ಉಡುಪಿ: ವಿದೇಶದಿಂದ ಬಂದ 90 ಉದ್ಯೋಗಿಗಳ ಮೇಲೆ ತೀವೃ ನಿಗಾ
ಉಡುಪಿ: ಜಿಲ್ಲೆಯಲ್ಲಿ ಕೊರೊನಾ ಬಗ್ಗೆ ಜಿಲ್ಲಾ ಆರೋಗ್ಯ ಇಲಾಖೆ ಸಮಾರೋಪದಲ್ಲಿ ಮುನ್ನೆಚ್ಚರಿಕೆ ಕ್ರಮವನ್ನು ಕೈಗೊಂಡಿದೆ. ಫೆ.29 ರಿಂದ ಮಾ.16 ವರೆಗೆ ವಿದೇಶದಿಂದ ಬಂದ 90 ಜನರ ಮೇಲೆ ತೀವೃ ನಿಗಾ ವಹಿಸಿದ್ದಾರೆ.
ಕಳೆದ ತಿಂಗಳಿನಿಂದ ವಿದೇಶದಲ್ಲಿದ್ದ 90 ಜನ ಉದ್ಯೋಗಿಗಳು ರಜೆ ನಿಮಿತ್ತ, ಮನೆಯಲ್ಲಿನ ಸಮಾರಂಭಗಳಿಗೆ ಭಾರತಕ್ಕೆ ಬಂದವರ ಮನೆಯಲ್ಲೇ ತೀವೃ ನಿಗಾ ಇರಿಸಿಲಾಗುತ್ತಿದೆಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.
ಉಡುಪಿಯಲ್ಲಿ ಈಗಾಗಲೇ ಕೊರೋನಾ ಶಂಕಿತ 9 ಜನರ ಪರೀಕ್ಷೆ ಮಾಡಲಾಗಿದೆ. ಇವರೆಲ್ಲರ ವೈದ್ಯಕೀಯಾ ಪರಿಕ್ಷೆಯ ವರದಿ ಬಂದಿದ್ದು, ಎಲ್ಲಾ ರೋಗಿಗಳಲ್ಲಿ ನೆಗೆಟಿವ್ ವರದಿ ಬಂದಿದೆ ಎಂದರು. ವಿದೇಶದಿಂದ ಬಂದ 90 ಜನರ ಮೇಲೂ ವಿಶೇಷ ನಿಗಾ ವಹಿಸಲು ಮನೆಯವರಿಗೆ ತಿಳಿಸಲಾಗಿದೆ. ಪ್ರತಿ ಬಾರಿಯೂ ಹೊರ ಹೋಗಿ ಬಂದ ಮೇಲೆ ಸ್ವಚ್ಚವಾಗಿ ಕೈತೊಳೆಯ ಬೇಕು, ಹಾಗೂ ಮುಖಕ್ಕೆ ಕಡ್ಡಾಯವಾಗಿ ಮಾಸ್ಕ್ ಧರಿಸಲೇ ಬೇಕೆಂಬ ಸೂಚನೆ ನೀಡಲಾಗಿದೆ ಎಂದರು. ಇವರೆಲ್ಲರನ್ನು ಮತ್ತೆ 14 ದಿನ ನಿಗಾ ವಹಿಸಲಾಗುವುದು, ದಿನ ನಿತ್ಯ ಆರೋಗ್ಯ ಇಲಾಖೆ ಸಿಬ್ಬಂದಿಗಳು ಅವರೆಲ್ಲರ ಆರೋಗ್ಯ ಬಗ್ಗೆ ಮಾಹಿತಿ ಪಡೆಯಲಾಗುವುದೆಂದರು.