ಉಡುಪಿ:ಬಿಜೆಪಿಯ ನೂತನ ಸಾರಥಿಯಾಗಿ ಸುರೇಶ್ ನಾಯಕ್ ಅಧಿಕಾರ ಸ್ವೀಕಾರ
ಉಡುಪಿ: ಜಿಲ್ಲಾ ಬಿಜೆಪಿಯ ನೂತನ ಅಧ್ಯಕ್ಷರಾಗಿ ಕುಯಿಲಾಡಿ ಸುರೇಶ್ ನಾಯಕ್‌ರವರಿಗೆ ಬುಧವಾರ ಮಟ್ಟಾರ್ ರತ್ನಾಕರ್ ಹೆಗ್ಡೆ ಪಕ್ಷದ ಧ್ವಜ ನೀಡಿ ಅಧಿಕಾರ ಹಸ್ತಂತರಿಸಿದರು. ನಂತರ ಮಾತನಾಡಿದ ನೂತನ ಅಧ್ಯಕ್ಷರಾದ ಸುರೇಶ್ ನಾಯಕ್ ಜಿಲ್ಲೆಯಲ್ಲಿ
ಸಹಕಾರಿ ರಂಗದಲ್ಲಿ ಸ್ವಲ್ಪ ಹಿನ್ನಡೆಯಾಗಿದ್ದು, ಈ ಬಾರಿ ಸಹಕಾರಿ ಕ್ಷೇತ್ರದಲ್ಲಿ ಅನೇಕ ಚುನಾವಣೆ ನಡೆದಿದದ್ದು ಬಿಜೆಪಿಗೆ ಅವಕಾಶವಿದ್ದರೂ ಕಾಂಗ್ರೆಸ್ ಅಧಿಕಾರ ಪಡೆದುಕೊಂಡಿದೆ , ಮುಂದಿನ ದಿನಗಳಲ್ಲಿ ಅದಕ್ಕೆ ಅವಕಾಶ ನೀಡದೆ ನಮ್ಮ ಪಕ್ಷದ ಕಾರ್ಯಕರ್ತರೇ ಅಧಿಕಾರ ಪಡೆದುಕೊಳ್ಳುವಂತಾಗ ಬೇಕೆಂದು ಅಭಿಪ್ರಾಯ ಪಟ್ಟರು.
ಕಳೆದ ಜಿಲ್ಲಾ ಪಂಚಾಯತ್, ಗ್ರಾಮ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆಯಲ್ಲಿ ನಾವು ಸೋತ ಕ್ಷೇತ್ರಗಳಲ್ಲಿ ಪಕ್ಷವನ್ನು ಮತ್ತೆ ಗೆಲ್ಲಿಸಿ ಪಕ್ಷವನ್ನು ಶೇ. ನೂರರಷ್ಟು ಬೆಳೆದು ನಿಲ್ಲಿಸಬೇಕು ಎಂದು ಈ ಸಂದರ್ಭ ಹೇಳಿದರು. ಮುಂದಿನ ದಿನಗಳಲ್ಲಿ ನಾನು ಕಾರ್ಯಕರ್ತರ ಸಮಸ್ಯೆಗಳಿಗೆ ಧ್ವನಿಯಾಗಿ ಜಿಲ್ಲೆಯಾದ್ಯಾಂತ ಕೆಲಸ ಮಾಡುತ್ತೇನೆ ಅದಕ್ಕಾಗಿ ಪಕ್ಷದ ಎಲ್ಲಾ ಮುಖಂಡರ, ಕಾರ್ಯಕರ್ತರ ಸಹಕಾರ ಯಾಚಿಸಿದರು.
ನಿರ್ಗಮನ ಅಧ್ಯಕ್ಷರಾದ ಮಟ್ಟಾರ್ ರತ್ನಾಕರ್ ಹೆಗ್ಡೆ ಮಾತನಾಡಿ ನಾನು ಅಧಿಕಾರ ಸ್ವೀಕರಿಸುವ ಸಂದರ್ಭ ಕೇವಲ ಕಾರ್ಕಳ ವಿಧಾನ ಸಭಾ ಕ್ಷೇತ್ರದಲ್ಲಿ ಮಾತ್ರ ನಮ್ಮ ಪಕ್ಷದ ಶಾಸಕರು ಚುನಾಯಿತರಾಗಿದ್ದರು. ಈ ಜಿಲ್ಲೆಯ ಐದು ಕ್ಷೇತ್ರದಲ್ಲಿ ಬಿಜೆಪಿ ಶಾಸಕರು, ಜಿಲ್ಲಾ ಪಂಚಾಯತ್, ನಗರ ಸಭಾ ಚುನಾವಣೆಗಳಲ್ಲಿ, ತಾಲೂಕು ಪಂಚಾಯತ್ , ಹೆಚ್ಚಿನ ಗ್ರಾಮ ಪಂಚಾಯತ್ ನಮ್ಮ ಪಕ್ಷವು ಅಧಿಕಾರದಲ್ಲಿದೆ ಇದಕ್ಕೆಲ್ಲ ನಮ್ಮ ಕಾರ್ಯಕರ್ತರ ತ್ಯಾಗ ,ಪರಿಶ್ರಮದಿಂದಾಗಿದೆ, ಇವರ ಋಣ ತೀರಿಸಲು ಯಾವತ್ತೂ ಆಗುವುದಿಲ್ಲವೆಂದರು.
ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಅವರ ಅಪೆಕ್ಷೆಂತೆ ದೇಶದಲ್ಲಿ ಯುವಕರು ಪಕ್ಷದ ರಾಷ್ಟ್ರೀಯಾ ವಾಹಿನಿಯಲ್ಲಿ ಗುರುತಿಸಿಕೊಂಡು ಪಕ್ಷವನ್ನು ಮತ್ತಷ್ಟು ಸದೃಢಗೊಳಿಸುವಲ್ಲಿ ಮುಂದಿನ ದಿನಗಳಲ್ಲಿ ಕಾರ್ಯಪ್ರವೃತ್ತರಾಗಬೇಕೆಂಬ ಅಭಿಲಾಷೆ ವ್ಯಕ್ತಪಡಿಸಿದರು.
ಈ ಸಂದರ್ಭ ಮಂಗಳೂರು ಪ್ರಭಾರ ಕೆ.ಉದಯ್ ಕುಮಾರ್ ಶೆಟ್ಟಿ, ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಕುತ್ಯಾರ್ ನವೀನ್ ಶೆಟ್ಟಿ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ದಿನಕರ್ ಬಾಬು, ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ ಉಪಸ್ಥಿತರಿದ್ದರು.