ಉಡುಪಿ: ಚಿಕಿತ್ಸೆಗೆ ಬಂದ ವೃದ್ಧ ನಾಪತ್ತೆ
ಉಡುಪಿ: ಅಳಿಯನೊಂದಿಗೆ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ಬಂದ ವೃದ್ಧರೊಬ್ಬರು ನಾಪತ್ತೆಯಾದ ಘಟನೆ ಗುರುವಾರ ನಡೆದಿದೆ. ಪೆರಂಪಳ್ಳಿಯ ಜೂಲಿಯಾನ್ ಡಿಸೋಜಾ(84) ಪೆರಂಪಳ್ಳಿ ಅವರು ಮಾನಸಿಕ ಅಸ್ವಸ್ಥರಾಗಿದ್ದು, ಇಂದು ಮಗನೊಂದಿಗೆ ಚಿಕಿತ್ಸೆಗಾಗಿ ಉಡುಪಿ ಜಿಲ್ಲಾಸ್ಪತ್ರೆಗೆ ಬಂದಿದ್ದರು. ಅಳಿಯ ಆಸ್ಪತ್ರೆಯಲ್ಲಿ ಮಾಹಿತಿ ನೀಡುತ್ತಿದ್ದ ಸಂದರ್ಭ ಆಸ್ಪತ್ರೆಯಿಂದ ಕಾಣೆಯಾಗಿದ್ದಾರೆ.
ಜೂಲಿಯಾನ್ ಅವರು ನೀಲಿ ಬಣ್ಣದ ಪ್ಯಾಂಟ್ ಮತ್ತು ಅಂಗಿ ಧರಿಸಿರುತ್ತಾರೆ. ಇವರ ಮಾಹಿತಿ ಸಿಕ್ಕಲ್ಲಿ ದೂ. 8197810927 ತಿಳಿಸಬೇಕಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.