ಉಡುಪಿ : ಮಾ. 22ರಂದು ಉದ್ಯಾವರದಲ್ಲಿ ‘ಕ್ರಾಸ್ಟೊಸ್ ಭಾಂಗ್ರಾಳಿ ಕೊಗುಳ್ 2020’
ಉಡುಪಿ : ಸುವರ್ಣ ಮಹೋತ್ಸವದ ಸಂಭ್ರಮದಲ್ಲಿರುವ ಉದ್ಯಾವರ ಸಂತ ಫ್ರಾನ್ಸಿಸ್ ಝೇವಿಯರ್ ದೇವಾಲಯ ವ್ಯಾಪ್ತಿಯ, ಭಾರತೀಯ ಕಥೋಲಿಕ್ ಯುವ ಸಂಚಲನದ (ಐಸಿವೈಎಂ) ನೇತೃತ್ವದಲ್ಲಿ ಉಡುಪಿ ಮಂಗಳೂರು ಧರ್ಮಪ್ರಾಂತ್ಯದ ಸಂಗೀತ ಸ್ಪರ್ಧೆಯ ಗ್ರ್ಯಾಂಡ್ ಫಿನಾಲೆ ‘ಕ್ರಾಸ್ಟೊಸ್ ಭಾಂಗ್ರಾಳಿ ಕೊಗುಳ್ 2020’ ನಡೆಯಲಿದೆ ಎಂದು ಐಸಿವೈಎಂ ಉದ್ಯಾವರ ಸುವರ್ಣ ಮಹೋತ್ಸವದ ಪ್ರಕಟಣೆ ತಿಳಿಸಿದೆ.
ಸುವರ್ಣ ಮಹೋತ್ಸವ ಸಮಿತಿಯ ಪ್ರಮುಖ ಕಾರ್ಯಕ್ರಮವಾದ ಸಂಗೀತ ಸ್ಪರ್ಧೆಯ ಅರ್ಹತಾ ಸುತ್ತು ಮಾರ್ಚ್ 8 ರಂದು ಬೆಳಿಗ್ಗೆ 9.30 ರಿಂದ ಮಂಗಳೂರು ಮತ್ತು ಉಡುಪಿಯಲ್ಲಿ ನಡೆಯಲಿದೆ. ಅರ್ಹತಾ ಸುತ್ತಿಗೆ ಹೆಸರು ನೋಂದಾಯಿಸಲು ಕೊನೆಯ ತಾರೀಖು ಮಾರ್ಚ್ 5. ಕಥೋಲಿಕ ಕ್ರೈಸ್ತರಿಗೆ ಮಾತ್ರ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿರುವುದರಿಂದ, ಹೆಸರು ನೋಂದಾಯಿಸಿದವರು ಸುವರ್ಣ ಮಹೋತ್ಸವ ಸಮಿತಿಯ ಸಂಚಾಲಕ ಸ್ಟೀವನ್ ಕುಲಾಸೊ ಮತ್ತು ಸಹ ಸಂಚಾಲಕಿ ರೋಸಾಲಿಯಾ ಕರ್ಡೊಜರವರಲ್ಲಿ ಹೆಸರು ನೋಂದಾಯಿಸಲು ಅವಕಾಶವಿದೆ ಎಂದು ಪ್ರಕಟಣೆ ತಿಳಿಸಿದೆ.
ಸುವರ್ಣ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ನಾರ್ಬಟ್ ಕ್ರಾಸ್ಟೊ ಮತ್ತು ಕುಟುಂಬಸ್ಥರು ಪ್ರಧಾನ ಪ್ರಾಯೋಜಕತ್ವ ಮಾಡಿರುವ ‘ಕ್ರಾಸ್ಟೊಸ್ ಭಾಂಗ್ರಾಳಿ ಕೊಗುಳ್ 2020’ ಗ್ರ್ಯಾಂಡ್ ಫಿನಾಲೆ ಮಾರ್ಚ್ 22 ರಂದು ಉದ್ಯಾವರ ಸಂತ ಫ್ರಾನ್ಸಿಸ್ ಝೇವಿಯರ್ ದೇವಾಲಯದ ವಠಾರದಲ್ಲಿ ಸಂಜೆ ನಡೆಯಲಿದೆ. ಅರ್ಹತಾ ಸುತ್ತಿನಲ್ಲಿ ಮಂಗಳೂರು ಧರ್ಮಕ್ಷೇತ್ರದ ವ್ಯಾಪ್ತಿಯಲ್ಲಿ ಐದು ಮತ್ತು ಉಡುಪಿ ಧರ್ಮಪ್ರಾಂತ್ಯದ ವ್ಯಾಪ್ತಿಯಲ್ಲಿ ಐದು ಮಂದಿಯನ್ನು ಗ್ರ್ಯಾಂಡ್ ಫಿನಾಲೆಗೆ ಆಯ್ಕೆ ಮಾಡಲಾಗುತ್ತದೆ ಎಂದು ಸುವರ್ಣ ಮಹೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.
1971ರಲ್ಲಿ ಆರಂಭವಾಗಿರುವ ಐಸಿವೈಎಂ ಉದ್ಯಾವರ ಘಟಕವು ಪ್ರಸ್ತುತ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದೆ. ಜನವರಿ ರಂದು ಮಾಜಿ ರಾಜ್ಯಪಾಲೆ ಮಾರ್ಗರೆಟ್ ಆಳ್ವಾ ಸುವರ್ಣ ಮಹೋತ್ಸವ ಸಮಾರಂಭವನ್ನು ಉದ್ಘಾಟಿಸಿದ್ದು, ಒಂದು ವರ್ಷದ ಅವಧಿಯಲ್ಲಿ ಐವತ್ತು ಕಾರ್ಯಕ್ರಮಗಳನ್ನು ಈ ಸಂಘಟನೆ ಆಯೋಜಿಸಿದೆ. ಮಾತ್ರವಲ್ಲದೆ ಈಗಾಗಲೇ ಹತ್ತು ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದಿದೆ.
“ಉಡುಪಿ ಟೈಮ್ಸ್” ಮಾಧ್ಯಮ ‘ಕ್ರಾಸ್ಟೊಸ್ ಭಾಂಗ್ರಾಳಿ ಕೊಗುಳ್ 2020’ ಕಾರ್ಯಕ್ರಮದ ಮೀಡಿಯಾ ಪಾರ್ಟನರ್ ಆಗಿ ಸಹಕರಿಸಲಿದೆ.