ಉಡುಪಿ: ಬೀದಿ ದೀಪಕ್ಕೂ ಬಂತು ಗ್ಯಾಸ್ ಲೈಟ್
ಉಡುಪಿ: ಕುಕ್ಕಿಕಟ್ಟೆ ಮುಖ್ಯರಸ್ತೆಯಲ್ಲಿ ಬೀದಿದೀಪ ಉರಿಯದೆ ಇರುವುದರಿಂದ ಇಲ್ಲಿನ ಟೆಂಪೋ, ರಿಕ್ಷಾ ಚಾಲಕರು ನಗರಸಭೆಯನ್ನು ಎಚ್ಚರಿಸಲು ಗ್ಯಾಸ್ ಲೈಟ್‌ನ್ನು ವಿದ್ಯುತ್ ಕಂಬಕ್ಕೆ ಅಳವಡಿಸಿ ನಗರಸಭೆಯನ್ನು ವಿನೂತನ ರೀತಿ ಎಚ್ಚರಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ .
ಕುಕ್ಕಿಕಟ್ಟೆ ಮುಖ್ಯರಸ್ತೆಯ ಅಯ್ಯಪ್ಪಸ್ವಾಮಿ ಮಂದಿರದ ಬಳಿ ಕಳೆದ ಒಂದು ವರ್ಷದಿಂದ ಹೈಮಾಸ್ಟ್ ಹಾಗೂ ವಿದ್ಯೂತ್ ಕಂಬಗಳಲ್ಲೂ ಅಳವಡಿಸಲಾದ ಬೀದಿ ದೀಪ ಉರಿಯದೆ ಇರುವುದರಿಂದ ನಗರಸಭೆಗೆ ದೂರು ನೀಡಿದರೆ ಯಾವುದೇ ಪ್ರಯೋಜನವಾಗದ ಕಾರಣ ಇಲ್ಲಿನ ನಾಗರಿಕರು ,ರಿಕ್ಷಾ , ಟೆಂಪೋ ಚಾಲಕರು ವಿದ್ಯುತ್ ಕಂಬಕ್ಕೆ ಗ್ಯಾಸ್ ಲೈಟ್‌ನ್ನು ಅಳವಡಿಸಿ ಅದನ್ನು ರಾತ್ರಿ ಹೋತ್ತು ಉರಿಸುತ್ತಿದ್ದಾರೆ.
ಉಡುಪಿ ನಗರಾದದ್ಯಾಂತ ಇದೇ ಸಮಸ್ಯೆಗಳಿದ್ದು ಇಲ್ಲಿನ ಆಡಳಿತ ವರ್ಗ ಈ ವರೆಗೆ ಯಾವುದೇ ಸಮಸ್ಯೆ ಬಗೆಹರಿಸುವ ಗೋಜಿಗೆ ಹೋಗದ ಕಾರಣ ಇಲ್ಲಿನ ನಿವಾಸಿಗಳು ಈ ಕೆಲಸಕ್ಕೆ ಮುಂದಾಗಿ ನಗರಸಭೆ ಎಚ್ಚರಿಸಲು ಕೊನೆ ಪ್ರಯತ್ನ ಎಂಬಂತೆ ವಿದ್ಯುತ್ ಕಂಬಕ್ಕೆ ಗ್ಯಾಸ್ ಲೈಟ್ ಅಳವಡಿಸಿ ಅಧಿಕಾರಿಗಳನ್ನು ಎಚ್ಚರಿಸಲು ಮುಂದಾಗಿದ್ದಾರೆ. ನಗರದಲ್ಲಿ ಬೈಕ್ ನಲ್ಲಿ ಬಂದು ಮಹಿಳೆಯರ ಚಿನ್ನಾಭಾರಣ ಕಸಿದ ಘಟನೆ ನಡೆಯುತ್ತಿದೆ ಇನ್ನಾದರೂ ನಗರಸಭೆ ಎಚ್ಚೆತ್ತು ಬೀದಿ ದೀಪ ಸರಿಪಡಿಸುವ ಕೆಲಸ ಮಾಡಲಿ ಎಂದು ಇಲ್ಲಿನ ಜನರ ಆಶಯ.