ಉಡುಪಿ: ಮಾ.7 ರಂದು ಮೋದಿಕೇರ್ ಆಜಾದಿ ಪೆಸ್ಟ್ ಮಹಿಳಾ ಸಬಲೀಕರಣ ಸಂಭ್ರಮ

ಉಡುಪಿ: ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆಹೆಣ್ಣಿಗೊಂದು ಅವಕಾಶ ಸಿಕ್ಕರೆ ಹಲವಾರು ಬಾಳಿಗೆ ನಂದಾದೀಪವಾದಂತೆ. ಇಂತಹ ಅವಕಾಶ ಬಳಸಿಕೊಂಡ ಸಾಧಕರ ಸಾಧನೆಯನ್ನು ಕಣ್ತುಂಬಿಕೊಳ್ಳುವ ಮಹಿಳೆಯರ ದಿನಾಚರಣೆಯನ್ನು ಅರ್ಥಪೂರ್ಣವನ್ನಾಗಿಸಿ ಆಚರಿಸುವ,  ಅವರನ್ನು ಗೌರವಿಸುವ ,ಹರಸುವ, ಶುಭ ಹಾರೈಸುವ ಕಾರ್ಯಕ್ರಮ. ಅದ್ದೂರಿ ಸ್ವಾತಂತ್ರ್ಯದ ಹಬ್ಬ, ಮೋದಿಕೇರ್  ಆಜಾದಿ ಫೆಸ್ಟ್   ಮಾ.7 ರಂದು ಬೆಳಿಗ್ಗೆ  10.30 ರಿಂದ  ಉಡುಪಿಯ ಅಜ್ಜರಕಾಡು ಪುರಭವನದಲ್ಲಿ ನಡೆಯಲಿದೆ.


ನೇರ ಮಾರುಕಟ್ಟೆ ವ್ಯವಸ್ಥೆಯಡಿಯಲ್ಲಿ ಕಳೆದ ಇಪ್ಪತೈದು ವರ್ಷಗಳಿಂದ ಕೋಟ್ಯಾಂತರ ಗ್ರಾಹಕರಿಗೆ ಉಜ್ವಲ ಭವಿಷ್ಯವನ್ನು ನೀಡಿ ಮೋದಿಕೇರ್ ತನ್ನದೇ ಆದ ಸ್ವದೇಶಿ ಉತ್ಪನ್ನಗಳ ಮೂಲಕ ಆರೋಗ್ಯಕರ ಬದುಕು ನಿರ್ಮಿಸಿಕೊಳ್ಳುವಲ್ಲಿ ನೆರವಾಗಿದೆ
ಮಹಿಳಾ ದಿನಾಚರಣೆಯ ವಿಶೇಷ ಕಾರ್ಯಕ್ರಮ ತಮ್ಮ ಪಾಲುದಾರರಿಗೆ ಕನಸಿನಂತೆ ಜೀವಿಸಲು ಮೋದಿ ಗ್ರೂಪ್‌ ನ ಸಂಸ್ಥಾಪಕ ಸಮೀರ್‌ ಮೋದಿಯವರು ಕೊಟ್ಟ ಅದ್ಭುತ ಅವಕಾಶ ಮೋದಿಕೇರ್ ಉತ್ಪನ್ನ ‌ಮತ್ತು ಬ್ಯುಸಿನೆಸ್ ಪ್ಲ್ಯಾನ್. ಪ್ರತಿ ಕನಸಿರುವ ಮಹಿಳೆ ಸೇರಿದಂತೆ ಪ್ರತಿಯೊಬ್ಬರಿಗೂ ಮೋದಿಕೇರ್ ಒಂದು ಕಾಮಧೇನು ಕಲ್ಪವೃಕ್ಷ . ಅದನ್ನು ಇಂದು ಸಾಕಷ್ಟು  ಮಹಿಳೆಯರು ಸಾಬೀತು ಮಾಡಿದ್ದಾರೆ.ಅದರಲ್ಲೂ ಕರಾವಳಿಯು ಭಾಗ ಇನ್ನಷ್ಟು ಸಶಕ್ತವಾಗಿ ಸಮೀರ್ ಮೋದಿಯವರ ಆಶಯ ಕನಸಿಗೆ ಜೊತೆಯಾಗುತ್ತಿದೆ.


ಈ ಸಪ್ನೋ ಕಿ ಆಜಾದಿಯ ದಿಟ್ಟ ಹೆಜ್ಜೆಯಾಗಿ ಇಬ್ಬರು ಸಾಧಕ  ಮಹಿಳೆಯರು ತಮ್ಮ ಸಾಧನೆಯನ್ನ ವಿಶಿಷ್ಟವಾಗಿ ಆಚರಿಸುತ್ತಿದ್ದಾರೆ. ಹಲವಾರು ವರ್ಷ ವಿದೇಶದಲ್ಲಿದ್ದು ನಂತರ ಮಕ್ಕಳ ವಿದ್ಯಾಭ್ಯಾಸಕ್ಕೆ ಊರಲ್ಲಿ ಇದ್ದು ಒಬ್ಬ ಸಾಮಾನ್ಯ ಗೃಹಿಣಿ , ಕೇವಲ ಒಂದು ವರ್ಷದ ಹಿಂದೆ ಮೋದಿಕೇರ್ ಅವಕಾಶಕ್ಕೆ ಬಂದು ಇಂದು ನೂರಾರು ಜನರಿಗೆ ಬದುಕು ಕಟ್ಟಿಕೊಳ್ಳಲು ನೆರವಾಗುತ್ತ ತನ್ನ ಕನಸಿನ ಕಾರಿಗೆ ಒಡತಿಯಾಗುತ್ತಿರುವ  ಬಬಿತಾ. ಎನ್. ಸುವರ್ಣ  ಮತ್ತು ಪ್ರತಿಷ್ಠಿತ ಕಂಪನಿಯಲ್ಲಿ ಇಂಜೀನಿಯರ್ ಆಗಿ ಅತ್ತ್ಯುನ್ನತ ಹುದ್ದೆಯಲ್ಲಿದ್ದು ಕೈತುಂಬಾ ಸಂಪಾದನೆ, ಅದನ್ನು ತ್ಯಜಿಸಿ ಇಂದು ಸಾವಿರಾರು ಜನರಿಗೆ ಬದುಕು ಕಟ್ಟಿಕೊಳ್ಳಲು ನೇರವಾಗಿ ಕೇವಲ 9  ತಿಂಗಳಲ್ಲಿ  ಹೊಸ ಸಂಚಲನ ಮೂಡಿಸಿರುವ- ಮೂಡಿಸುತ್ತಿರುವ  ಪವಿತ್ರ ಅವರು ತಮ್ಮ ಕನಸಿನ ಕಾರಿನ ಮಾಲೀಕರಾಗುತ್ತಿದ್ದಾರೆ.


ಈ ವಿಶೇಷ ಸಾಧನೆಗೆ ಅವರನ್ನು ಗೌರವಿಸುವ ಹಾಗೂ ಸನ್ಮಾನಿಸುವ ಜೊತೆಗೆ ಈ ಅವಕಾಶದ ಪರಿಚಯವನ್ನು ಪ್ರತಿಯೊಬ್ಬರಿಗೂ ಮೂಡಿಸಲು ವಿಶೇಷ ಅತಿಥಿಗಳ-ಸಾಧಕರ ಉಪಸ್ಥಿತಿಯಲ್ಲಿ ಆಜಾದಿ ಪೆಸ್ಟ್ ಎನ್ನುವ ವೈವಿಧ್ಯಮಯ ಕಾರ್ಯಕ್ರಮ ನಡೆಯಲಿದೆ. ರಾಘವೇಂದ್ರ ಶೆಟ್ಟಿ, ಕ್ರೌನ್ ಡೈಮಂಡ್ ಡೈರೆಕ್ಟರ್, ಉದಯ ಶೆಟ್ಟಿ, ಕ್ರೌನ್ ಡೈಮೆಂಡ್ ಡೈರೆಕ್ಟರ್, ಶಶಿಧರ್ ಹೆಮ್ಮಣ್ಣ, ಸೀನಿಯರ್ ಸೂಪರ್ ವೈಸರ್ ಜಹೀರ್ ಎಚ್. ಸೀನಿಯರ್ ಡೈರೆಕ್ಟರ್ ಸುದ್ಧಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!