ಶೃಂಗೇರಿ ಶ್ರೀಗಳ ವಿರುದ್ಧ ಅವಹೇಳಕಾರಿ ಪೋಸ್ಟ್ ಆರೋಪಿಗೆ 3 ವರ್ಷ ಶಿಕ್ಷೆ
ಚಿಕ್ಕಮಗಳೂರು ಜು.20: ಶೃಂಗೇರಿ ಶ್ರೀಗಳ ವಿರುದ್ಧ ಫೇಸ್ಟುಕ್ ನಲ್ಲಿ ಅವಹೇಳಕಾರಿ ಪೋಸ್ಟ್ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಮುನ್ನಾ ಅಜರ್ ಎಂಬಾತನಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿ ಶೃಂಗೇರಿ ನ್ಯಾಯಾಲಯವು ತೀರ್ಪು ನೀಡಿದೆ.
ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆ ನಡೆಸಿದ ನ್ಯಾಯಾಲಯ ಮೂರು ವರ್ಷ ಜೈಲು ಶಿಕ್ಷೆ ಹಾಗೂ 10,000 ದಂಡ ವಿಧಿಸಿದೆ. ಕರ್ನಾಟಕ ಹಿಂದೂಸ್ ಎಂಬ ಪೇಜ್ ನಲ್ಲಿ ಗುರುಪರಂಪರೆಯ ಪೋಸ್ಟ್ ಹಾಕಲಾಗಿತ್ತು. ಆ ಪೋಸ್ಟ್ ನಲ್ಲಿ ಇದ್ದ ಶ್ರೀಗಳ ಫೋಟೋಗೆ ಅವಹೇಳನಕಾರಿ ಕಾಮೆಂಟ್ ಹಾಕಿದ್ದ ಆರೋಪದ ಮೇಲೆ 2015 ರ ನವೆಂಬರ್ 19ರಂದು ಅಜರ್ ವಿರುದ್ಧ ದೂರು ದಾಖಲಾಗಿತ್ತು. ಆ ಸಂದರ್ಭದಲ್ಲಿ ಭಕ್ತರು ರಾಜ್ಯದ ವಿವಿಧ ಕಡೆಗಳಲ್ಲಿ ಪ್ರತಿಭಟನೆ ನಡೆಸಿದ್ದರು. ಬಳಿಕ ಘಟನೆಗೆ ಸಂಬಂಧಿಸಿ ಹುಬ್ಬಳ್ಳಿ ಮೂಲದ ಮುನ್ನಾ ಅಜರ್ ನನ್ನು ಪೊಲೀಸರು ಬಂಧಿಸಿದ್ದರು.