ಉಡುಪಿ: ಅನಗತ್ಯ ನಗರದಲ್ಲಿ ಸಂಚರಿಸುತ್ತೀರಾ ಎಚ್ಚರ!, 13 ವಾಹನ ವಶಕ್ಕೆ

ಉಡುಪಿ: ಅಗತ್ಯವಿಲ್ಲದೆ ಮನೆಯಿಂದ ಹೊರ ಬಂದು ಬೈಕ್ ,ಜೀಪ್ ಗಳಲ್ಲಿ ತಿರುಗಾಡುವವರಿಗೆ ಬಿಸಿ ಮುಟ್ಟಿಸಿದ ಉಡುಪಿ ಪೊಲೀಸರು.
ಅಗತ್ಯ ವಸ್ತುಗಳ ಖರೀದಿಗೆ ಬೆಳಿಗ್ಗೆ7 ರಿಂದ 11 ರವರೆಗೆ ಜಿಲ್ಲಾಡಳಿತ ಅವಕಾಶ ಮಾಡಿಕೊಟ್ಟಿದ್ದರೂ, ಆ ಸಮಯವಲ್ಲದೆ ಬೇರೆ ಸಮಯದಲ್ಲಿ ಬೇಕಾಬಿಟ್ಟಿ ನಗರದಲ್ಲಿ ಸಂಚರಿಸಿದ 12 ಬೈಕ್ ಮತ್ತು ಒಂದು ಬೋಲೆರೊ ವಾಹನವನ್ನು ಉಡುಪಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬುಧವಾರ ನಗರದ ಬೀಡಿನಗುಡ್ಡೆ, ಕಲ್ಸಂಕ ಮತ್ತು ಕರಾವಳಿ ಜಂಕ್ಷನ್‌ಗಳಲ್ಲಿ ಯಾವುದೇ ಕೆಲಸ ಕಾರ್ಯಗಳಿಲ್ಲದೆ ಬೇಕಾಬಿಟ್ಟಿ ಸುತ್ತಾಡುತ್ತಿದ್ದ ವಾಹನಗಳನ್ನು ಉಡುಪಿ ವೃತ್ತ ನೀರೀಕ್ಷಕ ಮಂಜುನಾಥ್ ನಾಯಕ್, ಉಡುಪಿ ಠಾಣಾಧಿಕಾರಿಗಳಾದ ಸಕ್ತಿವೇಲು, ಸದಾಶಿವ ಮತ್ತು ಸಿಬ್ಬಂದಿಗಳು ವಾಹನಗಳನ್ನು ವಶಕ್ಕೆ ಪಡೆದು ನಗರ ಠಾಣೆಯಲ್ಲಿ ಇರಿಸಿದ್ದಾರೆ.

1 thought on “ಉಡುಪಿ: ಅನಗತ್ಯ ನಗರದಲ್ಲಿ ಸಂಚರಿಸುತ್ತೀರಾ ಎಚ್ಚರ!, 13 ವಾಹನ ವಶಕ್ಕೆ

Leave a Reply

Your email address will not be published. Required fields are marked *

error: Content is protected !!