ಉಡುಪಿ: ಜನತಾ ಕರ್ಫ್ಯೂಗೆ ಜಿಲ್ಲೆಯ ಜನರ ಸಂಪೂರ್ಣ ಬೆಂಬಲ

ಉಡುಪಿ: (ಉಡುಪಿ ಟೈಮ್ಸ್ ವರದಿ) ಪ್ರಧಾನಿ ನರೇಂದ್ರ ಮೋದಿಯವರ ಜನತಾ ಕರ್ಫ್ಯೂಗೆ ಜಿಲ್ಲೆಯ ಜನ ಬೆಂಬಲ ವ್ಯಕ್ತಪಡಿಸಿದ್ದಾರೆ. ಮಹಾ ಮಾರಿ ಕೊರೋನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಜನರು ತಮ್ಮ ಆರೋಗ್ಯದೃಷ್ಟಿಯಿಂದ ಇಂದು ಮನೆಯಿಂದ ಹೊರ ಬರಲೇ ಇಲ್ಲ.


ನಗರದಲ್ಲಿ ಜನರು ಮನೆಯಿಂದ ಹೊರಗೆ ಬರದೆ ಇರುವುದರಿಂದ ರಸ್ತೆಯೆಲ್ಲ ಖಾಲಿ ಖಾಲಿಯಾಗಿದೆ, ಬಸ್ ನಿಲ್ದಾಣದಲ್ಲಿ, ಆಟೋ ಸ್ಟ್ಯಾಂಡ್ ಗಳಲ್ಲಿ ಸರದಿಯ ಸಾಲಿಲ್ಲ, ಅಂಗಡಿಮುಂಗಟ್ಟು ತೆರೆಯಲೇ ಇಲ್ಲ,


ಬಂದ್, ಕರ್ಫ್ಯೂ ಎಂದರೆ ನಮಗೆ ನೆನಪಾಗುವುದೇ ಎಲ್ಲಿ ನೋಡಿದರಲ್ಲಿ ಪೊಲೀಸ್ ಸರ್ಪಗಾವಲು, ಆದರೆ ಈ ಜನತಾ ಕರ್ಫ್ಯೂಗೆ ನಗರದಲ್ಲಿ ಒಬ್ಬನೇ ಖಾಕಿ ಪಡೆ ಕಾಣಸಿಗಲಿಲ್ಲ ಅದೇ ಈ ಬಂದ್ ನ ವಿಶೇಷ.

ದೇಶದಲ್ಲಿ ಕೊರೊನಾ ಸೋಂಕು 312ರ ಗಡಿದಾಟಿದೆ. ಸೋಂಕು ತಡೆಗಟ್ಟಲು ನಮಗೆ ನಾವೇ ಮುಂಜಾಗ್ರತೆ ವಹಿಸಿ ಮಹಾಮಾರಿ ಹಬ್ಬುವುದನ್ನ ನಿಯಂತ್ರಿಸಬೇಕಿದೆ. ಪ್ರಧಾನಿ ಮೋದಿ ದೇಶದ ಜನತೆಗೆ ಸ್ವಯಂ ಗೃಹಬಂಧನ ವಿಧಿಸಿಕೊಳ್ಳುವಂತೆ ಕರೆ ನೀಡಿದ್ದಾರೆ. ಇದಕ್ಕೆ ಎಲ್ಲೆಡೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.

ಕೊರೊನಾ ವೈರಾಣು ಹಿರಿಯ ನಾಗರಿಕರು ಹಾಗೂ ಮಕ್ಕಳನ್ನು ಬೇಗ ಆವರಿಸುತ್ತದೆ. ಹಾಗಾಗಿ 60 ವರ್ಷ ಮೇಲ್ಪಟ್ಟ ವೃದ್ಧರು ಮತ್ತು 10 ವರ್ಷದೊಳಗಿನ ಮಕ್ಕಳು ಹೊರಗೆ ಬಾರದಂತೆ ಪ್ರಧಾನಿ ಮನವಿ ಮಾಡಿದ್ದಾರೆ.

ಕೊರೊನಾ ವೈರಾಣು ವಿರುದ್ಧ ವೈದ್ಯರು, ನರ್ಸ್‍ಗಳು, ಆಸ್ಪತ್ರೆ ಸಿಬ್ಬಂದಿ, ಆರೋಗ್ಯ ಅಧಿಕಾರಿಗಳು, ಮಾಧ್ಯಮವರ್ಗದವರು, ಆಟೋ, ಬಸ್, ರೈಲು ಸೇವೆ, ಪೊಲೀಸರು ಸೇರಿದಂತೆ ನಾನಾ ಕ್ಷೇತ್ರದ ಜನತೆ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಸೇವೆಯನ್ನ ಗೌರವಿಸಿ ಸಂಜೆ 5ಗಂಟೆಗೆ ಚಪ್ಪಾಳೆ ಹೊಡೆದು, ಗಂಟೆ ಬಾರಿಸುವ ಮೂಲಕ ಅಭಿನಂದನೆ ಸಲ್ಲಿಸುವಂತೆ ಪ್ರಧಾನಿ ಮನವಿ ಮಾಡಿದ್ದಾರೆ. ಇದಕ್ಕೆ ಜನರು ಬಹುಪರಾಕ್ ಎಂದಿದ್ದಾರೆ.

ಮೋದಿ ಸ್ವಯಂ ಕರ್ಫ್ಯೂ ಹೇರಿಕೊಂಡು ಕೊರೋನಾ ವಿರುದ್ಧ ಹೋರಾಡುವಂತೆ ಕೊಟ್ಟ ಕರೆಗೆ ರಾಜ್ಯದಲ್ಲಿ ಉತ್ತಮ ಪ್ರತಿಕ್ರಿಯೆ ಬಂದಿದೆ. ಎಲ್ಲರೂ ನಾವ್ ಜನತಾ ಕರ್ಫ್ಯೂಗೆ ನಾವು ಬೆಂಬಲಿಸುತ್ತೇವೆ ಅಂದಿದ್ದಾರೆ. ಜನತಾ ಕರ್ಫ್ಯೂಗೆ ಕರುನಾಡೇ ಸ್ತಬ್ಧವಾಗಲಿದೆ. ಹೋಟೆಲ್, ಸಾರಿಗೆ, ಅಂಗಡಿ ಮುಂಗಟ್ಟುಗಳು ಬಂದ್ ಆಗಲಿದೆ. ರೈಲು ಸೇವೆ ಕೂಡ ಸ್ತಬ್ಧಗೊಂಡಿದೆ

1 thought on “ಉಡುಪಿ: ಜನತಾ ಕರ್ಫ್ಯೂಗೆ ಜಿಲ್ಲೆಯ ಜನರ ಸಂಪೂರ್ಣ ಬೆಂಬಲ

  1. Nice photos and news coverage. People are really take more care of their health. Excellent response to the government order. Let the people of India stick together like this in such kind of other situations also.

Leave a Reply

Your email address will not be published. Required fields are marked *

error: Content is protected !!