ಉಡುಪಿ: ಒಂಟಿ ವೃದ್ಧೆಯ ಹತ್ಯೆಗೈದು ಚಿನ್ನಾಭರಣ ದೋಚಿದ ಹಂತಕರು
ಉಡುಪಿ: ನಗರದ ಹೊರ ವಲಯದ ನಿಟ್ಟೂರಿನ ಮನೆಯಲ್ಲಿದ್ದ ಒಂಟಿ ಮಹಿಳೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಮತ್ತು ನಗದು ದೋಚಿದ ಘಟನೆ ಬುಧವಾರ ರಾತ್ರಿ ನಡೆದಿದೆ.
ರಾಷ್ಟ್ರೀಯ ಹೆದ್ದಾರಿ ನಿಟ್ಟೂರಿನ ವಿಷ್ಣುಮೂರ್ತಿ ದೇವಸ್ಥಾನ ಬಳಿಯ ಮನೆಯ ವೃದ್ಧೆ
ಮಾಲತಿ ಕಾಮತ್ (68)ಬುಧವಾರ ರಾತ್ರಿ ಮಲಗಿದ್ದ ಸಂದರ್ಭ ಮನೆಯೊಳಗೆ ಬಂದ ದುಷ್ಕರ್ಮಿಗಳು ಅವರನ್ನು ತಲೆ ದಿಂಬಿನಲ್ಲಿ ಉಸಿರುಗಟ್ಟಿಸಿ ಕೊಂದು ಮೈ ಮೇಲೆ ಇದ್ದ ಒಡವೆ , ಮಗಳು ಮನೆ ನಿರ್ಮಿಸಲು ಸಾಲ ತೆಗೆಯಲು ಚಿನ್ನಾಭರಣ ಅಡಮಾನವಿಡಲು ತಂದಿಟ್ಟಂತಹ 20 ಪವನ್ ತೂಕದ ಆಭರಣ ಮತ್ತು 60 ಸಾವಿರ ನಗದು ದರೋಡೆಕೋರರು ದೋಚಿ ಪರಾರಿಯಾಗಿದ್ದಾರೆ. ಒಟ್ಟು 6.5 ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನಾಭರಣ ಮತ್ತು ನಗದು ದೋಚಲಾಗಿದೆ.
ಈ ಬಗ್ಗೆ ವೃದ್ಧೆಯ ಮಗಳು ಶಾಂತಿ ಯಾನೆ ದಿವ್ಯ ನಾಯಕ್ ನಗರ ಠಾಣೆಗೆ ದೂರು ನೀಡಿದ್ದು, ಪೊಲೀಸರು ಹಂತಕರ ಪತ್ತೆಗೆ ಬಲೆ ಬೀಸಿದ್ದಾರೆ.
The value should be 6.5 lakhs and not 65 lakhs based on current gold price. Please check