ವಿಮಾನಗಳಿಗೆ ಹುಸಿ ಬಾಂಬ್ ಬೆದರಿಕೆ: 10 ಸಾಮಾಜಿಕ ಮಾಧ್ಯಮ ಖಾತೆಗಳಿಗೆ ನಿರ್ಬಂಧ
ನವದೆಹಲಿ: ಈ ವಾರ ಅನೇಕ ಭಾರತೀಯ ವಿಮಾನಗಳಿಗೆ ನಕಲಿ ಬಾಂಬ್ ಬೆದರಿಕೆಯ ಸಂದೇಶ ಕಳುಹಿಸಿದ್ದ ಏಳಕ್ಕೂ ಹೆಚ್ಚು ಸಾಮಾಜಿಕ ಮಾಧ್ಯಮ ಖಾತೆಗಳನ್ನು ಸೈಬರ್ ಭದ್ರತಾ ಏಜೆನ್ಸಿಗಳು ಅಮಾನತುಗೊಳಿಸಿವೆ ಎಂದು ತಿಳಿದುಬಂದಿದೆ.
ಸೈಬರ್, ವಾಯುಯಾನ ಭದ್ರತೆ ಮತ್ತು ಗುಪ್ತಚರ ಸಂಸ್ಥೆಗಳ ಜಂಟಿ ತಂಡವೊಂದನ್ನು ಈ ಖಾತೆಗಳನ್ನು ಪರಿಶೀಲಿಸಿದ್ದು, ಬುದ್ಧಿಹೀನ ಬೆದರಿಕೆ ಸಂದೇಶ ಮುಂದುವರೆಸಿದ್ದರಿಂದ ಈ ಖಾತೆಗಳನ್ನು ಅಮಾನತು ಗೊಳಿಸಲು ಆದೇಶ ಹೊರಡಿಸಲಾಗಿದೆ. ಈ ವೇಳೆ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ವಿಮಾನ ಸ್ಫೋಟಿಸುವ ಬೆದರಿಕೆ ಹಿಂದೆ ಯಾವುದೇ ಪಿತೂರಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸುಮಾರು ಏಳೆಂಟು ಸಾಮಾಜಿಕ ಮಾಧ್ಯಮ ಖಾತೆಗಳು, ಅವುಗಳಲ್ಲಿ ಹೆಚ್ಚಿನವು ಎಕ್ಸ್ ಗೆ ಸೇರಿದ್ದು, ಸೋಮವಾರದಿಂದ ಅವುಗಳನ್ನು ಅಮಾನತು ಗೊಳಿಸಲಾಗಿದೆ ಅಥವಾ ನಿರ್ಬಂಧಿಸಲಾಗಿದೆ. ದೇಶಿಯ ಹಾಗೂ ಅಂತಾರಾಷ್ಟ್ರೀಯ ಮಾರ್ಗದಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ಸೇರಿದ ವರ್ಚುಯಲ್ ಮೂಲಕ ಹುಸಿ ಬಾಂಬ್ ಮತ್ತು ಉಗ್ರರ ದಾಳಿ ಬೆದರಿಕೆ ಕಳುಹಿಸಲಾಗಿದೆ ಎಂದು ಮೂಲಗಳು ಹೇಳಿವೆ.
ಬಾಂಬ್ ಇಡಲಾಗಿದೆ. ರಕ್ತ ಎಲ್ಲೆಡೆ ಹರಡುತ್ತದೆ. ಸ್ಫೋಟಕ ಸಾಧನಗಳು, ಇದು ತಮಾಷೆಯಲ್ಲ ಮತ್ತು ನೀವೆಲ್ಲರೂ ಸಾಯುತ್ತೀರಿ ಎಂಬಂತಹ ಒಂದೇ ಪದ, ಸಾಲುಗಳನ್ನು ಬಹುತೇಕ ಸಾಮಾಜಿಕ ಮಾಧ್ಯಮ ಗಳಲ್ಲಿ ಬಂದಿರುವುದನ್ನು ಏಜೆನ್ಸಿಗಳು ಪತ್ತೆ ಹಚ್ಚಿವೆ.
ಇಂತಹ ಪ್ರತಿಯೊಂದು ನಕಲಿ ಬೆದರಿಕೆ ಸಂದೇಶ ಕುರಿತು ಪೊಲೀಸರು ಎಫ್‌ಐಆರ್ ದಾಖಲಿಸಿಕೊಳ್ಳು ವುದರ ಹೊರತಾಗಿ ಯಾವ್ ಆನ್ ಲೈನ್ ನಿಂದ ಇಂತಹ ಫೋಸ್ಟ್ ಮಾಡಲಾಗಿದೆ ಎಂಬುದನ್ನು ಪರಿಶೀಲಿಸಲು ಏಜೆನ್ಸಿಗಳು ‘ಸೈಬರ್ ಗಸ್ತು’ ಹೆಚ್ಚಿಸಿವೆ ಎಂದು ಮೂಲಗಳು ತಿಳಿಸಿವೆ.