ಲಾಕ್ ಡೌನ್: ಬಡವರಿಗೆ ಆಹಾರ ಸಾಮಗ್ರಿ ವಿತರಿಸಿದ ಉಡುಪಿ ಲಯನ್ಸ್ ಕ್ಲಬ್
ಉಡುಪಿ – ಕೊರೋನಾ ಎರ್ಮಜೆನ್ಸಿ ಹಿನ್ನಲೆಯಲ್ಲಿ ಉಡುಪಿ ಕಂಪ್ಲೀಟ್ ಲಾಕ್ ಡೌನ್ ಆಗಿದೆ. ಈ ಹಿನ್ನಲೆಯಲ್ಲಿ ಸಾರ್ವಜನಿಕರಿಗೆ ಅದರಲ್ಲೂ ಕಡು ಬಡವರಿಗೆ ಅಗತ್ಯ ವಸ್ತುಗಳನ್ನು ಪೂರೈಸಲು ಲಯನ್ಸ್ ಕ್ಲಬ್ 317 C ಈಗ ಕಣಕ್ಕೆ ಇಳಿದಿದೆ. ಉಡುಪಿಯಲ್ಲಿ ಲಯನ್ ಕ್ಲಬ್ ವತಿಯಿಂದ ದಿನಕೂಲಿ ನೌಕರಿಗೆ ಮನೆ ಮನೆಗೆ ದೈನಂದಿನ ಆಹಾರಕ್ಕೆ ಅತೀ ಅಗತ್ಯವಾದ ಕಿಟ್ ಗಳ ವಿತರಣೆ ಆರಂಭವಾಗಿದೆ.
ಕಿಟ್ ನಲ್ಲಿ ದೈನಂದಿನ ಆಹಾರಕ್ಕೆ ಅತೀ ಅಗತ್ಯವಾದ ಅಕ್ಕಿ, ಬೇಳೆ, ಸಕ್ಕರೆ, ಬೆಲ್ಲ ಒಳಗೊಂಡಿದ್ದು ಈಗಾಗಲೇ ಉಡುಪಿ ವಿವಿಧ ವಾರ್ಡ್ ಗಳಲ್ಲಿ ವಿತರಣೆ ಪ್ರಾರಂಭಿಸಿದ್ದಾರೆ. ಈ ಕಿಟ್ ಗಳು ಅಗತ್ಯತೆ ಇರುವವರಿಗೆ ತಲುಪಿಸುವ ನಿಟ್ಟಿನಲ್ಲಿ ರೇಷನ್ ಕಾರ್ಡ್ ಇಲ್ಲದವರಿಗೆ ಕಿಟ್ ವಿತರಿಸಲು ಶಾಸಕರು ಮತ್ತು ಸ್ಥಳೀಯ ನಗರಸಭೆಯ ಸದಸ್ಯರ ನೆರವಿನ ಮೂಲಕ ವಿತರಿಸಲಾಗುತ್ತಿದೆ. ದಾನಿಗಳಿಂದ ಕಿಟ್ ಗೆ ಬೇಕಾದ ಅಗತ್ಯ ಸಾಮಾನುಗಳನ್ನು ಸಂಗ್ರಹಿಸಿ, ವಿತರಿಸುವ ಕಾರ್ಯ ನಡೆಯುತ್ತಿದೆ.
“ತಮ್ಮ ಈ ಕಾರ್ಯಕ್ಕೆ ಅನೇಕ ಜನ ಕೈ ಜೋಡಿಸಿದ್ದು ಮುಂಬೈ ಉದ್ಯಮಿ ಕೆ ಎಂ ಶೆಟ್ಟಿ 50,000 ಮೌಲ್ಯದ ದಿನಸಿ ವಸ್ತುಗಳನ್ನು ಮೊಹಮದ್ ಹನೀಫ್ ರವರ ಮೂಲಕ ನಮಗೆ ನೀಡಿರುತ್ತಾರೆ ಹಾಗು ಎಡ್ವರ್ಡ್ ಡಿ ಸೋಜಾ ,ವಾದಿರಾಜ್ ರಾವ್ , ಹರಿಪ್ರಸಾದ್ ರೈ ಡಾ ಗಣೇಶ್ ಪೈ , ಮೈಕಲ್ ಹಾಗು ಲಯನ್ಸ್ ಸದಸ್ಯರು ನಮಗೆ ಈ ಕಾರ್ಯಕ್ಕೆ ಸಾಥ್ ನೀಡಿದ್ದಾರೆ, ಹಾಗು ನಮ್ಮ ಈ ಕಾರ್ಯಕ್ಕೆ ಶಾಸಕ ರಘುಪತಿ ಭಟ್ ಹಾಗು ನಗರ ಸಭಾ ಸದಸ್ಯರು ಸಹಾಯ ಮಾಡಿದ್ದಾರೆ. ನಮ್ಮ ಈ ಕಾರ್ಯದಿಂದ ಉತ್ತೇಜನ ಗೊಂಡು ಅನೇಕ ಲಯನ್ಸ್ ಕ್ಲಬ್ ನವರು ಈ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ” ಎಂಬುದಾಗಿ ಲಯನ್ಸ್ 317 C ಜಿಲ್ಲಾ ಗವರ್ನರ್ ಆಗಿರುವ ಲಯನ್ ವಿ ಜೆ ಶೆಟ್ಟಿ, PMJF ಉಡುಪಿ ಟೈಮ್ಸ್ ಗೆ ತಿಳಿಸಿದರು.