು ಮೂರು ನಾಲ್ಕು ತಲೆಮಾರಿಗೆ ಆಗುವಷ್ಟು ಮಾಡಿಕೊಂಡಿದ್ದೇವೆ ಎಂಬ ಕಾಂಗ್ರೆಸ್ ಮುಖಂಡ  ರಮೇಶ್ ಕುಮಾರ್ ಹೇಳಿಗೆ ಪ್ರತಿಕ್ರಿಯೆ ನೀಡಿದ ಅವರು 

ರಮೇಶ್ ಕುಮಾರ್ ಅವರ ಹೇಳಿಕೆಯನ್ನು ಸ್ವಾಗತಿಸುತ್ತೇನೆ. ಕಾಂಗ್ರೆಸ್ ಭ್ರಷ್ಟಾಚಾರ ನಮ್ಮ ಹೇಳಿಕೆ ಅಲ್ಲ, ರಮೇಶ್ ಕುಮಾರ್ ಹೇಳಿಕೆ ಮೂಲಕ ಸ್ಪಷ್ಟವಾಗಿದೆ. ಎಷ್ಟು ಪ್ರಮಾಣದಲ್ಲಿ ಆಸ್ತಿ ಮಾಡಿದ್ದಾರೆ ಅಂತ ಬಿಜೆಪಿ ಆರೋಪ‌ ಮಾಡೋದಲ್ಲ. ಸ್ವತಃ ಕಾಂಗ್ರೆಸ್ ಹಿರಿಯ ನಾಯಕರೇ ಒಪ್ಪಿಕೊಂಡಿದ್ದಾರೆ. ಒಂದಲ್ಲಾ ಒಂದು ದಿನ ಸತ್ಯ ಹೊರಬರಬೇಕು. ಇಂದು ರಮೇಶ್ ಕುಮಾರ್ ಹೇಳಿಕೆ ರೂಪದಲ್ಲಿ ಹೊರಬಂದಿದೆ. ರಮೇಶ್ ಕುಮಾರ್ ತಮ್ಮ ಸಹಜವಾದ ಭಾಷಣದ ವೇಳೆ ಬಹಳ ದಿನದ ಬಳಿಕ ಸತ್ಯ ಹೇಳಿದ್ದಾರೆ ಎಂದು ಟೀಕಿಸಿದ್ದಾರೆ.

ಇನ್ನು ಸೋನಿಯಾ ಗಾಂಧಿ ಅವರನ್ನು ಇಡಿ ವಿಚಾರಣೆಗೆ ಸಮನ್ಸ್ ನೀಡಿರುವುದನ್ನು ಖಂಡಿಸಿ ನಡೆಸುತ್ತಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ರಮೇಶ್ ಕುಮಾರ್, ನೆಹರು, ಇಂದಿರಾ ಗಾಂಧಿ, ಸೋನಿಯಾ ಗಾಂಧಿ ಅವರ ಹೆಸರು ಹೇಳಿಕೊಂಡು ಮೂರು ನಾಲ್ಕು ತಲೆಮಾರಿಗೆ ಆಗುವಷ್ಟು ಮಾಡಿಕೊಂಡಿದ್ದೇವೆ. ಈಗ ನಮಗೆ ಅದರ ಋಣ ತೀರಿಸುವ ಸಮಯ ಬಂದಿದೆ. ಕಿಂಚಿತ್ ತ್ಯಾಗಕ್ಕೆ ನಾವು ತಯಾರಾಗದಿದ್ದರೆ ತಿನ್ನುವ ಅನ್ನಕ್ಕೆ ಹುಳ ಬೀಳುತ್ತದೆ ಎಂದಿದ್ದರು.

1 thought on “ಎಲ್ಲಾ ಕಾಂಗ್ರೆಸ್ ನಾಯಕರನ್ನು ಇ.ಡಿ ತನಿಖೆಗೊಳಪಡಿಸಬೇಕು- ಸಚಿವ ಸುನಿಲ್ ಕುಮಾರ್

Leave a Reply

Your email address will not be published. Required fields are marked *

error: Content is protected !!