ಉಡುಪಿ: ಜಿಲ್ಲೆಯಲ್ಲಿ ಮತ್ತೆ ರಿಕ್ರಿಯೇಶನ್ ಕ್ಲಬ್ ಪ್ರಾರಂಭ!
ಉಡುಪಿ: ಜಿಲ್ಲೆಯಾದ್ಯಂತ ಮತ್ತೆ ರಿಕ್ರಿಯೇಶನ್ ಕ್ಲಬ್ ಪ್ರಾರಂಭವಾಗಿದ್ದು ಇದಕ್ಕೆ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳೇ ಸಾಥ್! ಜಿಲ್ಲೆಯಲ್ಲಿ 20 ಕ್ಕೂ ಹೆಚ್ಚೂ ಕ್ಲಬ್‌ಗಳು ಅನಧಿಕೃತವಾಗಿ ಕಾರ್ಯಚರಿಸುತ್ತಿದೆ.
ಉಡುಪಿ ಹೊರವಲಯದ ಪಂದುಬೆಟ್ಟು, ಉಡುಪಿ ನಗರದ ಪ್ರಧಾನ ಅಂಚೆ ಕಚೇರಿ ಎದುರು, ಮಣಿಪಾಲ, ಕುಂದಾಪುರದ ಗೋಳಿಯಂಗಡಿ, ಸಿದ್ದಾಪುರ, ಕೋಟೇಶ್ವರ ಕಾಗೇರಿ, ಬೈಂದೂರು ಸೇರಿದಂತೆ ವಿವಿದೆಡೆ ರಿಕ್ರಿಯೇಶನ್ ಕ್ಲಬ್ ಕಾನೂನು ಬಾಹಿರವಾಗಿ ಪ್ರಾರಂಭವಾಗಿದೆ. ಪೊಲೀಸರು ಅಪರೂಪಕ್ಕೆ ಎಂಬಂತೆ ಅಡ್ಡೆ ಮಾಲೀಕರಿಗೆ ಮಾಹಿತಿ ನೀಡಿ ದಾಳಿ ನಡೆಸುತ್ತಿದ್ದಾರೆಂಬ ಮಾಹಿತಿ ಸಾರ್ವಜನಿಕವಾಗಿ ಕೇಳಿ ಬರುತ್ತಿದೆ.
ಇದಕ್ಕೆ ಪೂರಕ ಎಂಬಂತೆ ಸೋಮವಾರ ಕುಂದಾಪುರದ ಕೋಟೇಶ್ವರ ಕ್ಲಬ್ ಗೆ ದಾಳಿ ಮಾಡಿದಾಗ ಅಲ್ಲಿನ ಸಿಸಿ ಟಿವಿ ಆಫ್ ಮಾಡಿರುವುದು ಇದಕ್ಕೆ ಸಾಕ್ಷಿಯಾಗಿದೆನ್ನುತ್ತಾರೆ ಸ್ಥಳೀಯರು. ಕ್ಲಬ್ ಸದಸ್ಯತ್ವ ಹೊಂದಿದವರಿಗೆ ಮಾತ್ರ ರಿಕ್ರಿಯೇಶನ್ ಕ್ಲಬ್ ನಲ್ಲಿ ಪ್ರವೇಶ ಇರುತ್ತದೆ. ಆದರೆ ಜಿಲ್ಲೆಯಲ್ಲಿನ ಎಲ್ಲಾ ಕ್ಲಬ್‌ಗಳು ನಿಯಮಗಳನ್ನು ಗಾಳಿಗೆ ತೂರಿ ಕಾರ್ಯಚರಿಸುತ್ತಿದೆ.
ಏಕಕಾಲದಲ್ಲಿ ಕಾರ್ಯಾಚರಣೆ
ಕುಂದಾಪುರ ಎಎಸ್ಪಿ ಹರಿರಾಮ್ ಶಂಕರ್ ಮಾರ್ಗದರ್ಶನದಲ್ಲಿ, ವೃತ್ತ ನಿರೀಕ್ಷಕ ಗೋಪಿಕೃಷ್ಣ ನೇತೃತ್ವದಲ್ಲಿ ಬೈಂದೂರು ವೃತ್ತ ನಿರೀಕ್ಷಕ ಸುರೇಶ್ ಜಿ.ನಾಯ್ಕ್ , ಕುಂದಾಪುರ ಎಸ್ಸೈ ಹರೀಶ್ ಆರ್. ನಾಯ್ಕ್, ಶಂಕರನಾರಾಯಣ ಎಸ್ಸೈ ಶ್ರೀಧರ ನಾಯ್ಕ್ ಸಿಬ್ಬಂದಿಗಳೊಂದಿಗೆ ಏಕಕಾಲದಲ್ಲಿ ಈ ದಾಳಿ ನಡೆಸಿದ್ದರು. ಬೈಂದೂರು, ಕುಂದಾಪುರ, ಶಂಕರನಾರಾಯಣ ಠಾಣೆಯಲ್ಲಿ ಪ್ರತ್ಯೇಕವಾಗಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
ಕುಂದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕೋಟೇಶ್ವರ ಗ್ರಾಮದ ಕಾಗೇರಿಯಲ್ಲಿರುವ ರಿಕ್ರಿಯೇಶನ್ ಕ್ಲಬ್‌ನಲ್ಲಿ ಜುಗಾರಿ ಆಡುತ್ತಿದ್ದ ಬಸ್ರೂರು ಕೋಳ್ಕೆರೆ ಸೂರ ಪೂಜಾರಿ (65), ಕರ್ಕುಂಜೆ ಕೆಂಚನೂರು ಜಯರಾಜ (44), ಕೋಟೇಶ್ವರ ಅಂಕದಕಟ್ಟೆ ಎಸ್ ಕುಮಾರ್ (54), ಯಡಾಡಿ ಮತ್ಯಾಡಿ ಗಣೇಶ (46), ಕುಂದಾಪುರ ಹಂಗಳೂರು ಸಂತೋಷ (42), ಕುಂದಾಪುರದ ಶೀನ ಪೂಜಾರಿ (64), ಕೋಟೇಶ್ವರ ಮಂಜುನಾಥ (45) ಕೋಟೇಶ್ವರ ಅರಳಗುಡ್ಡೆ ಗಣೇಶ (32), ಮೂಡುಗೋಪಾಡಿ ನಾರಾಯಣ (55), ಶಂಕರನಾರಾಯಣ ಕುಪ್ಪಾರು ಉದಯ ಆಚಾರ (35), ಮೂಡ್ಲಕಟ್ಟೆ ಉಳ್ಳೂರು ಜಯಪ್ರಕಾಶ (49), ಅಂಕದಕಟ್ಟೆ ರಾಮಣ್ಣ ಶೆಟ್ಟಿ (55), ಮಾರ್ಕೋಡು ಹಾಡಿಮನೆ ಉದಯ ಕುಮಾರ್ ಶೆಟ್ಟಿ (42) ಆರೋಪಿಗಳು.
ಶಂಕರನಾರಾಯಣ ಪೊಲೀಸ್ ಠಾಣೆ ವ್ಯಾಪ್ತಿಯ ಶ್ರೀ ಲಕ್ಷ್ಮೀ ಕ್ಲಬ್‌ನಲ್ಲಿ ಇಸ್ಪೀಟ್ ಆಡುತ್ತಿದ್ದ, ಸಿದ್ದಾರ್ಥ ಶೆಟ್ಟಿ, ಸಂತೋಷ ಕುಮಾರ್ ಶೆಟ್ಟಿ, ಹರೀಶ್ ಶೆಟ್ಟಿ, ರಮೇಶ್ ಕುಲಾಲ್, ವಿಲ್ಸ್‌ನ್, ಉದಯ ಭಂಡಾರಿ, ಹರೀಶ್ ತೋಳಾರ್, ಆನಂದ ಪೂಜಾರಿ, ಮಹಾಬಲ, ಮಂಜುನಾಥ, ಭುಜಂಗ ಶೆಟ್ಟಿ ಆರೋಪಿಗಳು.
ಸಿದ್ದಾಪುರ ಗ್ರಾಮ ದೊಟ್ಟಿನಬೇರು ಶಾಂತ ರಿಕ್ರಿಯೇಷನ್ ಕ್ಲಬ್‌ನಲ್ಲಿ ಜುಗಾರಿ ಆಡುತ್ತಿದ್ದ ಮಹೇಶ್ ಪೂಜಾರಿ, ಅನಿಲ ಕೆ. ಶೆಟ್ಟಿ, ಹಿರಿಯಣ್ಣ ಶೆಟ್ಟಿ, ಅವಿನಾಶ್, ನಾಗರಾಜ ಎನ್, ರಂಗಸ್ವಾಮಿ ಆರೋಪಿಗಳು.
ಬೈಂದೂರು ಯಡ್ತರೆ ಗ್ರಾಮದ ಎಂಜಿ ರಿಕ್ರಿಯೇಷನ್ ಕ್ಲಬ್‌ನಲ್ಲಿ ಅಂದರ್ ಬಾಹರ್ ಆಡುತ್ತಿದ್ದ ಬೈಂದೂರು ಪ್ರಶಾಂತ (46), ಅರೆಹೊಳೆ ಸುರೇಶ (46), ಬಿಜೂರು ರಾಜೇಶ (36), ಭಟ್ಕಳ ರಾಜು ರಾಮ ನಾಯಕ್ (40), ಬಂಕೇಶ್ವರ ಗಣೇಶ (46), ಬಾಡಾ ಸತೀಶ (40), ಪಡುವರಿ ಜಯಂತ (35), ಗಂಟಿಹೊಳೆ ಬಿಜೂರು ವಿರೇಂದ್ರ ಶೆಟ್ಟಿ (50), ಬಂಕೇಶ್ವರ ಗೋಪಾಲ (47), ಮಯ್ಯಾರಿ ಸೂರ್ಕೂಂದ ರಾಘವೇಂದ್ರ (43), ತಾರಾಪತಿ ನಾರಾಯಣ ಖಾರ್ವಿ (55) ಎಂಬವರನ್ನು ವಶಕ್ಕೆ ಪಡೆದಿದ್ದಾರೆ. .