ಮಲ್ಪೆ: ಕಲ್ಲು ಕೋರೆಗೆ ಬಿದ್ದು ಮಹಿಳೆ ಮೃತ್ಯು

ಮಲ್ಪೆ ಜು.4(ಉಡುಪಿ ಟೈಮ್ಸ್ ವರದಿ): ಆಕಸ್ಮಿಕವಾಗಿ ಕಾಲು ಜಾರಿ ಕಲ್ಲು ಕೋರೆಯ ನೀರಿಗೆ ಬಿದ್ದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ಮಲ್ಪೆಯ ಕೆಳಾರ್ಕಳಬೆಟ್ಟುವಿನಲ್ಲಿ ನಡೆದಿದೆ.

ಸ್ಥಳೀಯ ರಾಧಾ (65) ಮೃತಪಟ್ಟವರು. ರಾಧಾರವರು ವಯೋ ಖಾಯಿಲೆಯಿಂದ

ಬಳಲುತ್ತಿದ್ದು ಸುಮಾರು 5 ವರ್ಷಗಳಿಂದ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದರೂ ಗುಣ ಮುಖವಾಗಿರುವುದಿಲ್ಲ. ಜು.3 ರಂದು  ರಾಧಾರವರು ಮನೆಯ ಪಕ್ಕದಲ್ಲಿದ್ದ ಕಲ್ಲು ಕೋರೆಯ ನೀರಿಗೆ ಆಕಸ್ಮಿಕವಾಗಿ ಕಾಲು ಜಾರಿ  ಬಿದ್ದಿದ್ದರು. ತಕ್ಷಣ ಅವರನ್ನು ನೀರಿನಿಂದ  ಮೇಲೆ ಎತ್ತಿ  ಉಪಚರಿಸಿ ಚಿಕಿತ್ಸೆಗಾಗಿ ಮಣಿಪಾಲದ ಆಸ್ಪತ್ರೆಗೆ ದಾಖಲಿಸಿದ್ದು ಅಲ್ಲಿ ಅವರನ್ನು ಪರೀಕ್ಷಿಸಿದ ವೈದ್ಯರು ರಾಧಾರವರು ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಈ ಬಗ್ಗೆ ಮೃತರ ಮಗ ನೀಡಿದ ದೂರಿನಂತೆ ಮಲ್ಪೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!