ಉಡುಪಿ:ವಲಸೆ ಕಾರ್ಮಿಕರ ಮೇಲೆ ದೌರ್ಜನ್ಯ ಎಸಗಿದ ಮಠದ ಬೆಟ್ಟು ಪುಂಡರು

ಉಡುಪಿ: ಸ್ವಚ್ಚತೆ ಹೆಸರಿನಲ್ಲಿ ಮಠಬೆಟ್ಟುವಿನ ಕೆಲವೊಂದು ಯುವಕರು ಸಿಟಿ ಬಸ್ ನಿಲ್ದಾಣ ಬಳಿ ವಲಸೆ ಕಾರ್ಮಿಕರಿಗೆ ಅಟ್ಟಾಡಿಸಿ ಹಲ್ಲೆ ಮಾಡುತ್ತಿದ್ದು ಮಾಹಿತಿ ತಿಳಿದ ಪೊಲೀಸರೂ ತಮಗೂ ಇದಕ್ಕೂ ಯಾವುದೇ ಸಂಬಂಧವಿಲ್ಲದಂತೆ ವರ್ತಿಸುತ್ತಿದ್ದಾರೆ. ಹೊಟ್ಟೆ ಪಾಡಿಗಾಗಿ ದಿನ ನಿತ್ಯ ವಲಸೆ ಕಾರ್ಮಿಕರು ಕೆಲಸಕ್ಕೆ ಹೋಗುವುದಕ್ಕೆ, ಸಂಜೆ ಕೆಲಸವಾದ ಮೇಲೆ ಬಸ್ ನಿಲ್ದಾಣ ಬಳಿ ಇರುವುದು ಸಹಜ, ಕೆಲವರಿಗೆ ಮನೆ ಮಠವು ಇಲ್ಲ. ಇವರಿಗೆ ಬಸ್ ನಿಲ್ದಾಣವೇ ಸೂರು ಆಗಿರುತ್ತದೆ. ಇವರಿಂದಲೇ ಬಸ್ ನಿಲ್ದಾಣ ಪರಿಸರ ಸ್ವಚ್ಚತೆ ಇಲ್ಲದೆ ಗಬ್ಬು ನಾರುತ್ತದೆಂದು ಈ ಯುವಕರು ವಲಸೆ ಕಾರ್ಮಿಕರ ಮೇಲೆ ಕೇಬಲ್ ವಯರ್‌ನಲ್ಲಿ ಹಲ್ಲೆ ನಡೆಯುವ ಪ್ರವೃತ್ತಿ ಪಾರಂಭಿಸಿದ್ದಾರೆ.


ನಿನ್ನೆ ರಾತ್ರಿ ವಯೋವೃದ್ಧ ಶೇಖರ್(60) ಎನ್ನುವವರು ಕೆಲಸ ಮುಗಿಸಿ ಸಿಟಿ ಬಸ್ ನಿಲ್ದಾಣ ಬಳಿ ತನ್ನ ದಿನ ಸಂಬಳಕ್ಕೆ ನೀಡಲು ಬರುವ ಮಾಲಕರಿಗೆ ಕಾಯುತ್ತಿರುವಾಗ ಅಲ್ಲಿಗೆ ಬಂದ ನಾಲ್ಕೈದು ಯುವಕರು ಏಕಾಏಕಿ ಕೇಬಲ್ ವಯರ್‌ನಲ್ಲಿ ಹಲ್ಲೆ ಮಾಡಲು ಬಂದಿದ್ದು ಕೆಲವೊಂದು ಕಾರ್ಮಿಕರು ಓಡಿ ಹೋದರೆ ವಯೋ ವೃದ್ಧವರು ಇವರ ಕೇಬಲ್ ವಯರಿನ ಪೆಟ್ಟು ತಿನ್ನಬೇಕಾಯಿತು.


ಹಲ್ಲೆ ನಡೆಸಿರುವ ಬಗ್ಗೆ ಸಾರ್ವಜನಿಕರು ಯುವಕರನ್ನು ಪ್ರಶ್ನಿಸಿದಕ್ಕೆ ನಮಗೆ ಪೊಲೀಸರು ಹೇಳಿದ್ದಾರೆ ಎನ್ನುತ್ತಾರೆಂದು ಸ್ಥಳೀಯರು ದೂರಿದ್ದಾರೆ ಈ ರೀತಿ ಸಾರ್ವಜನಿಕರ ಮೇಲೆ ಹಲ್ಲೆ ನಡೆಸುವ ಈ ಯುವಕರ ಮೇಲೆ ಪೊಲೀಸರು ನಿರ್ದಾಕ್ಷಣ್ಯ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ತಮ್ಮ ಪರಿಸರದ ಸ್ವಚ್ಚತೆ ಬಗ್ಗೆ ಅಷ್ಟು ಕಾಳಜಿ ಇದ್ರೆ ದಿನ ನಿತ್ಯ ಬಸ್ ನಿಲ್ದಾಣ ,ನಗರದ ಪ್ರಮುಖ ರಸ್ತೆಗಳನ್ನು ಸ್ವಚ್ಚಗೊಳಿಸಲಿ, ಅದು ಬಿಟ್ಟು ಕಾನೂನು ಕ್ರಮ ಕೈಗೊಳ್ಳಲು ಅವರಿಗೆ ಅಧಿಕಾರ ಕೊಟ್ಟವರು ಯಾರು? ಇವರ ಇದೇ ರೀತಿ ಗೂಂಡಗಿರಿ ಮುಂದುವರಿದರೆ ಪೊಲೀಸರು ತಮ್ಮಖಾಕಿ ಕಳಚಿ ಮನೆಯಲ್ಲಿಕುಳಿತುಕೊಳ್ಳುವ ದಿನ ಬರಬಹುದೆಂದು ಜನರು ಆಡಿಕೊಳ್ಳುತ್ತಿದ್ದಾರೆ.


ಗೂಂಡಾಗಿರಿ ಮಾಡುವ ಯುವಕರ ಮನೆ ಬಳಿಯ ಇಂದ್ರಾಣಿ ಹೊಳೆಗೆ(ಕಲ್ಸಂಕ ತೋಡು) ಬಡಗುಪೇಟೆ, ರಥಬೀದಿ, ಕಲ್ಸಂಕ ಪರಿಸರದ ಡ್ರೈನೇಜ್ ನೀರು ಹರಿಯ ಬಿಟ್ಟು ಮಠದ ಬೆಟ್ಟು ಪರಿಸರದಲ್ಲಿ ವಾಸ ಮಾಡಲು ಯೋಗ್ಯವಲ್ಲದ ಪರಿಸರ ನಿರ್ಮಣವಾಗಿದೆ ಮೊದಲು ಅದರ ದುರಸ್ತಿ ನಗರ ಸಭೆ ಅಧಿಕಾರಿಗಳಿಂದ ಅಥವಾ ತಮ್ಮ ಶಾಸಕರಿಂದ ಮಾಡಿಸಿ ತಮ್ಮೂರನ್ನು ಸ್ವಚ್ಚವಾಗಿಡುವಲ್ಲಿ ಪ್ರತ್ನಿಸಿ ಅದು ಬಿಟ್ಟು ಬಡ ಕಾರ್ಮಿಕರ ,ಮಹಿಳೆಯರ ಮೇಲೆ ತಮ್ಮ ದರ್ಪ ತೊರಿಸಿ ಹಿರೋ ಗಿರಿ ತೋರಿಸ ಬೇಡಿ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!