ಉಡುಪಿ : ನಿನ್ನೆ ರಾತ್ರಿ  ಮತ್ತು ಮು೦ಜಾನೆ ಸುರಿದ ವಿಪರೀತ  ಮಳೆಯಿಂದಾಗಿ ಕೆಲವೊಂದು  ಶಾಲೆಗಳಿಗೆ ರಜೆ ನೀಡಲಾಗಿದೆ

ಉಡುಪಿ : ನಿನ್ನೆ ರಾತ್ರಿ  ಮತ್ತು ಇ೦ದು ಮು೦ಜಾನೆ ಸುರಿದ ವಿಪರೀತ  ಮಳೆಯಿಂದಾಗಿ ಕೆಲವೊಂದು  ಶಾಲೆಗಳಿಗೆ ರಜೆ ನಿಡಲಾಗಿದೆ. ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ಸೋಮವಾರ ತಡರಾತ್ರಿ ಗುಡುಗು ಸಿಡಿಲು ಸಹಿತ ಬಿರುಸಾಗಿ ಮಳೆ ಯಾಗಿದ್ದು ಏಕಾಏಕಿ ಗುಡುಗು, ಸಿಡಿಲು, ಗಾಳಿಯ ಅಬ್ಬರ ಕಂಡು ಜನರು ಬೆಚ್ಚಿಬಿದ್ದಿದ್ದು  ನಿನ್ನೆಯಿ೦ದ  ಎಡೆಬಿಡದೆ ಸುರಿದ ಮಳೆ ಗಾಳಿಯಿಂದ ವಿದ್ಯುತ್  ಕಡಿತಗೊ೦ಡಿದ್ದು . ನಗರದ ರಸ್ತೆಗಳೆಲ್ಲ ನೀರಿನಿಂದ ಜಲಾವೃತಗೊಂಡು ವಾಹನಗಳ ಸಂಚಾರಕ್ಕೆ ಅಡ್ಡಿಯುಂಟಾಗಿದೆ.

ಬನ್ನಂಜೆ, ಮೂಡನಿಡಂಬೂರು,ಕಲ್ಸ೦ಕ  ಹಲವಾರು ಮನೆಗಳಿಗೆ ನೀರು ನುಗ್ಗಿದೆ. ಪಡುಬಿದ್ರಿಯಲ್ಲಿ ಕಡಲು ಪ್ರಕ್ಷುಬ್ಧಗೊಂಡಿದ್ದು ಕಡಲ್ಕೊರೆತ ಉಂಟಾಗಿದೆ. ಬೈಂದೂರಿನಲ್ಲಿ ಮಧ್ಯಾಹ್ನ ಧಾರಾಕಾರ ಮಳೆಯಾಗಿದ್ದು, ತಗ್ಗು ಪ್ರದೇಶಗಳು ಜಲಾವೃತಗೊಂಡವು. ರಸ್ತೆಗಳ ಮೇಲೆ ನೀರು ಹರಿಯುತ್ತಿತ್ತು. ಉಡುಪಿ, ಕುಂದಾಪುರ, ಕಾರ್ಕಳ, ಬ್ರಹ್ಮಾವರ, ಕಾಪು, ಹೆಬ್ರಿ ಭಾಗಗಳಲ್ಲೂ ಉತ್ತಮ ಮಳೆಯಾಗಿದೆ.

ಬೈಂದೂರಿನಲ್ಲಿ ಎರಡು ಮನೆಗಳು ಹಾಗೂ ಬ್ರಹ್ಮಾವರದಲ್ಲಿ ಒಂದು ಮನೆಗೆ ಭಾಗಶಃ ಹಾನಿಯಾಗಿದೆ. ಕಳೆದ 24 ಗಂಟೆಗಳಲ್ಲಿ ಉಡುಪಿ 49, ಕುಂದಾಪುರ 59.1, ಕಾರ್ಕಳ 58 ಮಿ.ಮೀ ಸೇರಿ ಜಿಲ್ಲೆಯಲ್ಲಿ ಸರಾಸರಿ 56.1 ಮಿ.ಮೀ ಮಳೆಯಾಗಿದೆ.

ಭಾರಿ ಮಳೆ: ಎಚ್ಚರಿಕೆ‌

ಆಗಸ್ಟ್‌ 8 ಹಾಗೂ 9ರಂದು ಕರಾವಳಿ ಭಾಗಗಳಲ್ಲಿ 205 ಮಿ.ಮೀ ಗಿಂತ ಹೆಚ್ಚು ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಆ.6,7 ಹಾಗೂ 10ರಂದು 115 ಮಿ.ಮೀ ಗಿಂತ ಹೆಚ್ಚು ಮಳೆಯಾಗಬಹುದು ಎಂದು ಮುನ್ಸೂಚನೆ ನೀಡಿದೆ.

Leave a Reply

Your email address will not be published. Required fields are marked *

error: Content is protected !!