ಉಡುಪಿ ಲಯನ್ಸ್ ಕ್ಲಬ್ ವತಿಯಿಂದ ಹೊಸ ಬೆಳಕು ಆಶ್ರಮಕ್ಕೆ ಆಹಾರ ಸಾಮಗ್ರಿ ಪೂರೈಕೆ
ಉಡುಪಿ – ಕೊರೋನಾ ಕೇವಲ ಜನರ ಜೀವವನ್ನು ಮಾತ್ರ ವಲ್ಲದೆ ಹಲವಾರು ಜನರ ಜೀವನವನ್ನೇ ಕಸಿದುಕೊಂಡಿದೆ ದಿನಗೂಲಿ ಮಾಡಿ ಬದುಕು ಕಟ್ಟಿಕೊಳ್ಳುತ್ತಿದ್ದ ಜನ ತತ್ತರಿಸಿ ಹೋಗಿದ್ದಾರೆ. ಅನೇಕ ಸಂಘಟನೆಗಳು ತುತ್ತು ಅನ್ನಕ್ಕೆ ತತ್ವರಾಗೊಂಡ ಜನರಿಗಾಗಿ ಮಿಡಿಯುತ್ತಿದ್ದೆ. ಲಯನ್ಸ್ ಕ್ಲಬ್ 317 C ಉಡುಪಿಯಲ್ಲಿ ಬಡ ಜನರಿಗಾಗಿ ಹಗಲು ,ರಾತ್ರಿ ಶ್ರಮಿಸುತ್ತಿದ್ದೆ. ಪ್ರತಿ ದಿನ ಅಗತ್ಯ ಇರುವವರಿಗೆ ದಿನನಿತ್ಯದ ಸಾಮಗ್ರಿಗಳನ್ನು ಪೂರೈಸುತ್ತಿದ್ದು.
ಮಣಿಪಾಲ , ಉಡುಪಿ , ಕಾಪು ಹೀಗೆ ಅನೇಕ ಕಡೆಗಳಲ್ಲಿ ಹಸಿವು ಅಂದವರಿಗೆ ಆಹಾರ ನೀಡುತ್ತಿದ್ದೆ. ಕೊರೋನಾ ಎಮರ್ಜೆನ್ಸಿ ಹಿನ್ನೆಲೆ ಲಯನ್ ಕ್ಲಬ್ 317C ಮಣಿಪಾಲದ ಹೊಸ ಬೆಳಕು ಆಶ್ರಮಕ್ಕೆ ದಿನ ನಿತ್ಯದ ಅಗತ್ಯ ಸಾಮಗ್ರಿಗಳನ್ನು ನೀಡಿದರು. ಅಕ್ಕಿ ,ಬೇಳೆ, ಮೆಣಸು ಹೀಗೆ ಆಶ್ರಮದ ಅಗತ್ಯತೆಗೆ ಅನುಗುಣವಾಗಿ ಪೂರೈಸಲಾಯಿತು. ಈ ಸಂದರ್ಭದಲ್ಲಿ ಲಯನ್ಸ್ 317 C ಜಿಲ್ಲಾ ಗವರ್ನರ್ ಆಗಿರುವ ಲಯನ್ ವಿ ಜೆ ಶೆಟ್ಟಿ, PMJF ,ಲಯನ್ ಮಹಮ್ಮದ್ ಹನೀಫ್, ರಾಧಾಕೃಷ್ಣ ಮೆಂಡನ್ , ಲಯನ್ ಹರಿಪ್ರಸಾದ್ ರೈ,ಲಯನ್ ಮಹಮ್ಮದ್ ಮೌಲಾ , ಗಿರೀಶ್ , ಲಿಯೋ ಅಧ್ಯಕ್ಷ ಫೌಜನ್ ಅಕ್ರಮ್ ,ಹೊಸ ಬೆಳಕು ಆಶ್ರಮದ ಟ್ರಸ್ಟಿ ತನುಲಾ ತರುಣ್, ವಿನಯ ಚಂದ್ರ ಸಾಸ್ತಾನ ಉಪಸ್ಥಿತರಿದ್ದರು.