ಉಡುಪಿ: ಎಸ್‌ಐ ಅಮಾನತು ಸಂಘಟನೆಗಳಿಂದ ಉಗ್ರ ಹೋರಾಟದ ಎಚ್ಚರಿಕೆ

ಉಡುಪಿ: ಉಡುಪಿ ನಗರ ಠಾಣಾ ಎಸ್‌ಐ ಅನಂತಪದ್ಮನಾಭ ಅಮಾನತು ಆದೇಶಕ್ಕೆ ಉಡುಪಿ ಶಾಸಕ, ರಕ್ಷಣಾ ವೇದಿಕೆ, ಶ್ರೀರಾಮ ಸೇನೆ, ವಿಶ್ವ ಹಿಂದೂ ಪರಿಷತ್ತು ಸಹಿತ ಉಡುಪಿಯ ಹಲವಾರ ಸಂಘಟನೆಗಳ ವಿರೋಧ ವ್ಯಕ್ತವಾಗಿದೆ.
ಎಸ್‌ಪಿ ನಿಶಾ ಜೇಮ್ಸ್ ದೂರನ್ನು ದಾಖಲಿಸಿಕೊಳ್ಳದೆ, ಕರ್ತವ್ಯಲೋಪ ಮಾಡಿದ ಆರೋಪದಲ್ಲಿ ನಗರ ಠಾಣಾ ಎಸ್‌ಐ ಅನಂತ ಪದ್ಮನಾಭರನ್ನು ಅಮಾನತು ಮಾಡಿದ್ದಾರೆ.

ಶಾಸಕ ರಘುಪತಿ ಭಟ್ಎಸ್‌ಐ ಅನಂತ ಪದ್ಮನಾಭ ಅವರ ಕ್ರಮವನ್ನು ಬೆಂಬಲಿಸಿದ್ದಾರೆ. ಸೌಹಾರ್ದಕ್ಕೆ ಅಡ್ಡಿಯಾಗಬಾರದು ಎನ್ನುವ ಉದ್ದೇಶದಿಂದ ಎಸ್‌ಐ ತೆಗೆದುಕೊಂಡ ಕ್ರಮ ಸರಿಯಾಗಿದೆ. ಅಯೋಧ್ಯೆ ತೀರ್ಪು ಬರಬೇಕಾಗಿದ್ದ ಹಿನ್ನೆಲೆಯಲ್ಲಿ ಸಾಮಾಜಿಕ ಸ್ವಾಸ್ಥ್ಯ ಕಾಪಾಡುವ ದೃಷ್ಟಿಯಿಂದ ಎಸ್‌ಐ ಸರಿಯಾಗಿ ನಡೆದುಕೊಂಡಿದ್ದಾರೆ ಎಂದು ಎಸ್‌ಪಿ ವರ್ತನೆ ವಿರುದ್ಧ ಕಿಡಿಕಾರಿದ್ದಾರೆ.

ಉಡುಪಿ ಜಿಲ್ಲೆಯ ವ್ಯಾಪ್ತಿಯ ಮಟ್ಕಾ, ಗಾಂಜಾ ಮತ್ತಿತರ ದಂಧೆ ವಿರುದ್ಧ ಕ್ರಮ ಕೈಗೊಳ್ಳದವರನ್ನು ಸಸ್ಪೆಂಡ್ ಮಾಡಿ, ಈ ಬಗ್ಗೆ ಗೃಹ ಸಚಿವರು, ಐಜಿಪಿಗೆ ದೂರು ನೀಡಿರುವುದಾಗಿ ಶಾಸಕರು ಹೇಳಿದ್ದಾರೆ

ಅಜ್ಜರಕಾಡು ಭುಜಂಗ ಪಾರ್ಕ್ ನಲ್ಲಿ ಅನ್ಯ ಕೋಮಿನ ಯುವಕ ಮತ್ತು ಹಿಂದು ಯುವತಿ ಸಾರ್ವಜನಿಕವಾಗಿ ಅಸಭ್ಯವಾಗಿ ವರ್ತಿದ್ದಕ್ಕಾಗಿ ಮೂವರು ಯುವಕರು ನೈತಿಕ ಪೊಲೀಸ್‌ಗಿರಿ ನಡೆಸಿರುವ ಘಟನೆಗೆ ಸಂಬಂಧಿಸಿ ಯಾವುದೇ ದೂರು ದಾಖಲಿಸದೆ, ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿಲ್ಲವೆಂಬ ಆರೋಪಕ್ಕಾಗಿ ಅಮಾನತು ಮಾಡಿರುವುದಕ್ಕೆ ಸಾರ್ವಜನಿಕವಾಗಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಕರ್ನಾಟಕ ರಕ್ಷಣಾ ವೇದಿಕೆ ಠಾಣೆಯ ಎದುರು ಉಪವಾಸ ಸತ್ಯಾಗ್ರಹ ಎಚ್ಚರಿಕೆ

ಕರ್ತವ್ಯಲೋಪದ ಆರೋಪವನ್ನು ಅವರ ಮೇಲೆ ಹೊರಿಸಿ ಅವರನ್ನು ಅಮಾನತು ಮಾಡಿರುವುದು ಖಂಡನೀಯ. ಇಲಾಖೆಯ ಹಾಗೂ ಸರಕಾರದ ಅಮಾನವೀಯ ಕ್ರಮವನ್ನು ಕರ್ನಾಟಕ ರಕ್ಷಣಾ ವೇದಿಕೆ ಅತ್ಯಂತ ಕಠಿಣವಾಗಿ ಖಂಡಿಸಿದೆ. ಅವರ ಅಮಾನತು ಆದೇಶವನ್ನು ಎರಡು ದಿನಗಳೊಳಗೆ ರದ್ದುಗೊಳಿಸಿದ್ದೇ ಇದ್ದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ದಿನಾಂಕ ನಗರ ಠಾಣೆಯ ಎದುರು ಉಪವಾಸ ಸತ್ಯಾಗ್ರಹ ವನ್ನು ಹಮ್ಮಿಕೊಂಡು ಉಗ್ರ ಹೋರಾಟವನ್ನು ನಡೆಸಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷರಾದ ಅನ್ಸರ್ ಅಹಮದ್ ಪತ್ರಿಕಾ ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.

ವಿಶ್ವ ಹಿಂದು ಪರಿಷತ್ತ್ ಹಾಗೂ ಭಜರಂಗದಳ ಎಸ್ ಐ ಅಮಾನತು ಆದೇಶ ರದ್ದು ಗೊಳಿಸಲು ಮಂಗಳವಾರ ಎಸ್ಪಿ ನಿಶಾ ಜೆಮ್ಸ್ ಅವರಿಗೆ ಮನವಿ ಸಲ್ಲಿಸಿದರು.


ಅಮಾನತು ಆದೇಶ ಹಿಂಪಡೆಯದಿದ್ದರೆ ಉಗ್ರ ಹೋರಾಟ: ಶ್ರೀ ರಾಮಸೇನೆ.

ಕೆಲವರ ಕುಮ್ಮಕ್ಕಿನಿಂದ ಕರ್ತವ್ಯಲೋಪದ ಆರೋಪ ಹೊರಿಸಿ ಅಮಾನತು ಮಾಡಿರುವುದು ಖಂಡನೀಯ, ಪೋಲಿಸ್ ವರಿಷ್ಠಾಧಿಕಾರಿಯವರ ಈ ಕ್ರಮವನ್ನು ಉಡುಪಿ ಜಿಲ್ಲಾ ಶ್ರೀ ರಾಮಸೇನೆಯು ತೀವ್ರವಾಗಿ ಮಂಡಿಸುತ್ತದೆ.
ಅಮಾನತು ಆದೇಶವನ್ನು ಮುಂದಿನ ೪೮ ಗಂಟೆಗಳಲ್ಲಿ ಹಿಂಪಡೆಯದಿದ್ದರೆ, ಸಮಾನ ಮನಸ್ಕರ ಜೊತೆಗೂಡಿ ಉಗ್ರವಾದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದೆಂದು ಜಿಲ್ಲಾಧ್ಯಕ್ಷ ಜಯರಾಂ ಅಂಬೆಕಲ್ಲು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

1 thought on “ಉಡುಪಿ: ಎಸ್‌ಐ ಅಮಾನತು ಸಂಘಟನೆಗಳಿಂದ ಉಗ್ರ ಹೋರಾಟದ ಎಚ್ಚರಿಕೆ

Leave a Reply

Your email address will not be published. Required fields are marked *

error: Content is protected !!