ಉಡುಪಿ: ಅದಮಾರು ಕಿರಿಯ ಶ್ರೀಗಳಿಂದ ಸರ್ವಜ್ಞ ಪೀಠಾರೋಹಣ
ಉಡುಪಿ: ಮುಂದಿನ ಜನವರಿ 18 ರ ಪರ್ಯಾಯದಲ್ಲಿ ಅದಮಾರು ಮಠದ ಕಿರಿಯ ಯತಿ ಶ್ರೀ ಈಶಪ್ರಿಯ ತೀರ್ಥಸ್ವಾಮೀಜಿ ಪರ್ಯಾಯ ಸರ್ವಜ್ಞ ಪೀಠ ವೇರಲಿದ್ದಾರೆ ಎಂದು ಹಿರಿಯ ಶ್ರೀ ವಿಶ್ವಪ್ರಿಯತೀರ್ಥ ಸ್ವಾಮೀಜಿಗಳಿಂದ ಘೋಷಣೆ.
ಸೋಮವಾರ ಅದಮಾರು ಮೂಲ ಮಠದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಶ್ವಪ್ರಿಯ ತೀರ್ಥ ಸ್ವಾಮೀಜಿ, ಗುರುಗಳು ಹಾಕಿಕೊಟ್ಟ ಕ್ರಮದಂತೆ ಈ ಬಾರಿಯ ಪರ್ಯಾಯ ಪೀಠವನ್ನು ಕಿರಿಯ ಶ್ರೀಗಳು ಏರಲಿದ್ದಾರೆ.
ವಿಶ್ವಪ್ರಿಯ ತೀರ್ಥರು, 1956-58, 1972-74ರಲ್ಲಿ ವಿಭುದೇಶ ತೀರ್ಥರು ಪರ್ಯಾಯ ನಡೆಸಿ ನಮ್ಮನ್ನು 1988-90 ರಲ್ಲಿ ಪರ್ಯಾಯ ಪೀಠವೇರಲು ಅವಕಾಶ ಕಲ್ಪಿಸಿದ್ದರು.2004-06 ಎರಡನೆ ಪರ್ಯಾಯವನ್ನು ನಡೆಸಿದ್ದೇವೆ ಎಂದ ಅವರು, ಶಿಷ್ಯ ನನಗಿಂತ ಉತ್ತಮವಾಗಿ ನಡೆಸುತ್ತಾರೆ ಎಂಬ ಧೈರ್ಯಭಾವನೆಯಿದೆ ಎಂದರು.
ಪೀಠದಲ್ಲಿ ಯಾರು ಕುಳಿತರೇನು ನಮ್ಮಿಬ್ಬರ ಸಂಕಲ್ಪವೊಂದೇ, ಕೃಷ್ಣ ಮಾಹಾಪೂಜೆ ಸಾಂಗವಾಗಿ ನೆರವೇರಬೇಕು. ಲೋಕ ಕ್ಷೇಮವಾಗಬೇಕು. ಕೃಷ್ಣನಿಗೆ ಯಾವಕಾಲಕ್ಕೆ ಸಮಾಜಕ್ಕೆ ಏನು ಕೊಡಬೇಕೆಂದು ಗೊತ್ತಿದೆ. ಅದನ್ನು ಕಾಲಕಾಲಕ್ಕೆ ಕೊಡುತ್ತಾನೆ ಎಂದರು. ನಮ್ಮ ಹಿಂದಿನ ಪರ್ಯಾಯದ ಬಳಿಕದ ಯಾವುದೇ ಪರ್ಯಾಯ ಮೆರವಣಿಗೆ, ದರ್ಬಾರಿನಲ್ಲಿ ಪಾಲ್ಗೊಂಡಿಲ್ಲ. ಈ ಬಾರಿಯೂ ಪರ್ಯಾಯ ಮೆರವಣಿಗೆ ಸಹಿತ ದರ್ಬಾರಿನಲ್ಲಿ ಪಾಲ್ಗೊಳ್ಳುವುದಿಲ್ಲ.ನನ್ನ ಗುರುಗಳೂ ಅದೇ ರೀತಿ ಮಾಡಿದ್ದರು. ನಾನು ಉಡುಪಿಯಲ್ಲಿಯೇ ಇರುತ್ತೇನೆ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.
ಉಡುಪಿ ಜನ ನಾನಾ ರೀತಿಯಲ್ಲಿ ಮಾತಾಡುತ್ತಾರೆ, 500-600 ವರ್ಷದಿಂದಲೂ ನಡೆಯುತ್ತಾ ಬಂದಿದೆ. ಅದನ್ನೇ ನೋಡಿಕೊಂಡು ದಾಸರು ಹಾಡು ಮಾಡಿದ್ದು, ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ ಎಂದು ಅಂದೇ ಹೇಳಿದ್ದಾರೆ. ಜನ ಖುಷಿ ಬಂದಂತೆ ಮಾತಾಡಲು ಆರಂಭಿಸಿದ್ದಾರೆ. ಅಂದು ಅದನ್ನು ತಡೆದುಕೊಳ್ಳಲಾಗದೆ ಇನ್ನೊಂದು ಹಾಡು ರಚಿಸಿದ್ದರು. ಹಂದಿಯಿಂದ್ದೆರೆ ಹೇಂಗೆ ಕೇರಿ ಶುದ್ಧಿಯೋ ಹಾಂಗೆ ನಿಂದಕರಿರಬೇಕು ಎಂಬ ಹಾಡು ಈಗಿನ ಕಾಲಕ್ಕೂ ಲಗಾವು ಆಗುತ್ತದೆ. ಸಮಾಜದಲ್ಲಿನಲ್ಲಿ ನನ್ನದೊಂದು ಕೋರಿಕೆ ಸಂಬಂಧ ಪಡದ ವಿಷಯವನ್ನು ಮಾತನಾಡಬಾರದು.
ಮಾತಾಡುವುದಿದ್ದರೂ ಕೂಲಂಕಷವಾಗಿ ಹಿಂದೆ ಮುಂದೆ ವಿಮರ್ಶಿಸಿ ಮಾತಾಡಬೇಕು.
ಇಲ್ಲದಿದ್ದರೆ ಪೌರತ್ವದ ಬಗ್ಗೆ ಗಲಾಟೆ ಮಾಡಿದಂತಾಗುತ್ತದೆ, ಗಲಾಟೆ ಮಾಡಿದವರಲ್ಲಿ
ಕೇಳಿದರೆ ಏನೂ ತಿಳಿದಿರುವುದಿಲ್ಲ. ಸಾಮಾಜಿಕ ವಿಷಯವನ್ನು ಮಾತಾಡಿದರೆ ಈ ರೀತಿ
ದೇಶಕ್ಕೆ ಅನಾಹುತವಾಗುತ್ತದೆ. ಅದರಲ್ಲೂ ಆಧ್ಯಾತ್ಮಿಕ ವಿಷಯದಲ್ಲಿ ಖುಷಿ ಬಂದಂತೆ
ನಾಲಿಗೆ ಹರಿಬಿಟ್ಟರೆ ಅವರ ಆತ್ಮಕ್ಕೆ ತೊಂದರೆಯಾಗುತ್ತದೆ. ಇನ್ನು ಮುಂದೆ ಆದರೂ ಸಮಾಜ ಪೀಠದ ಬಗ್ಗೆ, ಆಧ್ಯಾತ್ಮಿಕವಾದ ವಿಷಯದಲ್ಲಿ ಮಾತಾಡುವಾಗ ಮೊದಲು ವಿಮರ್ಶಿಸಿ ಹೌದೆಂದಾರೆ ಮಾತಾಡಬೇಕು ಎಂದು ಸಂದೇಶ ಕೊಡುತ್ತಿದ್ದೇನೆ.
ಶಿಕ್ಷಣ ಸಂಸ್ಥೆಗಳ ನಿಭಾವಣೆ: ಆಧಿಕಾರ ಬಿಟ್ಟುಕೊಟ್ಟಿರುವ ಬಗ್ಗೆ ಯಾವುದೇ ನೋವು
ಇಲ್ಲ. ಅಧಿಕಾರ ಕಸಿದುಕೊಂಡದ್ದಲ್ಲ. ಜನ ಸುಮ್ಮನೆ ಮಾತನಾಡುವಾಗ ನೋವಾಯಿತು. ಸಾಮಾಜಿಕ ಜಾಲತಾಣದಲ್ಲಿನ ವಿಷಯಗಳು ಬೇಸರ ತಂದಿದೆ. ಪೂಜೆ ಮಾಡುತ್ತೇನೆ. ಅವಸರ ಸನಕಾದಿ ಪೂಜೆ, ಮಹಾಪೂಜೆ, ರಾತ್ರಿ ಚಾಮರ ಸೇವೆಯನ್ನು ಪರ್ಯಾಯ ಪೀಠದಲ್ಲಿ ಕುಳಿತವರೇ ಮಾಡುತ್ತಾರೆ. ಉಳಿದೆಲ್ಲ ಪೂಜೆಗಳನ್ನು ಇತರ ಸ್ವಾಮಿಗಳು ನೆರವೇರಿಸುತ್ತಾರೆ. ಉಡುಪಿಯಲ್ಲಿರುವಾಗ ಪ್ರವಚನ ನಿರಾತಂಕವಾಗಿ ನಡೆಯಲಿವೆ. ಶಿಕ್ಷಣ ಸಂಸ್ಥೆಗಳ ನಿಭಾವಣೆ ಹೊಣೆಗಾರಿಕೆಯಿಂದ ಸಂಚಾರದಲ್ಲಿರುತ್ತೇನೆ ಎಂದರು.
ಸಲಹೆ ಸೂಚನೆ ನೀಡುತ್ತೇನೆ: ಪರ್ಯಾಯದಲ್ಲಿ ನಾನು ಬರ್ತಾ ಹೋಗುತ್ತಿರುತ್ತೇನೆ. ಸಲಹೆ
ಸೂಚನೆಗಳನ್ನಿಯುತ್ತೇನೆ. ಶಿಷ್ಯ ಮಠದಲ್ಲಿ ನೀರಿಂಗಿಸುವ ಕಾರ್ಯಕ್ರಮ ಮಾಡುವ ಮೂಲಕ ಸಮಾಜಕ್ಕೆ ಹೇಳುವ ನೈತಿಕ ಹಕ್ಕು ಕಂಡುಕೊಂಡಿದ್ದಾರೆ. ನೀರಿಲ್ಲದೆ
ಒದ್ದಾಡುತ್ತಿದ್ದೇವೆ. ನೀರಿನ ಮಹತ್ವ ಬಹಳಷ್ಟಿದೆ. ಸಮಾಜಕ್ಕೆ ಒಳ್ಳೆದಾಗಬೇಕೆಂಬ
ಕಾನೂನು ಜಾರಿ ಮಾಡಿದರೆ ಅದನ್ನು ನಮ್ಮವರೇ ಸೇರಿ ಕ್ಷೆಭೆ ಮಾಡುವ ಕೆಲಸ
ಮಾಡುತ್ತಿದ್ದಾರೆ ಎಂದರು.