ಲಾಠಿ ಬೀಸುವ ಬದಲು ಮಾಸ್ಕ್ ನೀಡಿದ ಉಡುಪಿ ಪೊಲೀಸರು
ಉಡುಪಿ: ಕೊರೋನಾ ಸೋಂಕು ತಡೆಯಲು ದೇಶದೆಲ್ಲೆಡೆ ಲಾಕ್ ಡೌನ್, ಎಲ್ಲಿ ನೋಡಿದರೂ ಪೊಲೀಸರು ದಿನಸಿ ಅಂಗಡಿ, ಮನೆಯಿಂದ ಹೊರ ಹೋಗುವವರಿಗೆ ಅಲ್ಲಿ ಲಾಠಿ ಬೀಸಿದರು, ಇಲ್ಲಿ ಬೀಸಿದರು ಎಂಬ ಸುದ್ಧಿ ನಡುವೆ ಉಡುಪಿ ಪೊಲೀಸರು ಇದಕ್ಕೆ ವ್ಯತಿರಿಕ್ತ ಎಂಬಂತೆ ನಡೆದುಕೊಂಡು ಎಲ್ಲಾ ಪೊಲೀಸರಿಗೂ ಮಾದರಿಯಾಗಿದ್ದಾರೆ.
ಇಂದು ಕೂಡ ಉಡುಪಿ ನಗರದಲ್ಲಿ ಬೈಕ್‌ನಲ್ಲಿ ಮಾಸ್ಕ್ ಹಾಕದೆ ಸಂಚರಿಸುತ್ತಿದ್ದರು. ಪ್ರತಿನಿತ್ಯ ಬೈಕ್ ನಿಲ್ಲಿಸಿ ವಿಚಾರಿಸಿದಾಗ ಎಲ್ಲರದ್ದು ಒಂದೇ ಉತ್ತರ, ಸರ್ ಮೆಡಿಕಲ್ ಶಾಪ್‌ನಲ್ಲಿ ಮಾಸ್ಕ ಇಲ್ಲ ಎಂಬ ಉತ್ತರ.
ಅದಕ್ಕಾಗಿ ಇಂದು ಉಡುಪಿ ವೃತ್ತ ನಿರೀಕ್ಷಕರಾದ ಮಂಜುನಾಥ್ ನಾಯಕ್ ಅವರು ಬಹಳಷ್ಟು ಕಷ್ಟ ಪಟ್ಟು 50 ಮಾಸ್ಕ ಸಂಗ್ರಹಿ ಉಡುಪಿ ಸಿಟಿ ಬಸ್ ನಿಲ್ದಾಣ ಬಳಿ ನಿಂತುಕೊಂಡಿದ್ದರು.
ಮಾಸ್ಕ್ ಧರಿಸಿದ ಬೈಕ್ ಸವಾರರನ್ನು ತಡೆದು ನಿಲ್ಲಿಸಿ ಅವರಿಗೆ ಮನೆಯಿಂದ ಆದಷ್ಟು ಹೊರ ಬರದಂತೆ, ಮಾಸ್ಕ್ ಸ್ವತ: ಅವರೇ ಧರಿಸುತ್ತಿದ್ದರು. ಇವರ ಈ ಕಾರ್ಯಕ್ಕೆ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.
Ideal police officer
Ideal police officer