ಪೊಲೀಸ್ ಹೆಡ್ಕಾನ್ಸ್ಟೇಬಲ್ ಚಾಲಕ, ಸಹಾಯಕ ವೈರ್ಲೆಸ್, ಟೆಲಿ-ಪ್ರಿಂಟರ್ ಆಪರೇಟರ್- ಅರ್ಜಿ ಆಹ್ವಾನ
ಉಡುಪಿ, ಜು. 20: ಸ್ಟಾಫ್ ಸೆಲೆಕ್ಷನ್ ಕಮೀಷನ್ ಕೇಂದ್ರ ನೇಮಕಾತಿ ಪ್ರಾಧಿಕಾರದ ವತಿಯಿಂದ ದೆಹಲಿ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಚಾಲಕರ ಹುದ್ದೆಗಳ ನೇಮಕಾತಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ, 21 ರಿಂದ 30 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಜುಲೈ 29 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ www.ssckkr.kar.nic.in, https://ssc.nic.in ಸಹಾಯವಾಣಿ ಸಂಖ್ಯೆ: 080-25502520, ಮೊ.ನಂ: 9483862020 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಹಾಯಕ ವೈರ್ಲೆಸ್, ಟೆಲಿ-ಪ್ರಿಂಟರ್ ಆಪರೇಟರ್ ಹುದ್ದೆ: ಸ್ಟಾಫ್ ಸೆಲೆಕ್ಷನ್ ಕಮೀಷನ್ ಕೇಂದ್ರ ನೇಮಕಾತಿ ಪ್ರಾಧಿಕಾರದ ವತಿಯಿಂದ ಹೆಡ್ ಕಾನ್ಸ್ಟೇಬಲ್ ಸಹಾಯಕ ವೈರ್ಲೆಸ್ ಆಪರೇಟರ್ ಹಾಗೂ ಟೆಲಿ-ಪ್ರಿಂಟರ್ ಆಪರೇಟರ್ ದೆಹಲಿ ಪೋಲಿಸ್ ಹುದ್ದೆಗಳ ನೇಮಕಾತಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಗಣಿತ, ವಿಜ್ಞಾನ ವಿಷಯದೊಂದಿಗೆ ಮಾನ್ಯತೆ ಪಡೆದ ಮಂಡಳಿಯಿ0ದ ದ್ವಿತೀಯ ಪಿ.ಯು.ಸಿ ಉತ್ತೀರ್ಣರಾಗಿರುವ, ಮೆಕ್ಯಾನಿಕ್- ಕಮ್ ಅಪರೇಟರ್, ಎಲೆಕ್ಟಾçನಿಕ್ ಕಮ್ಯುನಿಕೇಷನ್ ಸಿಸ್ಟಮ್ ಟ್ರೇಡ್ನಲ್ಲಿ ರಾಷ್ಟಿಯ ಟ್ರೇಡ್ ಪ್ರಮಾಣ ಪತ್ರ ಹೊಂದಿರುವ 18 ರಿಂದ 27 ವರ್ಷದೊಳಗಿನ ಅಭ್ಯರ್ಥಿಗಳು ಜುಲೈ 29 ರ ಒಳಗೆ ಅರ್ಜಿ ಸಲ್ಲಿಸ ಬಹುದಾಗಿದೆ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ www.ssckkr.kar.nic.in, https://ssc.nic.in , ಸಹಾಯವಾಣಿ ಸಂಖ್ಯೆ: 080-25502520, ಮೊ.ನಂ: 9483862020 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.