ಉಡುಪಿ: ಪ್ರಸಾದ್ ನೇತ್ರಾಲಯದಲ್ಲಿ ಸ್ವಾತಂತ್ರೋತ್ಸವ ಆಚರಣೆ

ಉಡುಪಿ: ಗಡಿಯಲ್ಲಿ ನಿಂತು ಸೈನಿಕರಂತೆ ಶತ್ರುಗಳೊಡನೆ ಹೋರಾಡಿ ದೇಶ ಸೇವೆ ಮಾಡಲಾಗದಿದ್ದರೂ, ನಾವು ಗಳಿಸಿದ ಸಂಪತ್ತು ಸ್ವಲ್ಪ ಭಾಗವನ್ನಾದರೂ ಸಮಾಜದ ಉನ್ನತಿಗೆ, ಬಡವರ ಸೇವೆಗಾಗಿ ಉಪಯೋಗಿಸುವುದರಿಂದ ಪ್ರತಿಯೊಬ್ಬರೂ ದೇಶ ಸೇವೆಯನ್ನು ಮಾಡಬಹುದು. ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣ ತೆತ್ತ ಲಕ್ಷಾಂತರ ದೇಶಪ್ರೇಮಿಗಳ ಬಲಿದಾನವನ್ನು ಈ ಸಂಧರ್ಭದಲ್ಲಿ ನೆನೆಸಿಕೊಂಡು ಸಮಾಜ ಸೇವೆ ನಡೆಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದು ಉದ್ಯಮಿ, ಸಮಾಜ ಸೇವಕ ಉದಯ ಶೆಟ್ಟಿ ಮುನಿಯಾಲು ರವರು ಹೇಳಿದರು.

ಪ್ರಸಾದ್ ನೇತ್ರಾಲಯ, ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ಉಡುಪಿ ಇಲ್ಲಿ ನಡೆದ ಸ್ವಾತಂತ್ರೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಧ್ವಜಾರೋಹಣಗೈದರು. ಕೊರೊನಾದಿಂದ ಇಡೀ ಪ್ರಪಂಚಕ್ಕೆ ಇಂದು ಸ್ವತಂತ್ರ ಬೇಕಾಗಿದೆ ಎಂದ ಅವರು ಇದಕ್ಕಾಗಿ ಶ್ರಮಿಸುತ್ತಿರುವ ಎಲ್ಲಾ ವೈದ್ಯರುಗಳು ಹಾಗೂ ಆಸ್ಪತ್ರೆಗಳ ಸಿಬ್ಬಂದಿ ವರ್ಗದವರನ್ನು ಅಭಿನಂದಿಸಿದರು.

ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಕೃಷ್ಣ ಪ್ರಸಾದ್ ಕೂಡ್ಲು ಅವರು ಮಾತನಾಡಿ ನಾವು ಮಾಡುತ್ತಿರುವ ಉದ್ಯೋಗ, ಕೆಲಸಗಳಲ್ಲಿ ತೋರುವ ನಿಷ್ಠೆ, ಪ್ರಾಮಾಣಿಕತೆ ಮತ್ತು ಕಠಿಣ ಪರಿಶ್ರಮಗಳು ನಿಜವಾದ ಸೇವೆ ಎಂದರು.

ಈ ಸಂಧರ್ಭದಲ್ಲಿ ಸಹ ಸಂಸ್ಥೆಯ ನೇತ್ರ ಜ್ಯೋತಿ ಇನ್ಸಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸ್ ಇವರ ಸಹಯೋಗದಿಂದ ವಿದ್ಯಾರ್ಥಿಗಳಿಗೆ ಹಾಗೂ ಅವರ ಪೋಷಕರಿಗೆ `ಟ್ಯಾಲೆಂಟ್ ಹಂಟ್’ ಎಂಬ ಆನ್ಲೈನ್ ಪ್ರತಿಭಾ ಸ್ಪರ್ಧೆಗಳನ್ನು ನಡೆಸಲಾಯಿತು. ನೂರಾರು ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಭಾಗವಹಿಸಿದರು

ಆಸ್ಪತ್ರೆಯ ನಿರ್ದೇಶಕಿ ರಶ್ಮಿ ಕೃಷ್ಣಪ್ರಸಾದ, ವೈದ್ಯ ವೃಂದ, ಸಿಬ್ಬಂದಿ ವರ್ಗ, ಕಾಲೇಜಿನ ಪ್ರಾಂಶುಪಾಲರು ಹಾಗೂ ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು. ಆಸ್ಪತ್ರೆಯ ಆಡಳಿತಾಧಿಕಾರಿ ಎಂ. ವಿ. ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!