ಉಡುಪಿ: ಲಾಕ್‌ಡೌನ್ ಉಲ್ಲಂಘಿಸಿ ಮದುವೆ, 11 ಮಂದಿ ವಿರುದ್ಧ ಪ್ರಕರಣ ದಾಖಲು

ಉಡುಪಿ: ಲಾಕ್‌ಡೌನ್ ಜಾರಿ ಇದ್ದರೂ ಆದೇಶವನ್ನು ಉಲ್ಲಂಘಿಸಿ ಹಾಗೂ ಯಾವುದೇ ಅನುಮತಿ ಇಲ್ಲದೆ ಅಲೆವೂರು ಗ್ರಾಮದ ದುಗ್ಲಿಪದವು ಎಂಬಲ್ಲಿ ಇಂದು ನಡೆದ ವಿವಾಹ ಕಾರ್ಯಕ್ರಮ ನಡೆಸಿದ 11 ಮಂದಿ ವಿರುದ್ಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಖಚಿತ ಮಾಹಿತಿಯಂತೆ ಉಡುಪಿ ತಹಶೀಲ್ದಾರ್ ಪ್ರದೀಪ್ ಕುರ್ಡೆಕರ್, ಕಂದಾಯ ನಿರೀಕ್ಷಕ ವಿಶ್ವನಾಥ್ ಜೊತೆಗೆ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಮಂಚಿಯ ಯುವಕ ಮತ್ತು ಮಂಗಳೂರು ಬೋರುಗುಡ್ಡೆಯ ಯುವತಿಗೆ ಲಾಕ್‌ಡೌನ್ ಇದ್ದರೂ ವಿವಾಹ ಕಾರ್ಯಕ್ರಮ ನಡೆಸುತ್ತಿರುವುದು ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದರಲ್ಲಿ ಹಲವು ಮಂದಿ ಭಾಗಿಯಾಗಿದ್ದು, ವಧು ವಿಧಿಬದ್ಧವಾದ ಅನುಮತಿಯನ್ನು ಪಡೆಯದೆ ದ.ಕ.ಜಿಲ್ಲೆಯಿಂದ ಉಡುಪಿ ಜಿಲ್ಲೆಗೆ ಬಂದಿದ್ದು, ಇವರಲ್ಲಿ ಉಡುಪಿಗೆ ಬರುವ ಯಾವುದೇ ಪರವಾನಿಗೆ ಕೂಡ ಇರಲಿಲ್ಲ.


ಸೆಕ್ಷನ್ 144 (3) ಜಾರಿ ಇದ್ದರೂ ನಿಯಮ ಉಲ್ಲಂಘಿಸಿ 60 ಕ್ಕೂ ಹೆಚ್ಚು ಜನ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ದಾಳಿ ಮಾಡುತ್ತಿದ್ದಂತೆ ಮದುವೆಗೆ ಬಂದಿದ್ದ ಹೆಚ್ಚಿನವರು ಓಡಿ ಹೋಗಿದ್ದಾರೆ. ಮದುವೆ ಮನೆಯಲ್ಲಿ ಯಾವುದೇ ಮುನ್ನಚ್ಚೆರಿಕೆ ವಹಿಸದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಮನೆಯಲ್ಲಿ ಜನರು ಸೇರಿದ್ದರು ಎಂದು ತಹಶೀಲ್ದಾರ್ ನೀಡಿದ ದೂರಿನಲ್ಲಿದೆ.


ಈ ಬಗ್ಗೆ ತಹಶೀಲ್ದಾರ್ ನೀಡಿದ ದೂರಿನಂತೆ ವರ ಹಸನ್ ಹಾಗೂ ವಧು ರಮ್‌ಲತ್ , ಮದುವೆ ಕಾರ್ಯಕ್ರಮ ಆಯೋಜಿಸಿದ ಮದುಮಗನ ಸಹೋದರ ಸಲೀಂ ಮಂಚಿ, ನಬೀಸಾ, ಅಬ್ದುಲ್ ಸುಹೇಲ್ ಕರಂಬಳ್ಳಿ, ಅಜರುದ್ದೀನ್ ದುಗ್ಲಿಪದವು, ಮೊಹಮ್ಮದ್ ಆಶ್ರಫ್ ನೇತಾಜಿ ನಗರ, ಶಾಹಿದ್ ಮಂಚಿಕೆರೆ, ಬಕ್ಕಶ್ ಮಂಚಿಕೆರೆ,ಮೊಹಮ್ಮದ್ ಶರೀಫ್ ದೊಡ್ಡಣಗುಡ್ಡೆ, ಮಹಮ್ಮದ್ ಇಕ್ಬಲ್ ನೇತಾಜಿ ನಗರ ಸಹಿತ ಒಟ್ಟು 11 ಜನರ ಮೇಲೆ ಮಣಿಪಾಲ ಠಾಣೆಯಲ್ಲಿ ದೂರು ದಾಖಲಾಗಿದೆ.

1 thought on “ಉಡುಪಿ: ಲಾಕ್‌ಡೌನ್ ಉಲ್ಲಂಘಿಸಿ ಮದುವೆ, 11 ಮಂದಿ ವಿರುದ್ಧ ಪ್ರಕರಣ ದಾಖಲು

  1. Thale sari ediya ninge photos en hakthi report en kodthi yar samudhayad nikha ediyo avarde photo and heading hakalle kachada manna magane.

Leave a Reply

Your email address will not be published. Required fields are marked *

error: Content is protected !!