ಉಡುಪಿ ರಾಷ್ಟ್ರೀಯ ಹೆದ್ದಾರಿ ಗ್ಯಾಸ್ ಟ್ಯಾಂಕರ್ ಪಲ್ಟಿ ನಿಟ್ಟುಸಿರು ಬಿಟ್ಟ ಜನತೆ
ಉಡುಪಿ :ಇಂದು ಮುಂಜಾನೆ ರಾಷ್ಟ್ರೀಯ ಹೆದ್ದಾರಿ ಬಲೈಪಾದೆಯಲ್ಲಿ ಅಡುಗೆ ಅನಿಲ ಹೆರಿಕೊಂಡು ಹೋಗುತ್ತಿದ್ದ ಗ್ಯಾಸ್ ಟ್ಯಾಂಕರ್ ಉರುಳಿ ಆತಂಕ ಸೃಷ್ಟಿಯಾಗಿರುವುದನ್ನು ಇಂಡಿಯನ್ ಆಯಿಲ್ ಕಂಪೆನಿ, ಉಡುಪಿ ಪೊಲೀಸ್ ಹಾಗೂ ಅಗ್ನಿಶಾಮಕ ದಳದ ಸಕಾಲಿಕ ಕ್ರಮದಿಂದ ಸ್ಥಳಿಯರಲ್ಲಿದ್ದ ಆತಂಕ ದೂರವಾಗಿದೆ.
ಮಂಗಳೂರಿನಿಂದ ಬೆಳಗಾಂಗೆ ಅಡುಗೆ ಅನಿಲವನ್ನು ಹೆರಿಕೊಂಡು ಹೋಗುತ್ತಿದ್ದ ಟ್ಯಾಂಕರ್‌ನ ಚಾಲಕ ಕಟಪಾಡಿ ತನ್ನ ವಾಹನಕ್ಕೆ ಡಿಸೇಲ್ ತುಂಬಿಸಿ ಹೋಗುವಾಗ ತನ್ನ ಸ್ವೈಪ್ ಕಾರ್ಡನ್ನು ಪೆಟ್ರೊಲ್ ಪಂಪ್‌ನಲ್ಲೇ ಮರೆತು ಬಿಟ್ಟು ಹೋಗಿದ್ದ . ಬಲೈಪಾದೆ ಬಳಿ ಬರುವಾಗ ತಾನು ಕಾರ್ಡ ಬಿಟ್ಟು ಬಂದಿರುವುದು ಗೊತ್ತಾದಾಗ ಟ್ಯಾಂಕರ್ ಅನ್ನು ಅಲ್ಲೆ ತಿರುಗಿಸಲು ಪ್ರಯತ್ನಪಟ್ಟಾಗ ವಾಹನವು ಆತನ ಹತೋಟಿಗೆ ಬರದೆ ತಕ್ಷಣ ಮಗುಚಿಬಿತ್ತು.
ಅದೇ ದಾರಿಯಲ್ಲಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಕಾರಿನಲ್ಲಿ ಹೋಗುವ ಪ್ರಯಾಣಿಕರು ಟ್ಯಾಂಕರ್ ಚಾಲಕ ಆಯುದ್ದೀನ್ ವಾಹನದಲ್ಲಿ ಸಿಲುಕಿಕೊಂಡಿರುವವನ್ನು ನೋಡಿ ರಕ್ಷಿಸಿದರು, ಹಾಗೂ ಪೊಲೀಸರಿಗೆ ಮಾಹಿತಿ ನೀಡಿದರು.
ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಮಂಗಳೂರು ಕಡೆ ಹೋಗುವ ವಾಹನವನ್ನು ಏಕಮುಖ ರಸ್ತೆಯಲ್ಲಿ ಸಂಚರಿಸಲು ಅನುವು ಮಾಡಿಕೊಟ್ಟರು. ಮಂಗಳೂರಿನಿಂದ ಆಗಮಿಸಿದ ಆಯಿಲ್ ಕಂಪೆನಿಯ ತಂತ್ರಜ್ಜಾರು. ಪೊಲೀಸ್ ಅಗ್ನಿಶಾಮಕ ದಳದ ಸಿಬ್ಬಂದಿಗಳ ಸಹಕಾರದೊಂದಿಗೆ ಸುಮಾರು ಒಂದೂವರೇ ತಾಸಿಗಿಂತ ಹೆಚ್ಚು ಶ್ರಮಪಟ್ಟು ಕ್ರೈನ್ ಮೂಲಕ ಮಗುಚಿ ಬಿದ್ದ ಟ್ಯಾಂಕರ್ ಮೇಲೆತ್ತಲಾಯಿತು.
ಸ್ಥಳದಲ್ಲಿ ಜಮಾಯಿಸಿದ ಕುತೂಹಲಿಗತನ್ನು ನಿಯಂತ್ರಿಸಲು ಪೊಲೀಸರು ಹರಸಹಾಸ ಪಡಬೇಕಾಯಿತು, ಟ್ಯಾಂಕರ್ ಉರುಳಿದ ಬಲೈಪಾದೆ ಜಂಕ್ಷನ್ ಜನನೀಬಿಡ ಪ್ರದೇಶವಾಗಿತ್ತು, ೩ ಹೊಟೇಲ್, ಅಂಗಡಿ ಮುಂಗಟ್ಟು ತೆರೆಯದಂತೆ ಪೊಲೀಸರು ಮನವಿ ಮಾಡಿದ್ದರು ಮಾತ್ರವಲ್ಲದೆ ಸ್ಥಳೀಯ ಪ್ರದೇಶದಲ್ಲಿ ವಿದ್ಯುತ್ ಸಂಚಾರವನ್ನು ಕಡಿತಗೊಳಿಸಲಾಗಿತ್ತು .ಉಡುಪಿ ಪೊಲೀಸ್ ಹಾಗೂ ಅಗ್ನಿಶಾಮಕ ದಳದ ಸಕಾಲಿಕ ಕ್ರಮದಿಂದ ಸಂಭವಿಸಬಹುದಾದ ದೊಡ್ಡ ಅನಾಹುತವನ್ನು ತಪ್ಪಿಸಿದಕ್ಕೆ ಜನರು ಇಲಾಖೆಗೆ ಕೃತಜ್ಞತೆ ಸಲ್ಲಿಸಿದರು.