ಮುಂಬೈ-ಮಂಗಳೂರು ನಡುವೆ ಇನ್ನೊಂದು ಸಾಪ್ತಾಹಿಕ ವಿಶೇಷ ರೈಲು

ಉಡುಪಿ ಜು.21: ಮುಂಬೈಯ ಲೋಕಮಾನ್ಯ ತಿಲಕ್ ಹಾಗೂ ಮಂಗಳೂರು ಜಂಕ್ಷನ್ ನಡುವೆ ಇನ್ನೊಂದು ಸಾಪ್ತಾಹಿಕ ಗಣಪತಿ ವಿಶೇಷ ರೈಲು ಓಡಿಸಲು ಕೊಂಕಣ ರೈಲ್ವೆ ನಿರ್ಧರಿಸಿದೆ.

ಈ ಬಗ್ಗೆ ಕೊಂಕಣ ರೈಲ್ವೆ ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದು, ಗಣೇಶ ಚತುರ್ಥಿ ಸಂದರ್ಭ ಜನರ ವಿಶೇಷ ಬೇಡಿಕೆಯ ಹಿನ್ನೆಲೆಯಲ್ಲಿ ಕೊಂಕಣ ರೈಲ್ವೆಯು ಸೆಂಟ್ರಲ್ ರೈಲ್ವೆಯ ಸಹಯೋಗ ದೊಂದಿಗೆ ಈ ವಿಶೇಷ ರೈಲು ಓಡಿಸಲು ನಿರ್ಧರಿಸಲಾಗಿದ್ದು, ಈ ರೈಲು ಒಟ್ಟು 22 ಕೋಚ್‌ಗಳೊಂದಿಗೆ ಓಡಲಿದೆ.

ರೈಲು ನಂ.01165 ಲೋಕಮಾನ್ಯ ತಿಲಕ್- ಮಂಗಳೂರು ಜಂಕ್ಷನ್ ಎಸಿ ವಿಶೇಷ ಸಾಪ್ತಾಹಿಕ ರೈಲು ಆ. 16, 23, 30  ಸೆ.6 ರ ಪ್ರತಿ ಮಂಗಳವಾರ ಮಧ್ಯರಾತ್ರಿ 12.45 ಕ್ಕೆ ಮುಂಬೈಯಿಂದ ಪ್ರಯಾಣ ಬೆಳೆಸಲಿದ್ದು, ಅದೇ ದಿನ ಸಂಜೆ 7.30 ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ.

ರೈಲು ನಂ.01166 ಮಂಗಳೂರು ಜಂಕ್ಷನ್- ಲೋಕಮಾನ್ಯ ತಿಲಕ್ ಎಸಿ ವಿಶೇಷ ಸಾಪ್ತಾಹಿಕ ರೈಲು ಆ.16, 23, 30 ಹಾಗೂ ಸೆ.6 ರಂದು ಪ್ರತಿ ಮಂಗಳವಾರ ರಾತ್ರಿ 10.20 ಕ್ಕೆ ಮಂಗಳೂರು ಜಂಕ್ಷನ್‌ನಿಂದ ಪ್ರಯಾಣ ಬೆಳೆಸಲಿದ್ದು, ಮರುದಿನ ಸಂಜೆ 6.30 ಕ್ಕೆ ಮುಂಬೈ ತಲುಪಲಿದೆ.

ಈ ರೈಲಿಗೆ ಥಾಣೆ, ಪನ್ವೇಲ್,ರೋಹಾ, ವೀರ್, ಖೇಡ್, ಚಿಪ್ಳುಣ್, ಸಂಗಮೇಶ್ವರ ರೋಡ್, ರತ್ನಗಿರಿ, ರಾಜಪುರ್ ರೋಡ್, ವೈಭವವಾಡಿ ರೋಡ್, ಕಂಕವೇಲಿ, ಸಿಂಧುದುರ್ಗ, ಕುಡಾಲ್, ಸಾವಂತವಾಡಿ ರೋಡ್, ತೀವಿಂ, ಕರ್ಮಾಲಿ, ಮಡಗಾಂವ್ ಜಂಕ್ಷನ್, ಕಾರವಾರ, ಅಂಕೋಲ, ಗೋಕರ್ಣ ರೋಡ್, ಕುಮಟ, ಹೊನ್ನಾವರ, ಮುರ್ಡೇಶ್ವರ, ಭಟ್ಕಳ, ಮೂಕಾಂಬಿಕಾ ರೋಡ್ ಬೈಂದೂರು, ಕುಂದಾಪುರ, ಉಡುಪಿ, ಮುಲ್ಕಿ ಹಾಗೂ ಸುರತ್ಕಲ್ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರುತ್ತದೆ ಎಂದು ತಿಳಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!