ಉಡುಪಿ: ಲಯನ್ಸ್ ಕ್ಲಬ್ ನಿಂದ ಪ್ರಧಾನ ಮಂತ್ರಿ ಪರಿಹಾರ ನಿಧಿಗೆ 4ಲಕ್ಷ ರೂಪಾಯಿ ದೇಣಿಗೆ ಹಸ್ತಾಂತರ
ಉಡುಪಿ:ಕೋರೋನ ವೈರಸ್ ಎಂಬ ಈ ಮಹಾಮಾರಿ ದೇಶಾದ್ಯಂತ ವ್ಯಾಪಕವಾಗಿ ಹರಡಿದ್ದು ಮನುಕುಲಕ್ಕೆ ಸಂಕಷ್ಟವನ್ನು ಉಂಟುಮಾಡಿದೆ. ಈ ನಿಟ್ಟಿನಲ್ಲಿ ಲಯನ್ಸ್ ಜಿಲ್ಲೆ 317ಸಿ ಮತ್ತು ಲಯನ್ಸ್ ಜಿಲ್ಲೆ 317ಸಿಯ ಲಯನ್ಸ್ ಕ್ಲಬ್‌ಗಳ ಹಾಗೂ ಲಯನ್ಸ್ ಸದಸ್ಯರಿಂದ ಸಂಗ್ರಹಿಸಿದ ಕೋರೋನ ವೈರಸ್ ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ದೇಣಿಗೆಯಾಗಿ 4ಲಕ್ಷ ರೂಪಾಯಿ ಚೆಕ್ಕನ್ನು ಲಯನ್ಸ್ ಜಿಲ್ಲಾಗವರ್ನರ್ ಲ. ವಿ. ಜಿ. ಶೆಟ್ಟಿ ಪಿಎಂಜೆಎಫ್‌ಯವರ ಜಿಲ್ಲಾಧಿಕಾರಿ ಜಿ. ಜಗದೀಶ್ ಇವರಿಗೆ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ದ್ವಿತೀಯ ಉಪ ಜಿಲ್ಲಾ ಗರ್ವನರ್ ಲ| ವಿಶ್ವನಾಥ್ ಶೆಟ್ಟಿ, ಮಾಜಿ ಜಿಲ್ಲಾ ಗರ್ವನರ್‌ಗಳಾದ ಲ| ಸುರೇಶ್ ಶೆಟ್ಟಿ, ಲ| ಜಯಕರ ಶೆಟ್ಟಿ ಇಂದ್ರಾಳಿ, ಲ| ಸುರೇಶ್ ಪ್ರಭು, ಜಿಲ್ಲಾ ಸಂಪುಟ ಕಾರ್ಯದರ್ಶಿ ಲ| ಜಾರ್ಜ್ ಸಾಮ್ಯುವೆಲ್, ಲ| ಮೊಹಮದ್ ಹನೀಫ್, ಲ| ಮೊಹಮದ್ ಮೌಲಾ, ಲಿಯೋ ಫೌಜನ್ ಅಕ್ರಮ್, ಲ| ವಿಶಾಲ್ ವಿಶ್ವನಾಥ ಶೆಟ್ಟಿ ಇವರು ಉಪಸ್ಥಿತರಿದ್ದರು.