ಸಂಘಟನೆಗಳು ದೀನದಲಿತರ ಧ್ವನಿಯಾಗಬೇಕು: ಫಾರೂಕ್
ಶಂಕರಪುರ: (ಉಡುಪಿ ಟೈಮ್ಸ್ ವರದಿ)ವಿಶ್ವಾಸದ ಮನೆಗೆ 75 ಸಾವಿರ ವೆಚ್ಚದ ಆಹಾರ ಸಾಮಾಗ್ರಿ ವಿತರಣೆ ಶಂಕರಪುರ ವಿಶ್ವಾಸದಮನೆ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರ ಹಾಗೂ ವೃದ್ಧಾಶ್ರಮಕ್ಕೆ ಕಾಪು-ಕಳತ್ತೂರು ಸಮಾಜಸೇವಾ ವೇದಿಕೆಯ ವತಿಯಿಂದ ನೀಡಲಾದ 75ಸಾವಿರ ರೂ.ವೆಚ್ಚದ ಆಹಾರ ದಿನಸಿ, ಬಟ್ಟೆ ಇನ್ನಿತರ ದಿನಬಳಕೆಯ ಅಗತ್ಯ ಸಾಮಾಗ್ರಿಗಳನ್ನು ಮೊಹಮ್ಮದ್ ಫಾರೂಕ್ ಚಂದ್ರನಗರ ಶನಿವಾರ ವಿತರಿಸಿದರು.
ಪ್ರಸ್ತುತ ಪರಿಸ್ಥಿತಿಯಲ್ಲಿ ಸಮಾಜದಲ್ಲಿನ ದೀನದಲಿತರ ನೆರವಿಗೆ ಸ್ಪಂದಿಸುವ ನಿಟ್ಟಿನಲ್ಲಿ ಸಾಮಾಜಿಕ ಸಂಘ0ಟನೆಗಳು ಕೆಲಸ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಪ್ರತಿಯೊಬ್ಬ ಮನುಷ್ಯನೂ ಕೂಡಾ ಸಮಾಜದಲ್ಲಿನ ಕಟ್ಟಕಡೆಯ ವ್ಯಕ್ತಿಯ ನೋವಿಗೆ ಧ್ವನಿಯಾದಲ್ಲಿ ಮಾತ್ರ ಗಾಂಧೀಜಿಯವರು ಕಂಡ ರಾಮರಾಜ್ಯದ ಕನಸು ನನಸಾಗಲು ಸಾಧ್ಯವಿದೆ ಎಂದು ಕಾಪು-ಕಳತ್ತೂರು ಸಮಾಜಸೇವಾ ವೇದಿಕೆಯ ಅಧ್ಯಕ್ಷ ಮೊಹಮ್ಮದ್ ಫಾರೂಕ್ ಚಂದ್ರನಗರ ತಿಳಿಸಿದ್ದಾರೆ.
ಶಂಕರಪುರ ವಿಶ್ವಾಸದಮನೆ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರ ಹಾಗೂ ವೃದ್ಧಾಶ್ರಮಕ್ಕೆ ಕಾಪು-ಕಳತ್ತೂರು ಸಮಾಜಸೇವಾ ವೇದಿಕೆಯ ವತಿಯಿಂದ ನೀಡಲಾದ 75ಸಾವಿರ ರೂ.ವೆಚ್ಚದ ಆಹಾರ ದಿನಸಿ, ಬಟ್ಟೆ ಇನ್ನಿತರ ದಿನಬಳಕೆಯ ಅಗತ್ಯ ಸಾಮಾಗ್ರಿಗಳನ್ನು ಶನಿವಾರ ವಿತರಿಸಿ ಅವರು ಮಾತನಾಡಿದರು.
ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್ಚಂದ್ರ ಸುವರ್ಣ ಅಡ್ವೆ ಮಾತನಾಡಿ, ಶಂಕರಪುರ ವಿಶ್ವಾಸದ ಮನೆಯಲ್ಲಿ ಬೀದಿಗೆ ಬಿದ್ದ ಅನಾಥರಿಗೆ ರಕ್ಷಣೆ ಹಾಗೂ ಆಸರೆಯನ್ನು ನೀಡುವ ಕೆಲಸ ಕಳೆದ 20 ವರ್ಷಗಳಿಂದ ಸದ್ದಿಲ್ಲದೆ ನಡೆಯುತ್ತಿದೆ. ಈ ಸಂಸ್ಥೆಯ ಮಾನವೀಯ ಕಾರ್ಯ ದೇವರಿಗೆ ಪ್ರಿಯವಾದದ್ದು, ಇವರಿಗೆ ಸಮಾಜದ ಸಂಘ ಸಂಸ್ಥೆಗಳು ಮತ್ತು ಸರಕಾರ ಅಗತ್ಯವಾಗಿ ನೆರವು ನೀಡಬೇಕಾಗಿದೆ ಎಂದರು. ಪಾದೂರು ಬದ್ರಿಯಾ ಜುಮ್ಮಾ ಮಸೀದಿಯ ಧರ್ಮಗುರು ಅಬ್ದುಲ್ ರಶೀದ್ ಸಖಾಫಿ, ಉದ್ಯಮಿ ರೂಪೇಶ್ ವಿ.ಕಲ್ಮಾಡಿ, ಸಮಾಜಸೇವಾ ವೇದಿಕೆಯ ಸಂಚಾಲಕರಾದ ದಿವಾಕರ ಡಿ.ಶೆಟ್ಟಿ ಕಳತ್ತೂರು, ಗೌರವಾಧ್ಯಕ್ಷರಾದ ದಿವಾಕರ ಬಿ. ಶೆಟ್ಟಿ ಕಳತ್ತೂರು, ಉಪಾಧ್ಯಕ್ಷರಾದ ರಾಜೇಶ್ ಕುಲಾಲ್, ಲಿಯೋ ಮೆಂಡೋನ್ಸ, ಕಳತ್ತೂರ್ ಸ್ಟಾನ್ಲಿಸನ್ ಕೊರ್ಡ, ಗೌರವ ಸಲಹೆಗಾರರಾದ ದಯಾನಂದ ಕೆ.ಶೆಟ್ಟಿ ದೆಂದೂರು, ಕಾರ್ಯದರ್ಶಿ ಲೋಕೇಶ್ ಭಟ್, ಕಾಪು ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಅಮೀರ್ ಮೊಹಮ್ಮದ್, ಮಾರಿಯೋ ಬರ್ಬೊಜಾ ಮುದರಂಗಡಿ, ಕಾಸಿಂ ಬಜ್ಪೆ, ಮೊಹಮ್ಮದ್ ಫಾಯಿಕ್ ಚಂದ್ರನಗರ, ಹರೀಶ್ ಶೆಟ್ಟಿ ಬೆಳ್ಳೆ, ಫಯಾಜ್ ಹಾಜಿ ಮಜೂರು, ಬಿ.ಎ.ಫಕ್ರುದ್ದೀನ್ ಆಲಿ, ತೆರೇಝ ಸಿಕ್ವೇರ, ಬಾಲಕೃಷ್ಣ ರಾವ್ ಕಳತ್ತೂರು, ಶರೋನ್ ಕುತ್ಯಾರು,ಪ್ರಶಾಂತ್ ಶಂಕರಪುರ ಉಪಸ್ಥಿತರಿದ್ದರು. ವಿಶ್ವಾಸದಮನೆಯ ಸಂಸ್ಥಾಪಕ ಪಾಸ್ಟರ್ ಸುನೀಲ್ ಜಾನ್ ಡಿಸೋಜಾ ಸ್ವಾಗತಿಸಿದರು. ಪತ್ರಕರ್ತ ಪ್ರಕಾಶ ಸುವರ್ಣ ಕಟಪಾಡಿ ನಿರೂಪಿಸಿದರು. ವ್ಯವಸ್ಥಾಪಕ ಬಾಬು ಮ್ಯಾಥ್ಯೂ ವಂದಿಸಿದರು.