ಉಡುಪಿ:ಮೊಬೈಲ್ ಅಂಗಡಿಗೆ ಕನ್ನ

ಉಡುಪಿ: ಉಡುಪಿ ನಗರದ ಹೃದಯ ಭಾಗದಲ್ಲಿರುವ ಮೊಬೈಲ್ ಅಂಗಡಿಗೆ ನುಗ್ಗಿದ ಕಳ್ಳರು ಲಕ್ಷಾಂತರ ಮೌಲ್ಯದ ಮೊಬೈಲ್ ಮತ್ತು ನಗದು ದೊಚಿದ ಘಟನೆ ನಡೆದಿದೆ.

ಉಡುಪಿನಗರದ ತ್ರಿವೇಣಿ ಜಂಕ್ಷನ್ ಬಳಿ ರಾಜೇಶ್ ಮಾಬಿಯಾನ್ ಇವರ ಪ್ಲೇ ಜೋನ್ ಮೊಬೈಲ್ ಅಂಗಡಿಯ ಮೆಲ್ಚಾವಣಿಯ ಮುಖಾಂತರ ಒಳ ಪ್ರವೇಶಿಸಿ ಕಳ್ಳರು ಅಂಗಡಿಯಲ್ಲಿದ್ದ ರೆಡ್‌ಮಿ, ಸ್ಯಾಮ್‌ಸಾಂಗ್, ವಿವೋ, ಒಪ್ಪೋ, ಹಾಗೂ ಲಾವಾ ಕಂಪೆನಿಯ ಸುಮಾರು7,64,990 ರೂಪಾಯಿ ಮೌಲ್ಯದ 59 ಹೊಸ ಮೊಬೈಲ್ ಫೋನ್‌ಗಳನ್ನು ಮತ್ತು ಅಂಗಡಿಯಲ್ಲಿ ವ್ಯವಹಾರದ ನಗದು ರೂ. 70,000 ಕಳುವು ಮಾಡಿರುವುದಾಗಿ ದೂರು ನೀಡಲಾಗಿದೆ.


ಕಳವುಗೈದ ಮೊಬೈಲ್ ಮತ್ತು ನಗದು ಸೇರಿ ಒಟ್ಟು ರೂಪಾಯಿ 8,34 ,990 ಆಗಿದೆ. ನಗರ ಭಾಗದಲ್ಲಿ ಇದು ೨ ನೇ ಪ್ರಕರಣವಾಗಿದೆ. ಈ ಹಿಂದೆ ಕೆಎಸ್ ಆರ್ ಟಿ ಸಿ ಬಸ್ ನಿಲ್ದಾಣದ ಮೈತ್ರಿ ಕಾಂಪ್ಲೆಕ್ಸ್‌ನ ಹೋಲ್ ಸೇಲ್ ಅಂಗಡಿಯ ಶಟರ್ ಮುರಿದು ೨೦ ಲಕ್ಷಕ್ಕೂ ಹೆಚ್ಚು ನಗದು ಕಳ್ಳರು ದೊಚಿದ್ದಾರೆ. ಆ ಪ್ರಕರಣವನ್ನೂ ಕೂಡ ಪೊಲೀಸರು ಭೇದಿಸುವಲ್ಲಿ ವಿಫಲವಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!