ಉಡುಪಿ:”ಲಿಗಾಡೋ ಹೋಟೆಲ್ ಮತ್ತು ಕನ್ವೆನ್ಷನ್” ಸೆಂಟರ್ ಶುಭಾರಂಭ
ಉಡುಪಿ: ನಗರದ ಕರಾವಳಿ ಬೈಪಾಸ್ ಸಮೀಪ ರಾಷ್ಟ್ರೀಯ ಹೆದ್ದಾರಿ 66ಕ್ಕೆ ತಾಗಿಕೊಂಡಂತೆ ವಿಶಾಲ ಜಾಗದಲ್ಲಿ ಮಣಿಪಾಲ ಇನ್ ಗ್ರೂಪ್‌ನ ಲಿಗಾಡೋ ಹೋಟೆಲ್ ಮತ್ತು ಕನ್ವೆನ್ಷನ್ ಸೆಂಟರ್ ಆರಂಭಗೊಂಡಿದೆ.ಈ ಬಗ್ಗೆ ಸಂಸ್ಥೆಯ ಆಡಳಿತ ನಿರ್ದೇಶಕ ಮಹಮ್ಮದ್ ಇಬ್ರಾಹಿಂ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.‘ಉಡುಪಿಯ ಜನತೆಗೆ ಪ್ರೀತಿ ಮತ್ತು ಸೌಹಾರ್ದದ ಪ್ರತೀಕವಾಗಿ ಈ ಕೊಡುಗೆಯನ್ನು ನೀಡುತ್ತಿದ್ದೇನೆ’ ಎಂದರು.
ಕರಾವಳಿಯಲ್ಲಿಯೇ ಪ್ರಪ್ರಥಮ ಬಾರಿಗೆ ಬಹು ಅಂತಸ್ತಿನ ಈ ಕನ್ವೆನ್ಷನ್ ಸೆಂಟರ್ ಸುಮಾರು 1,40,000 ಚದರಡಿ ಪ್ರದೇಶದಲ್ಲಿ ನಿರ್ಮಾಣಗೊಂಡಿದೆ. ಈ ಹೋಟೆಲ್‌ನಲ್ಲಿ 30 ಡಿಲಕ್ಸ್ ಕೊಠಡಿ ಮತ್ತು 4 ಸೂಟ್‌ಗಳಿವೆ. 6 ರೆಸ್ಟೊರೆಂಟ್‌ಗಳಿವೆ. ಮೊಗಲ್ ಮತ್ತು ರಜಪೂತ ಪಾರಂಪರಿಕ ಸಂಸ್ಕೃತಿಯನ್ನು ಬಿಂಬಿಸುವ ವಿರಾಸತ್, ಸ್ವಾನಿಶ್ ಶೈಲಿಯ ರೆಟ್ರೋ ನೋಟವನ್ನು ನೀಡುವ 66 ಕಾಸಾ ಬೊನಿಟಾ, ಕರಾವಳಿಯ ಮನೆ ಮತ್ತು ಊಟವನ್ನು ನೆನಪಿಸುವ ಶೈಲಿಯ ಫಿಶ್ ಎನ್ ರೈಸ್, ಉಡುಪಿಯ ಶುದ್ಧ ಶಾಖಾಹಾರಿ ಊಟೋಪಚಾರದ ಉಡುಪಿ ರಸೋಯಿ, ಪಡಸಾಲೆಯಂತಿರುವ ಕೋರ್ಟಿಯಾರ್ಡ್ ಕಾಫಿಶಾಪ್, ವಾಹನದಲ್ಲಿಯೇ ಕೂತು ಆತಿಥ್ಯ ಅನುಭವಿಸುವವರಿಗಾಗಿ ಎಮಿಗೋ ಡ್ರೈವ್ ಇನ್ ರೆಸ್ಟೊರೆಂಟ್‌ಗಳು ಇವೆ ಎಂದರು.
3 ಸಾವಿರ ಮಂದಿ ಸಾಮರ್ಥ್ಯದ 1400 ಚದರಡಿಯ ವೇದಿಕೆ, 1300 ಚದರಡಿಯ ಪ್ರತ್ಯೇಕ ಊಟದ ಹಾಲ್ ಇರುವ ಗ್ರ್ಯಾಂಡ್ ಮಿಲೇನಿಯಮ್ ಕನ್ವೆನ್ಷನ್ ಸೆಂಟರ್ ಮದುವೆ ಮುಂತಾದ ಕಾರ್ಯಕ್ರಮಗಳಿಗೆ ಪೂರಕವಾಗಿದೆ.
ಸಮ್ಮೇಳನ ಎಂಬ 1500 ಮಂದಿಯ ಸಮಾವೇಶ ಹಾಲ್, ಝೀಹಾ ಎಂಬ 250 ಮಂದಿಯ ಪಾರ್ಟಿ ಹಾಲ್, 40 ಮಂದಿಗೆ ಮೀಟಿಂಗ್ ಲಾಂಜ್, 100 ಮಂದಿಗೆ ಸಿಂಡ್ರೆಲ್ಲಾ ಎಂಬ ಬಾಲ್‌ರೂಮ್‌ಗಳು ಬೇಡಿಕೆಗನುಗುಣವಾಗಿ ರೂಪುಗೊಂಡಿವೆ ಎಂದರು.
150 ಕಾರು ಮತ್ತು 100 ದ್ವಿಚಕ್ರ ವಾಹನಗಳನ್ನು ಪಾರ್ಕ್ ಮಾಡಬಹು
ದಾದ 30 ಸಾವಿರ ಚದರಡಿಯ ಪಾರ್ಕಿಂಗ್ ಪ್ರದೇಶ ಈ ಹೋಟೆಲ್ ಹೊಂದಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಹೋಟೆಲ್‌ನ ಕಾರ್ಯನಿರ್ವಾಹಕ ನಿರ್ದೇಶಕ ಬಿಜು ವರ್ಗೀಸ್, ಮಹಾಪ್ರಬಂಧಕ ರಣವಿಜಯ್ ಸಿಂಗ್, ಮುಖ್ಯ ಬಾಣಸಿಗ ಬೊಂಬ ರಾಮ್ ಬಹದ್ದೂರ್, ಹೋಟೆಲ್‌ನ ವಿನ್ಯಾಸಕಾರ ಭಗವಾನ್
ದಾಸ್ ಉಪಸ್ಥಿತರಿದ್ದರು