ಉಡುಪಿ: ನಿಷೇಧಿತ ಪ್ಲಾಸ್ಟಿಕ್ ಬಳಕೆ: ನಗರಸಭೆ ಅಧಿಕಾರಿಗಳ ದಾಳಿ

ಉಡುಪಿ: ನಗರಸಭೆ ವ್ಯಾಪ್ತಿಯ ಎ.ಪಿ.ಎಂ.ಸಿ.ಮಾರುಕಟ್ಟೆ ವ್ಯಾಪಾರಿಗಳಿಂದ ಮತ್ತು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿಯ ರಖಂ ಅಂಗಡಿಯಿಂದ ನಿಷೇಧಿತ ಪ್ಲಾಸ್ಟಿಕ್  ವಶಪಡಿಸಿಕೊಂಡು ತಲಾ ರೂ 1000/- ದಂತೆ ಒಟ್ಟು 7 ಮಂದಿಯಿಂದ ರೂ 7000/- ದಂಡ ವಸೂಲಿ ಮಾಡಲಾಗಿದೆ.

ಪೌರಾಯುಕ್ತರಾದ ಆನಂದ ಕಲ್ಲೋಳಿಕರ್ ನೇತೃತ್ವದಲ್ಲಿ ಹಿರಿಯ  ಆರೋಗ್ಯ ನಿರೀಕ್ಷಕರಾದ ಕರುಣಾಕರ. ವಿ ಮತ್ತು ಶಶಿರೇಖಾ, ಕಿರಿಯ ಆರೋಗ್ಯ ನಿರೀಕ್ಷಕ ಪ್ರಸನ್ನ, ಸ್ಯಾನಿಟರಿ ಸೂಪರ್ವೈಸರ್ ನಾಗಾರ್ಜುನ ಈ ದಾಳಿಯಲ್ಲಿ ಭಾಗವಹಿಸಿದ್ದರು. ಎ.ಪಿ.ಎಂ.ಸಿ.ಅಧಿಕಾರಿಗಳು ಸಹಕರಿಸಿದರು. ಇನ್ನು ಮುಂದೆ ಪ್ರತಿದಿನ ದಾಳಿ ನಡೆಸಿ ನಿಷೇಧಿತ ಪ್ಲಾಸ್ಟಿಕ್ ಕಂಡುಬಂದರೆ ಸ್ಥಳದಲ್ಲಿಯೇ ದಂಡ ವಸೂಲಿ ಮಾಡಲಾಗುವುದು.

Leave a Reply

Your email address will not be published. Required fields are marked *

error: Content is protected !!