ಸರಳವಾಗಿ ಸಾರ್ವಜನಿಕ ಗಣೇಶೋತ್ಸವ, ವಿಸರ್ಜನೆಗೆ ಅನುಮತಿ ನೀಡಿ: ಶಿವಸೇನಾ
ಉಡುಪಿ: (ಉಡುಪಿ ಟೈಮ್ಸ್ ವರದಿ) ಕೋವಿಡ್-19 ಕಾರಣಕ್ಕಾಗಿ ಜಿಲ್ಲಾಧಿಕಾರಿಗಳು ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ನಿರ್ಬಂಧ ಹೇರಿದ್ದು, ಇದು ಹಿಂದುಗಳ ಭಾವನೆಗಳಿಗೆ ನೋವುಂಟುಮಾಡಿದೆ. ರಾಜ್ಯದಲ್ಲಿ ಇಷ್ಟೆಲ್ಲಾ ಕಾರ್ಯಕ್ರಮಗಳು ಸರಳವಾಗಿ ನಡೆಯುತ್ತಿದ್ದರೂ ಗಣೇಶೋತ್ಸವಕ್ಕೆ ಮಾತ್ರ ನಿರ್ಬಂಧ ಸರಿಯಲ್ಲ.
ಹಿಂದುತ್ವದ , ಶ್ರೀ ರಾಮನ ಹೆಸರಿನಲ್ಲಿ ಅಧಿಕಾರದಲ್ಲಿರುವ ಸರಕಾರ ಇಂತಹ ನಿರ್ಧಾರ ಗಳಿಂದ ದೂರ ಸರಿದು ಹಿಂದೂಗಳ ಐಕ್ಯತೆ , ಒಗ್ಗಟ್ಟು , ಭಾವನೆಗಳಿಗೆ ಬೆಲೆಕೊಟ್ಟು ಕೂಡಲೇ ಸಾರ್ವಜನಿಕವಾಗಿ ಸರಳ ವಾಗಿ ಧಾರ್ಮಿಕ ವಿಧಿವಿಧಾನ , ವಿಸರ್ಜನೆಗಳಿಗೆ ಯಾವುದೇ ತೊಂದರೆ ಉಂಟಾಗದೆ ಆಚರಿಸಲು ಸೂಕ್ತ ನಿರ್ದೇಶನ ನೀಡಬೇಕೆಂದು ಶಿವಸೇನಾ ಪಕ್ಷದ ಉಡುಪಿ ಪ್ರಧಾನ ಕಾರ್ಯದರ್ಶಿಮಧುಕರ ಮುದ್ರಾಡಿ ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ.