ಉಡುಪಿ ಒಂಟಿ ವೃದ್ಧೆಯ ಕೊಲೆ :ದಂಪತಿ ಸೆರೆ

ಉಡುಪಿ : ಕೆಲವು ದಿನಗಳ ಹಿಂದೆಯಷ್ಟೆ ಉಡುಪಿಯಲ್ಲಿ ನಡೆದ ಒಂಟಿ ವೃದ್ಧ ಮಹಿಳೆಯ ಕೊಲೆ ಪ್ರಕರಣವನ್ನು ಉಡುಪಿ ಪೊಲೀಸರು ಭೇದಿಸಿದ್ದು . ಆರೋಪಿಗಳನ್ನು ಗೋವಾದ ಪಣಜಿಯ ಸಾಂತಾಕ್ರೂಸ್ ಗ್ರಾಮದಲ್ಲಿ ಗೋವಾ ಪೊಲೀಸರ ಸಹಕಾರದಿಂದ ವಶಕ್ಕೆ ಪಡೆಯಲಾಗಿದೆ. ಉಡುಪಿಯ ಸುಬ್ರಹ್ಮಣ್ಯ ನಗರದ ವಾಸವಾಗಿದ್ದ ವೃದ್ಧ ಮಹಿಳೆ ರತ್ನಾವತಿ ಶೆಟ್ಟಿ ಅವರನ್ನು ನರಗುಂದ ನಿವಾಸಿ ಅಂಬಣ್ಣ (31) ಹಾಗೂ ಆತನ ಪತ್ನಿ ರಶೀದಾ (26) ಸೇರಿ ಕೊಲೆಗೈದಿದ್ದರು.
ಬಳಿಕ ರತ್ಮಾವತಿ ಅವರ ಮೈಮೇಲಿದ್ದ ಹಾಗೂ ಮನೆಯಲ್ಲಿದ್ದ ಎರಡು ಲಕ್ಷ ರೂ.ಗಳಿಗೂ ಅಧಿಕ ಮೌಲ್ಯದ ಚಿನ್ನಾಭರಣ ಹಾಗೂ ಇತರ ಬೆಲೆಬಾಳುವ ವಸ್ತುಗಳನ್ನು ದೋಚಿಕೊಂಡು ಪರಾರಿಯಾಗಿದ್ದರು. ತಾವು ಬಾಡಿಗೆಗೆ ಉಳಿದಿದ್ದ ಮನೆಯೊಡತಿಯನ್ನೆ ಕೊಲೆ ಮಾಡಿದ ದಂಪತಿಗಳು ಗೋವಾದಲ್ಲಿ ಇರುವುದು ಪತ್ತೆ ಹಚ್ಚಿದ ಉಡುಪಿ ಪೊಲೀಸ್ ರು ಗೋವಾ ಪೊಲೀಸ್ ಸಹಾಯದಲ್ಲಿ ಬಂಧಿಸಿದ್ದಾರೆ. ಹಣದ ಆಸೆಗಾಗಿ ಕೊಲೆ ಮಾಡಿರುವುದಾಗಿ ಆರೋಪಿ ದಂಪತಿಗಳು ಒಪ್ಪಿಕೊಂಡಿದ್ದು,
ಆರೋಪಿ ದಂಪತಿಗಳನ್ನು ನ್ಯಾಯಾಲಯಕ್ಕೆ ಹಾಜರು‌ ಪಡಿಸಲಾಗಿದ್ದು  ಇನ್ನು ಹಲವು ಪ್ರಕರಣದಲ್ಲಿ ಇವರ ಹೆಸರು ಕೇಳಿ ಬಂದಿದ್ದು, ಸದ್ಯ ಆರೋಪಿಗಳನ್ನು ಉಡುಪಿ ನಗರ  ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದು  ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.
 ಈ ಪ್ರಕರಣ ಕ್ಕೆ ಸಂಬಂಧಿಸಿದಂತೆ ಮೃತರ ಮಗಳಾದ ಸುಪ್ರಭಾ ನೀಡಿದ ದೂರಿನಂತೆ ಉಡುಪಿ ನಗರ ಠಾಣೆಯಲ್ಲಿ ದೂರು ನೀಡಲಾಗಿತ್ತು.

Leave a Reply

Your email address will not be published. Required fields are marked *

error: Content is protected !!