ಉಡುಪಿ: ಶಾಲಾ ಮಕ್ಕಳ ಓಮಿನಿ ಪಲ್ಟಿ, 18 ವಿದ್ಯಾರ್ಥಿಗಳಿಗೆ ಗಾಯ

ಉಡುಪಿ: ಶಾಲಾ ಮಕ್ಕಳನ್ನು ಸಾಗಿಸುತ್ತಿದ್ದ ಓಮಿನಿ ಕಾರೊಂದು ಪಲ್ಟಿ ಹೊಡೆದು 18 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡ ಘಟನೆ ಅಲೆವೂರು ಪ್ರಗತಿ ನಗರದ ಕಾರಂತ ಕಲಾ ಗ್ರಾಮ ಬಳಿ ನಡೆದಿದೆ.


ಸೋಮವಾರ ಸಂಜೆ ಕರ್ವಾಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳನ್ನು ಮನೆಗೆ ಬಿಡುವ ಸಂದರ್ಭ ಈ ಘಟನೆ ನಡೆದಿದೆ ಎನ್ನಲಾಗಿದೆ.
ಓಮಿನಿ ಕಾರಿನಲ್ಲಿ 22 ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು, ಅವರನ್ನು ಅಲೆವೂರಿನ ಪ್ರಗತಿ ನಗರದ ಕಾಲೋನಿಗೆ ಬಿಡಲು ಹೋಗುತ್ತಿದ್ದಾಗ ಕಾರಿನ ಚಾಲಕನ ನಿಯಂತ್ರಣ ತಪ್ಪಿ ವಾಹನ ಪಲ್ಟಿ ಆಗಿದೆಂದು ಸ್ಥಳೀಯರು ತಿಳಿಸಿದ್ದಾರೆ. ಗಾಯಗೊಂಡ ವಿದ್ಯಾರ್ಥಿಗಳನ್ನು ಉಡುಪಿ ಮಿತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!