ಉಡುಪಿ: ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಪೈಂಟ್ ಫ್ಯಾಕ್ಟರಿ ಪಾಲುದಾರ ಆತ್ಮಹತ್ಯೆ
ಉಡುಪಿ: ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಪೈಂಟ್ ಫ್ಯಾಕ್ಟರಿ ಪಾಲುದಾರ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಟ್ಪಾಡಿ ಬೀಡಿನಗುಡ್ಡೆ ಬಳಿ ನಡೆದಿದೆ.
ಹಂಸರಾಜ್ ನಾಯಕ್ (೩೫) ಇಂದು ಮಧ್ಯಾಹ್ನ ತನ್ನ ಮನೆಯಲ್ಲಿ ಯಾರು ಇಲ್ಲದ ಸಂದರ್ಭ ಮನೆಯ ಬೆಡ್ ರೂಮ್ನಲ್ಲಿರುವ ಫ್ಯಾನ್ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ನೆರೆಮನೆಯವರು ಮನೆಯ ಕಿಟಕಿಯಲ್ಲಿ ನೋಡಿದಾಗ ನೇತಾಡಿಕೊಂಡಿರುವುದನ್ನು ಕಂಡು ನಗರ ಠಾಣಾಗೆ ಮಾಹಿತಿ ನೀಡಿದ್ದಾರೆ.
ಪತ್ನಿ ಸಂತೆಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಉದ್ಯೋಗದಲ್ಲಿದ್ದು, ಮೃತರಿಗೆ ಇಬ್ಬರು ಮಕ್ಕಳು ಇದ್ದಾರೆ. ಹೆತ್ತವರು ಬೆಂಗಳೂರಿನಲ್ಲಿ ವಾಸಿಸುತ್ತಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಮಣಿಪಾಲದ ಕೈಗಾರಿಕ ಪ್ರದೇಶದಲ್ಲಿ ಪೈಂಟ್ ಫ್ಯಾಕ್ಟರಿಯ ಪಾಲುದಾರ ಆಗಿರುವ ಹಂಸರಾಜ್ ವ್ಯವಹಾರದಲ್ಲಿ ಆದ ನಷ್ಟಕ್ಕೆ ಮನನೊಂದು ಆತ್ಮಹತ್ಯೆ ಮಾಡಿರುವ ಸಾಧ್ಯತೆ ಇರಬಹುದೆಂದು ಪೊಲೀಸರು ತಿಳಿಸಿದ್ದಾರೆ.