ಸಂತೆಕಟ್ಟೆ:”ಚಾಯ್ಸ್ ಫರ್ನಿಚರ್” ಮಳಿಗೆಯ ಶುಭಾರಂಭ
ಉಡುಪಿ: ಸಂತೆಕಟ್ಟೆ ಮೌಂಟ್ ರೋಸರಿ ಚರ್ಚ್ ಬಳಿಯ ಎಕ್ತ ಹೈಟ್ಸ್ ಕಟ್ಟಡದಲ್ಲಿ ನೂತನವಾಗಿ “ಚಾಯ್ಸ್ ಫರ್ನಿಚರ್” ಮಳಿಗೆಯನ್ನು ಲಿಲ್ಲಿ ಕುಲಾಸೊ ರವಿವಾರ ಉದ್ಘಾಟಿಸಿದರು.
ಸಭಾಕಾರ್ಯಕ್ರಮದ ಉದ್ಘಾಟನೆ ಮಾಡಿದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ನೂತನವಾಗಿ ನಿರ್ಮಾಣವಾಗುವ ಮನೆಗಳಿಗೆ, ವಸತಿ ಗೃಹಗಳಿಗೆ ಪೀಠೋಪಕರಣ ಅತೀ ಅಗತ್ಯತೆ ಇದೆ, ಬೆಳೆಯುತ್ತಿರುವ ಸಂತೆಕಟ್ಟೆಯಈ ಭಾಗದಲ್ಲಿ ಆರಂಭಗೊಂಡ ನೂತನ ಉದ್ಯಮ ಯಶಸ್ವಿಗೊಳ್ಳಲಿ ಎಂದರು.
ಚಾಯ್ಸ್ ಫರ್ನಿಚರ್ ನ ಶಾಖೆಯು ಉಡುಪಿ ನಗರದ ಸುತ್ತಮುತ್ತ ಪ್ರಾರಂಭವಾಗಿ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಪೀಠೋಪಕರಣ ನೀಡಲಿ ಎಂದು ಶುಭ ಹಾರೈಸಿದರು. ಸಂತೆಕಟ್ಟೆ ಮೌಂಟ್ ರೋಸರಿ ದೇವಾಲಯದ ಧರ್ಮಗುರು ರೇ. ಡಾ. ಲೆಸ್ಲಿ ಡಿಸೋಜ. ತೊಟ್ಟಂ ಅನ್ನಾ ಮಾತೆಯ ದೇವಾಲಯದ ಧರ್ಮಗುರು ರೇ. ಫಾ. ಫ್ರಾನ್ಸಿಸ್ ಕರ್ನೇಲಿಯೋ ಅವರು ಧಾರ್ಮಿಕ ವಿಧಿವಿಧಾನ ನೆರವೇರಿಸಿ, ಸಂಸ್ಥೆ ಉತ್ತರೋತ್ತರ ಅಭಿವೃದ್ಧಿ ಹೊಂದಲಿ, ಗ್ರಾಹಕರಿಗೆ ಉತ್ತಮ ದರ್ಜೆಯ ಪೀಠೋಪಕರಣ ಒದಗಿಸಿ ಒಳ್ಳೆಯ ಸೇವೆಯನ್ನು ನೀಡುವಂತಾಗಲಿ ಎಂದರು ಶುಭ ಹಾರೈಸಿದರು .
ಮಳಿಗೆಯ ಮಾಲಕ ಪಾಸ್ಕಲ್ ಕುಲಾಸೋ ಮಾತನಾಡಿ ನೂತನ ನಮ್ಮ ಈ ಮಳಿಗೆಯಲ್ಲಿ ಮನೆ , ವಸತಿಗ್ರಹ, ಕಚೇರಿಗಳಿಗೆ ಬೇಕಾಗುವ ವಿಶಿಷ್ಟ ಶೈಲಿಯ ಪೀಠೋಪಕರಣ, ಕರ್ಟನ್, ಮ್ಯಾಟ್ರೆಸ್ , ಫರ್ನ್ ಶಿಂಗ್, ಸಹಿತ ಹಲವಾರು ವಿಶಿಷ್ಟ ಶೈಲಿಯ ಉಪಕರಣಗಳು ಲಭ್ಯವಿದೆ ಎಂದರು. ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಪೀಠೋಪಕರಣಗಳನ್ನು ಆಧುನಿಕ ಶೈಲಿಯಲ್ಲಿ ಕ್ಲಪ್ತ ಸಮಯದಲ್ಲಿ ಉಚಿತ ಸಾಗಾಟ ವ್ಯವಸ್ಥೆಯಲ್ಲಿ ಗ್ರಾಹಕರಿಗೆ ತಲುಪಿಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸಂತೆಕಟ್ಟೆ ಮೌಂಟ್ ರೋಜರಿಯೋ ದೇವಾಲಯದ ಪಾಲನ ಮಂಡಳಿಯ ಉಪಾಧ್ಯಕ್ಷ ಬ್ಯಾಪ್ಟಿಸ್ಟ್ ಡಾಯಾಸ್ , ಮಾಂಡವಿ ಬಿಲ್ಡರ್ ಗ್ಲೆನ್ ಡಯಾಸ್, ಕರಾವಳಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಉಮೇಶ್ ಶೆಟ್ಟಿ ,ಕ್ಯಾಥೋಲಿಕ್ ಸಭಾ ಕೇಂದ್ರೀಯ ಕಾರ್ಯದರ್ಶಿ ಸಂತೋಷ್ ಕರ್ನೇಲಿಯೋ ಉಪಸ್ಥಿತರಿದ್ದರು .ಮಾಲಕ ಪಾಸ್ಕಲ್ ಕುಲಾಸೋ ಧರ್ಮ ಪತ್ನಿ ಸೆಲಿನ್ ಕುಲಾಸೋ ಸ್ವಾಗತಿಸಿ, ಸ್ಟೀವನ್ ಕುಲಾಸೋ ಉದ್ಯಾವರ ನಿರೂಪಿಸಿ ,ವಂದಿಸಿದರು.