ಉಡುಪಿ: ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಮಸೀದಿಗಳಲ್ಲಿ ಪ್ರತಿಭಟನೆ

ಉಡುಪಿ, ಡಿ.೧೨: ದೇಶದ ಹಿತಾಸಕ್ತಿ ಮತ್ತು ಸಂವಿಧಾನದ ಆಶಯಕ್ಕೆ ವಿರುದ್ಧ ವಾಗಿ ಹಾಗೂ ಜಾತ್ಯತೀತ ಹಂದರವನ್ನು ನಾಶ ಮಾಡಿ ಪ್ರಜೆಗಳನ್ನು ಧರ್ಮ, ನಂಬಿಕೆಗಳ ನೆಲೆಯಲ್ಲಿ ವಿಭಜಿಸುವ ಪೌರತ್ವ ತಿದ್ದುಪಡಿ ಮಸೂದೆಯನ್ನು ವಿರೋಧಿಸಿ ಉಡುಪಿ ಜಿಯ ವಿವಿಧ ಮಸೀದಿಗಳಲ್ಲಿ ಶುಕ್ರವಾರ ಜುಮಾ ನಮಾಝಿನ ಬಳಿಕ ಸಾಂಕೇತಿಕ ಪ್ರತಿಭಟನೆಯನ್ನು ನಡೆಸಲಾಯಿತು.

ಉಡುಪಿ ಜಾಮೀಯ ಮಸೀದಿಯಲ್ಲಿ ನಡೆದ ಪ್ರತಿಭಟನೆಯನ್ನುzಶಿಸಿ ಮಾತನಾಡಿದ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಯಾಸೀನ್ ಮಲ್ಪೆ, ಈ ಮಸೂದೆಯ ಮೂಲಕ ದೇಶದಲ್ಲಿ ಸಾವಿರಾರು ವರ್ಷಗಳಿಂದ ಪ್ರೀತಿ, ವಿಶ್ವಾಸ, ಸಹೋದರತೆಯಿಂದ ಬದುಕುತ್ತಿರುವ ವಿವಿಧ ಸಮುದಾಯಗಳ ಮಧ್ಯೆ ಧ್ವೇಷ, ಅಪನಂಬಿಕೆಯ ವಾತಾವರಣ ನಿರ್ಮಿಸಿ, ಜನರನ್ನು ವಿಭಜಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಈ ದೇಶದಲ್ಲಿ ಹುಟ್ಟಿ ತಮ್ಮ ಸರ್ವಸ್ಥವನ್ನು ಈ ದೇಶಕ್ಕೆ ಮುಡುಪಾಗಿಟ್ಟ ಹಾಗೂ ಸ್ವಾತಂತ್ರ ಹೋರಾಟದಲ್ಲಿ ತಮ್ಮ ಜೀವವನ್ನು ತ್ಯಾಗ ಮಾಡಿರುವ ಈ ದೇಶದ ಮುಸ್ಲಿಮರನ್ನು ಎರಡನೆ ದರ್ಜೆಯ ಪ್ರಜೆಗಳನ್ನಾಗಿ ಮಾಡುವ ಆರ್‌ಎಸ್‌ಎಸ್ ಸಂಘಪರಿವಾರದ ಯೋಜನೆ ಭಾಗ ಈ ಮಸೂದೆಯಾಗಿದೆ. ಕೇಂದ್ರ ಸರಕಾರ ಈ ಮಸೂದೆಯನ್ನು ವಾಪಾಸ್ಸು ಪಡೆದುಕೊಳ್ಳುವವರೆಗೆ ಬೇರೆ ಬೇರೆ ಹಂತದಲ್ಲಿ ಹೋರಾಟ ನಡೆಸಲಾಗುವುದು ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಮಸೀದಿಯ ಮೌಲಾನ ರಶೀದ್ ಅಹ್ಮದ್ ನದ್ವಿ, ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಮೌಲಾ, ಮಸೀದಿ ಅಧ್ಯಕ್ಷ ಯಾಸೀನ್ ಸೈಯ್ಯದ್, ಹುಸೇನ್ ಕೋಡಿಬೆಂಗ್ರೆ, ಸಲಾವುದ್ದೀನ್ ಅಬ್ದುಲ್ಲಾ, ಮಸೀದಿ ಸದಸ್ಯ ಖಾಲಿದ್, ಜಅಮಾತೆ ಇಸ್ಲಾಮೀ ಹಿಂದ್ ಉಡುಪಿ ಸ್ಥಾನೀಯ ಕಾರ್ಯದರ್ಶಿ ನಿಸಾರ್ ಉಪ್ಪಿನಕೋಟೆ, ಎಸ್‌ಐಓ ರಾಜ್ಯ ಪ್ರಮುಖ ಯಾಸೀನ್ ಕೋಡಿಬೆಂಗ್ರೆ, ಪಿಎಫ್‌ಐ ಜಿಲ್ಲಾಧ್ಯಕ್ಷ ನಝೀರ್ ಅಂಬಾಗಿಲು ಮೊದಲಾದವರು ಉಪಸ್ಥಿತರಿದ್ದರು.

ಉಡುಪಿ: ನೇಜಾರು ಜಾಮೀಯ ಮಸೀದಿಯಲ್ಲಿ ನಡೆದ ಪ್ರತಿಭಟನೆ ಯಲ್ಲಿ ಮಸೀದಿಯ ಆಡಳಿತ ಕಮಿಟಿಯ ಅಧ್ಯಕ್ಷ ಹಾಜಿ ಅಬೂಬಕ್ಕರ್ ನೇಜಾರು, ಖತೀಬ್ ಉಸ್ಮಾನ್ ಮದನಿ, ಉಪಾಧ್ಯಕ್ಷ ಖಾಸೀಂ ನೇಜಾರು, ಕಾರ್ಯದರ್ಶಿ ಇದಿನಬ್ಬ ಸಾಹೇಬ್, ನೌಫಲ್ ಮದನಿ ನೇಜಾರು, ಶಮೀರ್ ಮಿಸ್ಬಾಹಿ ನೇಜಾರು ಮೊದಲಾದವರು ಉಪಸ್ಥಿತರಿದ್ದರು.

ಆತ್ರಾಡಿ ಮುಹಿಯ್ಯುದ್ದೀನ್ ಜುಮಾ ಮಸೀದಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಮಸೀದಿ ಅಧ್ಯಕ್ಷ ಇಸ್ಮಾಯಿಲ್ ಆತ್ರಾಡಿ, ಕಾರ್ಯದರ್ಶಿ ಅಬ್ದುಲ್ ಹಮೀದ್, ಕೋಶಾಧಿಕಾರಿ ಸುಲೇಮಾನ್ ಅಲ್‌ಖಾಸಿಮಿ, ಖತೀಬ್ ಉಮ್ಮರ್ ಮದನಿ ಮೊದಲಾದವರು ಉಪಸ್ಥಿತರಿದ್ದರು.

ಅದೇ ರೀತಿ ಉಡುಪಿ ಅಂಜುಮಾನ್ ಜುಮಾ ಮಸೀದಿ, ಹೂಡೆ ಕದಿಮಿ ಜಾಮೀಯ ಮಸೀದಿ, ಹೂಡೆ ಜದೀದ್ ಜಾಮೀಯ ಮಸೀದಿ, ಬೆಂಗ್ರೆ ಜಾಮೀಯ ಮಸೀದಿ, ಗುಜ್ಜರಬೆಟ್ಟು ಮೊಹಿಯ್ಯುದ್ದೀನ್ ಜುಮಾ ಮಸೀದಿ, ಮಲ್ಪೆ ಜಾಮೀಯ ಮಸೀದಿ, ಮಲ್ಪೆ ಮದೀನಾ ಜಾಮೀಯ ಮಸೀದಿ, ನೇಜಾರು ಉಮ್ಮೆ ಆಯಿಷಾ ಜಾಮೀಯ ಮಸೀದಿ, ದೊಡ್ಡಣಗುಡ್ಡೆ ಜುಮಾ ಮಸೀದಿ, ಆದಿಉಡುಪಿ ಜಾಮೀಯ ಮಸೀದಿ, ಉಡುಪಿ ಶಾಂತಿನಗರ ಮದೀನ ಮಸೀದಿ, ಬ್ರಹ್ಮಾವರ ರಂಗನಕೆರೆ ಜುಮಾ ಮಸೀದಿ, ಕುಂಜಾಲು ನೂರು ಜಾಮೀಯ ಮಸೀದಿಗಳಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.

ಕುಂದಾಪುರ: ಗಂಗೊಳ್ಳಿಯ ಕೇಂದ್ರ ಜುಮಾ ಮಸೀದಿ, ಹಾಗೂ ಗಂಗೊಳ್ಳಿ ಮೊಹಿಯ್ಯುದ್ದೀನ್ ಜುಮಾ ಮಸೀದಿಯಲ್ಲಿ ಜುಮಾ ನಮಾರhನ ಬಳಿಕ ಪ್ರತಿಭಟನೆಯನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ಗಂಗೊಳ್ಳಿ ಜಮಾ ತುಲ್ ಮುಸ್ಲಿಮೀನ್ ಅಧ್ಯಕ್ಷ ಪಿ.ಎಂ.ಹಸೇನಾರ್ ಸಾಹೇಬ್ ಮೊದಲಾದವರು ಉಪಸ್ಥಿತರಿದ್ದರು.

ನಾವುಂದ -ಮರವಂತೆ ಮೊಹಿದ್ದೀನ್ ಜುಮಾ ಮಸೀದಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಮಸೀದಿ ಅಧ್ಯP ಹಾಜಿ ತೌಫಿಕ್ ಅಬ್ದು, ಉಪಾಧ್ಯP ಮನ್ಸೂರ್ ಇಬ್ರಾಹಿಂ ಮರವಂತೆ, ಕಾರ್ಯದರ್ಶಿ ಸತ್ತಾರ್, ಖಜಾಂಜಿ ಕೆ.ಪಿ.ಹುಸೈನ್ ಹಾಜಿ, ಬಿ.ಎ.ಕೆ.ಸಯ್ಯದ್, ವಕೀಲರಾದ ಇಲ್ಯಾಸ್, ಅಬ್ದುಲ ಹಮೀದ್, ಮಾಣಿಕೊಲ ಅಬ್ಬಾಸ್, ಇರ್ಷಾದ್ ಕೊಯನಗರ, ಎನ್.ಸಿ. ಮೊಯಿದಿನ್, ಬಿ.ಎಚ್.ಮೊಯಿದಿನ್, ಸುಲೈಮಾನ್, ಇಮಾಮ ಅಬ್ದುಲ ಲತೀಫ್ ಫಾಲಿಲಿ ಮೊದಲಾದವರು ಹಾಜರಿದ್ದರು.

ಎಂ ಕೋಡಿ ಬಿಲಾಲ್ ಜುಮಾ ಮಸೀದಿ, ಕೋಟೇಶ್ವರ ಸುಲ್ತಾನ್ ಜುಮಾ ಮಸೀದಿ, ಹೆಮ್ಮಾಡಿ ರಹ್ಮಾನಿ ಜುಮಾ ಮಸೀದಿ, ಮೂಡುಗೋಪಾಡಿ ರಿಫಾಯಿ ಜುಮ್ಮಾ ಮಸೀದಿ, ಕುಂದಾಪುರ ಕೋಡಿ ಮುಹಿಯ್ಯುದ್ದೀನ್ ಜುಮಾ ಮಸೀದಿ, ಹಂಗ್ಳೂರು ಜುಮಾ ಮಸೀದಿ, ಗುಲ್ವಾಡಿ ಮೆಹರಾಜ್ ಜುಮಾ ಮಸೀದಿ, ಬೈಂದೂರು ಜಾಮೀಯ ಮಸೀದಿಗಳಲ್ಲಿ ಪ್ರತಿಭಟನೆ ನಡೆಸಿ ಮಸೂದೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತ ಪಡಿಸಲಾಯಿತು.

ಕಾಪು: ಕೊಂಬಗುಡ್ಡೆಯ ಜದೀದ್ ಕಲಾನ್ ಜಾಮಿಯಾ ಮಸ್ಜೀದ್‌ನಲ್ಲಿ ಕೇಂದ್ರ ಸರಕಾರವು ಜಾರಿಗೆ ತಂದ ಪೌರತ್ವ ತಿದ್ದುಪಡಿ ಮಸೂದೆ ವಿರುದ್ಧ ತೀವ್ರ ಪ್ರತಿಭಟನೆ ನಡೆಸಲಾಯಿತು.

ಮಸೀದಿಯ ಅಧ್ಯP ಶಬಿಹ್ ಅಹಮದ್ ಕಾಜಿ, ಪ್ರಧಾನ ಕಾರ್ಯದರ್ಶಿ ಅನ್ವರ್ ಅಲಿ, ಮೌಲಾನಾ ಮೊಹಮ್ಮದ್ ಪರ್ವೇಜ ಅಲಾಮ, ಮೊಹಮ್ಮದ್ ಇಕ್ಬಾಲ ಸಾಬ, ಶಂಶುದ್ದೀನ್, ಆಸೀಫ್ ಬಿ., ಹಾಶಿಮ ಸಾಹೇಬ, ಇಬ್ರಾಹಿಮ ಸಾಹೇಬ ಮೊದಲಾದವರು ಉಪಸ್ಥಿತರಿದ್ದರು.

ಮಲ್ಲಾರು ಪಕೀರ್ಣಕಟ್ಟೆಯ ಮುಹಿಯುದ್ದೀನ್ ಜುಮಾ ಮಸೀದಿ, ಕಾಪು ಕೊಪ್ಪಲಂಗಡಿ ಖಾದಿಮ್ ಜಾಮೀಯ ಮಸೀದಿ, ಕೊಂಬಗುಡ್ಡೆ ಗೌಸಿಯಾ ಜಾಮೀಯ ಮಸೀದಿ, ಮಲ್ಲಾರ್ ಅಹ್ಮದಿ ಮೊಹಲ್ಲಾ ಜಾಮೀಯ ಮಸೀದಿ, ಕೊಂಬಗುಡ್ಡೆ ಕಲಾನ್ ಮಸೀದಿಗಳಲ್ಲಿ ಪ್ರತಿಭಟನೆ ನಡೆಸಿ ಪೌರತ್ವ ತಿದ್ದುಪಡಿ ಮಸೂದೆ ಹಿಂದೆಗೆದುಕೊಳ್ಳುವಂತೆ ಆಗ್ರಹಿಸಲಾಯಿತು.

Leave a Reply

Your email address will not be published. Required fields are marked *

error: Content is protected !!